ಕೋಲಾರ

ಧಾರ್ಮಿಕ ಸಮಾರಂಭ ಇಂದು

Published On :

ಹುಳಿಯಾರು: ಪಟ್ಟಣದ ಆರ್ಯವೈಶ್ಯ ಮಂಡಳಿ ಹಾಗೂ ವಾಸವಿ ಕುಂಭಾಭಿಷೇಕ ಸಮಿತಿಯಿಂದ ಶ್ರೀವಾಸವಿ 108 ಕುಂಭಾಭಿಷೇಕ ಕಾರ್ಯದ ಅಂಗವಾಗಿ ಜೂ.9ರಂದು ಧಾರ್ಮಿಕ ಸಮಾರಂಭ ನಡೆಯಲಿದೆ. ರಾಜ್ಯ ಅರ್ಯವೈಶ್ಯ ಮಹಾಸಭೆಯ ಅಧ್ಯಕ್ಷ ಪಿ. ರವಿಶಂಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹೋಬಳಿ ಅಧ್ಯಕ್ಷ ಬಿ.ಆರ್. ರಂಗನಾಥ್ ಅಧ್ಯಕ್ಷತೆವಹಿಸುವರು. ಗೌರವಾಧ್ಯಕ್ಷ ಟಿ.ಆರ್. ಶ್ರೀನಿವಾಸಶೆಟ್ಟಿಮತ್ತಿತರರು ಆಗಮಿಸಲಿದ್ದಾರೆ. ಇದೇ ದಿನ ಬೆಳಿಗ್ಗೆ 6ರಿಂದ ನಡೆಮುಡಿಯೊಂದಿಗೆ ಗಂಗಾ ಭಾಗೀರಥಿ ಪೂಜೆ, ಗುರುಗಣಪತಿ ದೇವತಾ ಪ್ರಾರ್ಥನೆ ನಡೆಯಲಿದೆ.

ಲಾಭದಲ್ಲಿ ಹುಳಿಯಾರುಟೌನ್ ಬ್ಯಾಂಕ್

ಹುಳಿಯಾರು: ಪಟ್ಟಣದ ಟೌನ್ ಕೋ ಆಪರೇಟಿವ್ ಬ್ಯಾಂಕ್ನ ವ್ಯವಸ್ಥಾಪಕ ಮಹಲಿಂಗಪ್ಪನವರ ಅವಧಿಯಲ್ಲಿ ಬ್ಯಾಂಕ್ ಅಭಿವೃದ್ಧಿಯತ್ತ ದಾಪುಗಾಲಿಟ್ಟಿದ್ದು ಲಾಭಾದಲ್ಲಿ ಮುನ್ನಡೆದಿದೆ ಎಂದು ಶಿರಾ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಶಿವಕುಮಾರಸ್ವಾಮಿ ಪ್ರಶಂಸಿಸಿದರು.
ಇಲ್ಲಿನ  ದಿ ಟೌನ್ ಕೋ-ಅಪರೇಟೀವ್ ಬ್ಯಾಂಕ್ ಹುಳಿಯಾರು ಶಾಖೆಯಲ್ಲಿ ಕಳೆದ 9 ವರ್ಷಗಳಿಂದ ಶಾಖಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಎಸ್.ಮಹಾಲಿಂಗಪ್ಪ ಅವರಿಗೆ ಬ್ಯಾಂಕ್ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು.
ಶುದ್ಧ ಹಸ್ತರಾಗಿ, ನಿಸ್ವಾರ್ಥ ಸೇವೆಸಲ್ಲಿಸಿದ ಅವರು ತಮ್ಮ ಅವಧಿಯಲ್ಲಿ  ಹುಳಿಯಾರು ಶಾಖೆಯಲ್ಲಿ ಹೆಚ್ಚು ವಹಿವಾಟು ನಡೆಸುವ ಮೂಲಕ ಸಾಕಷ್ಟು ಲಾಭಾಂಶ ತಂದು ಕೊಟ್ಟಿದ್ದರು ಎಂದರು.
ನಲವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅವರು ಹುಳಿಯಾರು ಶಾಖೆಯಲ್ಲಿ ಹತ್ತು ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದು ಸಂಬಳಕ್ಕೋಸ್ಕರ ಕೆಲಸ ಮಾಡದೆ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡವರು ಎಂದು ಹುಳಿಯಾರು ಶಾಖಾಧ್ಯಕ್ಷ ಜಯನಾರಾಯಣ ತಿಳಿಸಿದರು. ಸನ್ಮಾನ ಸ್ವೀಕರಿಸಿದ ಮಹಲಿಂಗಪ್ಪ ಮಾತನಾಡಿ, ಉಳಿತಾಯ ಠೇವಣಿ, ನಿಶ್ಚಿತ ಠೇವಣಿ, ಚಾಲ್ತಿ ಠೇವಣಿಯಲ್ಲಿ ಪ್ರಗತಿ ಸಾಧಿಸಿದ್ದು, ಗುರಿಮೀರಿ ಸಂಗ್ರಹಿಸಿದ್ದು, ತಮ್ಮ ಅವಧಿಯಲ್ಲಿ ಉತ್ತಮ ಸೇವೆಗಳಿಸಿದ  ತೃಪ್ತಿಯಿದೆ ಎಂದರು. ಗ್ರಾಹಕರ ಪರವಾಗಿ ರೈತಸಂಘದ ಸತೀಶ್, ಏಜೆಂಟ್ ಲೋಕೇಶ್, ವರ್ತಕ ಬಾಲಾಜಿ, ಶಿಕ್ಷಕ ಬಸವಮೂರ್ತಿ, ಮಾಜಿ ಚೇರ್ಮನ್ ವೆಂಕಟಾಚಲಪತಿ ಶೆಟ್ಟಿ ಮಾತನಾಡಿದರು. ಈ ಸಂಧರ್ಭದಲ್ಲಿ ಬ್ಯಾಂಕ್ ನಿರ್ದೇಶಕ ಕೋದಂಡರಾಮಪ್ಪ, ರಾಘವೇಂದ್ರ, ವ್ಯವಸ್ಥಾಪಕ ಕುಮಾರ್ ಸ್ವಾಮಿ ಸೇರಿದಂತೆ ಹುಳಿಯಾರು ಶಾಖೆಯ ರಾಮಚಂದ್ರಪ್ಪ, ಸೌಭಾಗ್ಯಮ್ಮ, ರವಿಕುಮಾರ್, ಲಕ್ಷ್ಮಿನಾರಾಯಣ್ , ಸಿದ್ರಾಮಯ್ಯ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.