ಕೋಲಾರ

ಧರಣಿ ಇಂದು

Published On :

ತುಮಕೂರು: ಕೇಂದ್ರ ಸರ್ಕಾರ ಕನಿಷ್ಟ ಪಿಂಚಣಿ  1ಸಾವಿರ ರು. ಸಂಬಂಧ ಅಂತಿಮ ಅಧಿಸೂಚನೆ ಆದೇಶ ಹೊರಡಿಸದ ಕ್ರಮ ವಿರೋಧಿಸಿ, ಕೂಡಲೇ ಅಂತಿಮ ಅಧಿಸೂಚನೆಗೆ ಒತ್ತಾಯಿಸಿ ಎಲ್ಲಾ ಪಿಎಫ್ ಪಿಂಚಣಿದಾರರಿಗೆ ಬೆಲೆ ಏರಿಕೆ ಸೂಚ್ಯಂಕದ ಆಧಾರದಲ್ಲಿ ತುಟ್ಟಿಭತ್ಯೆ ಜಾರಿಗೊಳಿಸಲು ಆಗ್ರಹಿಸಿ ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜೂ.9 ರಂದು ಶೆಟ್ಟಿಹಳ್ಳಿ ಗೇಟ್ ಬಳಿ ಇರುವ ಭವಿಷ್ಯ ನಿಧಿ ಪ್ರಾದೇಶಿಕ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ. ನಗರದ ಟೌನ್ ಹಾಲ್ವೃತ್ತದಲ್ಲಿ ಬೆಳಿಗ್ಗೆ 10.30 ಕ್ಕೆ ಮೆರವಣಿಗೆ ಮುಖಾಂತರ ಪ್ರಾದೇಶಿಕ ಕಚೇರಿವೆಗೆ ತೆರಳಿ ಧರಣಿ ಹಮ್ಮಿಕೊಂಡಿದೆ. ಧರಣಿಗೆ ಜಿಲ್ಲೆಯ ಎಲ್ಲಾ ಪಿಂಚಣಿದಾರರು ಹಾಗೂ ಪಿಎಫ್ ಒಳಗೊಳ್ಳದೆ ಇರುವ ಎಲ್ಲಾ ಕಾರ್ಮಿಕರು ಭಾಗವಹಿಸಿ ಯಶಸ್ವಿಗೊಳಿಸಲು ಸಿಐಟಿಯು ಜಿಲ್ಲಾ ಸಮಿತಿ ವಿನಂತಿಸಿದೆ.
ಲಾಠಿ ಹಿಡಿಯುವರು
ಗುದ್ದಲಿ ಹಿಡಿದರು!
ಕುಣಿಗಲ್: ಲಾಠಿ ಹಿಡಿಯುವ ಕೈಯಲ್ಲಿ ಗುದ್ದಲಿ ಹಿಡಿದು ಗಿಡ ನೆಡುವ ಮೂಲಕ ಕುಣಿಗಲ್ ಪೊಲೀಸರು ಪರಿಸರ ಕಾಳಜಿ ಮೆರೆದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು. ಶನಿವಾರ ಡಿವೈಎಸ್ಪಿ ಗಣೇಶ್ ನೇತೃತ್ವದಲ್ಲಿ ಕುಣಿಗಲ್ ಠಾಣೆಯ ಸಿಬ್ಬಂದಿ ವಸತಿಗೃಹ, ಶಾಲಾ ಮೈದಾನ ಹಾಗೂ ಪಟ್ಟಣದ ಮಾವಿನಕಟ್ಟೆ ಪಾಳ್ಯದ ಇಲಾಖೆ ವಸತಿ ಗೃಹ ನಿವೇಶನದಲ್ಲಿ ನೂರಾರು ಗಿಡಗಳನ್ನು ನೆಟ್ಟರು. ಕಾರ್ಯಕ್ರಮದಲ್ಲಿ ಸಿಬ್ಬಂದಿಯ ಕುಟುಂಬದವರೂ ಪಾಲ್ಗೊಂಡು ಸಸಿಗಳನ್ನು ಪೋಷಿಸುವ ಜವಾಬ್ದಾರಿ ಹೊತ್ತರು. ಮತ್ತೆ ಕೆಲವರು ನೆಟ್ಟಿರುವ ಸಸಿಗಳ ದತ್ತು ಪಡೆದು ಪೋಷಿಸುವ ಹೊಣೆ ಹೊತ್ತು ಪರಿಸರ ಕಾಳಜಿ ಮೆರೆದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಡಿವೈಎಸ್ಪಿ ಗಣೇಶ್, ಎಲ್ಲಾ ಧರ್ಮಗಳೂ ಪ್ರಕೃತಿಯಲ್ಲಿ ಭಗವಂತನನ್ನು ಕಾಣುವುದಾಗಿ ಸಾರಿವೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕಾದ್ದು ನಮ್ಮೆಲ್ಲರ ಆದ್ಯೆ ಕರ್ತವ್ಯವಾಗಬೇಕಿದೆ ಎಂದರು. ವೃತ್ತ ನಿರೀಕ್ಷಕ ಧರ್ಮೇಂದ್ರ, ಎಎಸೈ ಗಳಾದ ಗಂಗಾಧರ, ಕುಮಾರಿ, ಸಿಬ್ಬಂದಿಯಾದ ಸುರೇಶ್, ಪ್ರವೀಣ್, ಕಲ್ಲಣ್ಣ, ವರ್ತಕರ ಪತ್ತಿನ ಸಂಘದ ಅಧ್ಯಕ್ಷ ಎಸ್ಟಿಡಿ ಶ್ರೀನಿವಾಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.