ವರ್ತೂರು ರೈತರಾದ್ರಣ್ಣ!
ಕೋಲಾರ: ರಾಜಕೀಯ ಕೃಷಿಯಲ್ಲಿ ಯಶಸ್ವಿಯಾಗಿರುವ ಕೋಲಾರ ಶಾಸಕ ವರ್ತೂರ್ ಪ್ರಕಾಶ್ ಕಳೆದ ಒಂದು ವರ್ಷದಿಂದಿಚೆಗೆ ಪ್ರಗತಿ ಪರ ರೈತನಾಗಲು ಶ್ರಮಿಸುತ್ತಿದ್ದಾರೆ.
ಕೋಲಾರ ತಾಲೂಕಿನ ಬೆಗ್ಲಿಹೊಸಹಳ್ಳಿಯಲ್ಲಿ ಸುಮಾರು 100 ಎಕರೆ ಬಂಜರು ಭೂಮಿಯನ್ನು ಕೃಷಿ ವಲಯವಾಗಿಸಿ ಅಲೂಗಡ್ಡೆ ಜೊತೆಗೆ ತರಕಾರಿ, ಹಣ್ಣು ಬೆಳೆಯಲು ತಯಾರಿ ನಡೆಸಿದ್ದಾರೆ.
ಕೃಷಿ ವಿವಿ ಮಾದರಿಯಲ್ಲಿ ನೀರಿನ ಮಿತ ಬಳಕೆಯೊಂದಿಗೆ ವೈಜ್ಞಾನಿಕ, ವೈವಿಧ್ಯಮಯ ಹಾಗೂ ಲಾಭದಾಯಕ ಬೇಸಾಯ ಪದ್ಧತಿಗಳನ್ನು ಜಿಲ್ಲೆಯ ರೈತರಿಗೆ ಪರಿಚಯಿಸುವ ಉದ್ದೇಶದಿಂದ ತಾವು ಕೃಷಿಕರಾಗಿ ಕೆಲಸ ಮಾಡುತ್ತಿರುವುದಾಗಿ ಶಾಸಕ ವರ್ತೂರು ಪ್ರಕಾಶ್ ತಿಳಿಸಿದ್ದಾರೆ.
ತಾಲೂಕಿನ ಬೆಗ್ಲಿ ಹೊಸಹಳ್ಳಿ ಸಮೀಪದ ತಮ್ಮ ತೋಟದಲ್ಲಿ ಆಧುನಿಕ ಬೇಸಾಯ, ಹೈನುಗಾರಿಕೆ, ಕೋಳಿ, ಕುರಿ ಸಾಕಾಣಿಕೆ ತಾಂತ್ರಿಕತೆಯಡಿ ಕೈಗೊಂಡಿರುವ ಚಟುವಟಿಕೆಗಳನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪರಿಚಯಿಸಿ ಅವರು ಮಾತನಾಡುತ್ತಿದ್ದರು.
ಹನಿ ನೀರಾವರಿ ಅಳವಡಿಕೆ ಮೂಲಕ ಒಂದು ಎಕರೆ ಪ್ರದೇಶದಲ್ಲಿ ಸುಮಾರು 300 ದಾಳಿಂಬೆ ಗಿಡ ನೆಟ್ಟು, 9 ಲಕ್ಷ ರು. ಆದಾಯ ಗಳಿಸಬಹುದಾಗಿದೆ ಎಂದು ತಿಳಿಸಿ ಜಿಲ್ಲೆಯ ರೈತರು ದಾಳಿಂಬೆ ಕೃಷಿಗೆ ಮುಂದಾಗಲು ಸಲಹೆ ನೀಡಿದರು.
ಹೈಟೆಕ್ ಡೈರಿ ಸ್ಥಾಪನೆ: ತಮ್ಮ 100 ಎಕರೆ ವಿಸ್ತೀರ್ಣವಿರುವ ತೋಟದಲ್ಲಿ ಉತ್ತಮ ತಳಿಯ 200 ಹಸುಗಳನ್ನು ಸಾಕಾಣೆ ಮಾಡಿ ಹೈಟೆಕ್ ಡೈರಿ ಸ್ಥಾಪನೆ ಮಾಡಲು ಸಿದ್ದತೆ ನಡೆದಿದೆ. ಒಂದು ಹಸು 50 ರಿಂದ 75 ಸಾವಿರ ಬೆಲೆಯದ್ದಾಗಿದ್ದು, ದಿನಕ್ಕೆ 5 ಸಾವಿರ ಲೀಟರ್ ಹಾಲು ಉತ್ಪಾದನೆ ಮಾಡುವ ಗುರಿ ಇದೆ ಎಂದರು. ಹಾಲನ್ನು ಇಲ್ಲೇ ಪ್ಯಾಕೆಟ್ಗಳಿಗೆ ತುಂಬಿ ಮಾರಾಟಕ್ಕೆ ವ್ಯವಸ್ಥೆ ಮಾಡಲು ಚಿಂತನೆ ನಡೆಸಿರುವುದಾಗಿಯೂ ಶಾಸಕರು ವಿವರಿಸಿದರು. ಹೂವಿನ ಕೃಷಿ, ದಾಳಿಂಬೆ, ಹೈಟೆಕ್ ಹೈನುಗಾರಿಕೆ,
ಹೈಟೆಕೆ ಕೋಳಿ, ಕುರಿ ಸಾಕಾಣಿಕೆಯನ್ನು ಪ್ರತ್ಯಕ್ಷವಾಗಿ ಜಿಲ್ಲೆಯ ರೈತರು ನೋಡಿ ತಮ್ಮಲ್ಲಿಯೂ ಅಳವಡಿಸಿಕೊಳ್ಳಲು ಯತ್ನಿಸಬಹುದೆಂದರು. ತಮ್ಮ ಆಧುನಿಕ ಕೃಷಿಯಲ್ಲಿ 100ಮಂದಿಗೆ ನಿರಂತರವಾಗಿ ಉದ್ಯೋಗ ನೀಡುತ್ತಿದ್ದೇನೆ ಎಂದರು. ತಾವು :ತ್ರಕೋಡಿಹಳ್ಳಿ ಮುನೇಗೌಡರಂತೆ ಬಡ್ಡಿ ವ್ಯಾಪಾರಿಯೂ ಅಲ್ಲ, ಮಾಜಿ ಸಚಿವ ಶ್ರೀನಿವಾಸಗೌಡರಂತೆ ಬೆಳ್ಳಂಬರಿ ಜಮೀನುದಾರರನ್ನು ವಂಚಿಸಿ ಭೂಮಿ ಕಬಳಿಸಿಯೂ ಇಲ್ಲ ಎಂದು ಸ್ವಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

