ಸ್ಥಳೀಯ ಯೋಜನಾ ಪ್ರಾಧಿಕಾರ ರಚನೆ
ಗೌರಿಬಿದನೂರು: ವೇಗವಾಗಿ ಬೆಳೆಯುತ್ತಿರುವ ಪಟ್ಟಣವನ್ನು ಸರ್ಕಾರ ಸ್ಥಳೀಯ ಯೋಜನಾ ಪ್ರಾಧಿಕಾರವನ್ನಾಗಿ ಪರಿವರ್ತಿಸಿ ಆದೇಶ ಹೊರಡಿಸಿದೆ ಎಂದು ವಿಧಾಸಭಾ ಉಪಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು.
ಇದರಿಂದ ಗೌರಿಬಿದನೂರು ನಗರ ಯೋಜನಾ ಪ್ರಾಧಿಕಾರವಾಗಿದ್ದು, ಕಲ್ಲೂಡಿ, ನಾಗಯ್ಯರೆಡ್ಡಿ ಬಡಾವಣೆ, ಗುಂಡಾಪುರ, ಹಿರೇಬಿದನೂರು, ಆನಂದಪುರ ಪಟ್ಟಣ ವ್ಯಾಪ್ತಿಗೆ ಒಳಪಟ್ಟಿದೆ ಎಂದರು.
ಪಟ್ಟಣದ ಪ್ರಸ್ಥುತ ಜನಸಂಖ್ಯೆ 39ಸಾವಿರ ಇದ್ದು, ಇದಕ್ಕೆ 25ಸಾವಿರ ಸೇರ್ಪಡೆಯಾಗಲಿದೆ. ಇದರಿಂದ ಪಟ್ಟಣದ ಜನಸಂಖ್ಯೆ 64 ಸಾವಿರ ಆಗಲಿದ್ದು ಸುಮಾರು 10ಸಾವಿರ ಎಕರೆ ನಗರ ಯೋಜನಾ ಪ್ರಾಧಿಕಾರಕ್ಕೆ ಒಳಪಡಲಿದೆ ಎಂದರು.
ಪಟ್ಟಣದ ಎಚ್.ಎನ್. ಕಲಾಭವನಕ್ಕೆ ಕಾಂಪೌಂಡ್ ನಿರ್ಮಾಣಕ್ಕೆ ಜಿಲ್ಲಾ ವಿಶೇಷ ಅಭಿವೃದ್ಧಿ ನಿಧಿಯಿಂದ ಸುಮಾರು ರು. 25ಲಕ್ಷ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ನಗರಕ್ಕೆ ರಿಂಗ್ ರೋಡ್ ಅವಶ್ಯವಿದ್ದು ಇದಕ್ಕೆ ಸರ್ಕಾರ ಸಮಗ್ರ ಯೋಜನಾ ವರದಿ ತಯಾರಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ಸೂಚಿಸಿದೆ. ಇನ್ನರ್ ರಿಂಗ್ ರೋಡನ್ನು ಮುಂದಿನ 50ವರ್ಷಗಳಲ್ಲಿ ಪಟ್ಟಣ ಆಗಬಹುದಾದ ಅಭಿವೃದ್ಧಿ ಗಮನದಲ್ಲಿರಿಸಿಕೊಂಡು ಪಟ್ಟಣದಿಂದ 1ಕಿ.ಮೀ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಅನ್ವಯವಾಗುವಂತೆ ಯೋಜನೆ 3ತಿಂಗಳಲ್ಲಿ ತಯಾರಾಗಲಿದ್ದು, ಅದರ ಡಿಪಿಆರ್ಗೆ ತಕ್ಕಂತೆ ವೆಚ್ಚ ನಿರ್ಧರಿಸಲಾಗುವುದು ಎಂದರು.
ರಸ್ತೆ ಅಗಲೀಕರಣ: ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಪುರಸಭೆ. ಲೋಕೋಪಯೋಗಿ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ವರದಿ ಕೇಳಿದೆ. ವರದಿ ಬಂದ ನಂತರ 1960-62ರಲ್ಲಿ ಭೂಗಡಿ ಗುರ್ತಿಸಲಾಗಿದ್ದು, ಅದರ ಪ್ರಕಾರ ರಾಜ್ಯ ಹೆದ್ದಾರಿಗೆ ಸುಮಾರು 30ಮೀಟರ್ ರಸ್ತೆ ವಿಸ್ತರಿಸಬೇಕು ಎಂದರು.
ಹಿರೇಬಿದನೂರು ಕ್ರೀಡಾಂಗಣ: ಹಿರೇಬಿದನೂರು ಕ್ರೀಡಾಂಗಣವನ್ನು ಸುಮಾರು ರು. 1.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಮಹಿಳೆಯರಿಗಾಗಿ ವಿವಿಧ ಕ್ರೀಡೆಗಳಿಗೆ ಅನುಕೂಲವಾಗುವಂತೆ ಕ್ರೀಡಾಂಗಣ ನಿರ್ಮಿಸುವ ಉದ್ದೇಶವಿದ್ದು, ಒಳಾಂಗಣ ಮಾಡಿಸಲು ಯೋಜನೆ ರೂಪಿಸಲಾಗುತ್ತಿದೆ. ಇದಕ್ಕೆ ರು. 4ಕೋಟಿ ವೆಚ್ಚದ ಅಂದಾಜಿದೆ ಎಂದರು. ಗೋಷ್ಠಿಯಲ್ಲಿ ಪುರಸಭಾಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷ ಚಿದಾನಂದಗುಪ್ತ, ಸದಸ್ಯರಾದ, ಬಾಲಾಜಿ, ಕಲ್ಪನಾರಮೇಶ್, ವೇದಲವೇಣಿ ವೇಣು, ಮುನಿರಾಜು, ಲೀಲಾವತಮ್ಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

