ಕೋಲಾರ

ಸೋಲಾರ್ ದೀಪ ವಿತರಣೆ

Published On :

ಶಿಡ್ಲಘಟ್ಟ: ಪ್ರತಿ ವ್ಯಕ್ತಿಯೂ ಕೂಡಾ ಮರಗಳನ್ನು ಬೆಳಸಿ ಪರಿಸರವನ್ನು ಸಂರಕ್ಷಿಸಬೇಕಾದಂತಹ ಅನಿವಾರ್ಯತೆ ಇದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು. ತಾಲೂಕಿನ ವರದನಾಯಕನಹಳ್ಳಿ ಬಳಿಯಿರುವ ಅರಣ್ಯ ಇಲಾಖೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಜನಾಂಗಕ್ಕೆ ಸುಮಾರು 7 ಲಕ್ಷ ವೆಚ್ಚದಲ್ಲಿ ಸೋಲಾರ್ ದೀಪ ವಿತರಿಸಿ ಮಾತನಾಡಿದರು. ಪ್ರತಿ ಕುಟುಂಬ ಎರಡು ಮರಗಳನ್ನು ಬೆಳೆಸಬೆಕು. ಸಸಿಗಳನ್ನು ಬೆಳೆಸಲು ರೈತರಿಗೆ ಸರಕಾರದಿಂದಲೇ ಹಣವನ್ನು ನೀಡಲಾಗುತ್ತಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. 80 ಫಲಾನುಭವಿಗಳಿಗೆ ಸೋಲಾರ್ ದೀಪ ವಿತರಿಸಲಾಯಿತು. ಸುಬ್ಬರಾವ್, ಬಂಕ್ ಮುನಿಯಪ್ಪ, ಅಪ್ಸರಾ ಪಾಷಾ, ಚೊಕ್ಕನಹಳ್ಳಿ ಮೂರ್ತಿ, ಮುನಿವೆಂಕಟಸ್ವಾಮಿ, ವೀರಾಪುರ ಮುನಿರೆಡ್ಡಿ, ಚಂದ್ರಶೇಖರ್ ಸೇರಿ ಅನೇಕರಿದ್ದರು.

ಸಿಪಿಎಂ ಬೆಂಬಲಿಸಿ
ಶಿಡ್ಲಘಟ್ಟ: ಆಗ್ನೇಯ ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ಸಿಪಿಐಎಂನಿಂದ ಸ್ಪರ್ಧಿಸಿರುವ ಅಭ್ಯರ್ಥಿಗೆ ಹೆಚ್ಚು ಮತಗಳನ್ನು ನೀಡುವಂತೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಮನವಿ ಮಾಡಿದರು. ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈವರೆಗೂ ಆಡಳಿತವನ್ನು ನಡೆಸಿದ ಯಾವುದೇ ಸರ್ಕಾರಗಳು ನಿರುದ್ಯೋಗಿ ಪದವೀಧರರ ಮುಂದಿನ ಮುಂದಿನ ಭವಿಷ್ಯಗಳ ಬಗ್ಗೆ ಚಿಂತಿಸಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ನಿರುದ್ಯೋಗಿ ಪದವೀಧರರ ಬಗ್ಗೆ ಸರ್ಕಾರದ ಮುಂದೆ ದ್ವನಿ ಎತ್ತುವಂತಹ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾಗಿದೆ. ಸಿಪಿಐ ಅಂಥ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಮತ ನೀಡಬೇಕು ಎಂದು ಕೋರಿದರು. ಅಭ್ಯರ್ಥಿ ಫಯಾಜ ಉಲ್ಲಾ, ಮುನಿವೆಂಕಟಪ್ಪ, ಗೋಪಿನಾಥ್, ಕುಂದಲಗುಕರ್ ಮುನೀಂದ್ರ, ಮುಂತಾದವರು ಹಾಜರಿದ್ದರು.



ಅಧಿಕಾರಿಗಳ ವಿರುದ್ಧ ಶಾಸಕರು ಗರಂ


ಚಿಂತಾಮಣಿ: ಅಧಿಕಾರಿಗಳು ಜನ ಸಾಮಾನ್ಯರಿಗೆ ಸರ್ಕಾರದಿಂದ ದೊರೆಯುವ ಸೌಲತ್ತುಗಳ ಬಗ್ಗೆ ಅರಿವು ಮೂಡಿಸದೆ ಕಾಲ ಹರಣ ಮಾಡುತ್ತಿದ್ದಾರೆ ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಆರೋಪಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ಗೌರಮ್ಮ ನಾಗೇಶ್ ಹಾಗೂ ಉಪಾಧ್ಯಕ್ಷ ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಸ್ಕೂಲ್ ಸುಬ್ಬರೆಡ್ಡಿ, ಹಾದಿಗೆರೆ ಚೌಡರೆಡ್ಡಿ, ರೆಡ್ಡೆಪ್ಪ ಸೇರಿ ಅನೇಕ ಸದಸ್ಯರು, ಕೃಷಿ ಸಹಾಯಕ ಅಧಿಕಾರಿ ನಹೀಂ ಪಾಷ ಹಾಗೂ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರಿ ಸೇರಿದಂತೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ತಾಲೂಕಿನಲ್ಲಿ ರೈತರು ಬರ ಪರಿಸ್ಥಿತಿ ಎದುರಿಸುತ್ತಿದ್ದರೂ ಸ್ಥಳೀಯ ಈ ಅಧಿಕಾರಿಗಳು ಯಾವುದೇ ರೀತೀಯ ಕೆಲಸ ಮಾಡುತ್ತಿಲ್ಲ. ಮಾಹಿತಿ ಕೇಳಿದರೂ ನೀಡುತ್ತಿಲ್ಲ ಎಂದು ಆರೋಪಿಸಿದರು.
ಈ ವೇಳೆ, ತಾಪಂ  ಸದಸ್ಯರಾದ ಸುಲ್ತಾನ್ ಷರೀಫ್, ಶೇಖರ್ ಬಾಬು, ಊಲವಾಡಿ ಸುಬ್ರಮಣಿ, ತಳಗವಾರ ಕೃಷ್ಣಪ್ಪ ಸೇರಿದಂತೆ ಇನ್ನೂ ಹಲವು ಸದಸ್ಯರು ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.