ಕೋಲಾರ

ತೆರಿಗೆ ಸಂಗ್ರಹಕ್ಕೆ ಆದ್ಯತೆ

Published On :

ಮುಳಬಾಗಲು: ಪುರಸಭೆಯ 2014-15ನೇ ಸಾಲಿಗೆ 25 ಕೋಟಿ ರುಪಾಯಿ ಬಜೆಟ್ ಮಂಡಿಸಲಾಯಿತು. ನಿರೀಕ್ಷಿತ ಆದಾಯ 20ಕೋಟಿ 59 ಲಕ್ಷ 800 ರುಪಾಯಿ ಗುರಿ ಹೊಂದಲಾಗಿದೆ.
 2009-10ನೇ ಸಾಲಿನ ಎಸ್‌ಎಫ್ಸಿ ಅನುದಾನದಲ್ಲಿ ಎಸ್ಸಿ, ಎಸ್ಟಿ ಕಾಲೋನಿಯಲ್ಲಿ ಸಮುದಾಯ ಭವನ ಕಾಮಗಾರಿಗೆ ಮೀಸಲಿಟ್ಟಿರುವ 9.99 ಲಕ್ಷ ರುಪಾಯಿಗೆ ನಿವೇಶನ ಲಭ್ಯವಿಲ್ಲದ ಕಾರಣ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಹಣ ಪರಭಾರೆ ಮಾಡಲು ಅನುಮೋದನೆ ನೀಡಲಾಯಿತು. ಪೊಲೀಸು ಠಾಣೆ ಪಕ್ಕದಲ್ಲಿರುವ ರಸ್ತೆಯಿಂದ ಸ್ಮಶಾನದವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಾಯಿತು.
ಕ್ರಮಕ್ಕೆ ಆಗ್ರಹ: ಎಂಸಿ ರಸ್ತೆಯಲ್ಲಿರುವ ಐಡಿಎಸ್‌ಎಂಟಿ ಅಂಗಡಿಗಳ ದುರಸ್ತಿ ಮಾಡಿ ಮರುಹರಾಜು, ನೇತಾಜಿ ನಗರದ ಮಾಂಸದ ಅಂಗಡಿ ಮಾರುಕಟ್ಟೆ ಮುಂಭಾಗದಲ್ಲಿರುವ ಅಂಗಡಿಗಳ ಮರುಹರಾಜು ಪಟ್ಟಣದಲ್ಲಿ ತ್ರಿಚಕ್ರವಾಹನ ನಿಲ್ದಾಣ ಶುಲ್ಕ ವಸೂಲಿ, ನೀರು ಸರಬರಾಜು ಶಾಖೆಯಲ್ಲಿ ಮೆಕಾನಿಕ್‌ಗಳ ಸಂಬಳ ಪಾವತಿ ಹಾಗೂ ಸಿಬ್ಬಂದಿ ನೇಮಕ ಕರ್ತವ್ಯಕ್ಕೆ ಹಾಜರಾಗದವರ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.
ಸದಸ್ಯರ ದೂರು, ಪದಗೆಟ್ಟ ರಸ್ತೆ ಬೀದಿ ದೀಪ ನಿರ್ವಾಹಣೆ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ 2ನೇ ವಾರ್ಡಿನ ಸದಸ್ಯೆ ಸುಭದ್ರಮ್ಮ, 14ನೇ ವಾರ್ಡಿನ ಸದಸ್ಯೆ ಹಮಿದಾಬೀ ಮನವಿ ಮಾಡಿದರು.
ನೀರು ಸರಬರಾಜಿಲ್ಲ: ಸಪಳ್ಳಿಗರಪಾಳ್ಯ, ಅಗ್ರಹಾರ, ಸೋಮೇಶ್ವರಪಾಳ್ಯ, ವಿಠಲೇಶಪಾಳ್ಯ, ಕುಂಬಾರಪಾಳ್ಯ, ಮತ್ತಿತರ ವಾರ್ಡ್‌ಗಳಲ್ಲಿ ಓವರ್ ಹೆಡ್ ಟ್ಯಾಂಕ್ ನೀರು ಸರಬರಾಜು ಆಗುತ್ತಿಲ್ಲ ಎಂದು 21 ನೇ ವಾರ್ಡ್‌ನ ಶಂಕರಪ್ಪ, 25 ನೇ ವಾರ್ಡ್‌ನ ಎಸ್. ಗಿರಿಜಾವಾಸು, ಕೆ.ಸಿ. ದೀನಾ, ಎನ್. ರಾಧಿಕಾ ರಾಜಶೇಖರ್ ದೂರಿದರು.
ನಾಮಿನಿ ಸದಸ್ಯರಾದ ಆಂಜನೇಯ ರೆಡ್ಡಿ, ಮೆಕಾನಿಕ್ ಶ್ರೀನಿವಾಸ್, ಎಂ.ಎಸ್. ನಾರಾಯಣ ಸ್ವಾಮಿ, ಬಲ್ಲಂ ಶ್ರೀನಿವಾಸ್, ಮಹಮದ್ ಸಮೀಉಲ್ಲಾ ಸಭೆಯಲ್ಲಿ ಭಾಗವಹಿಸಿದ್ದರು. ಅವರನ್ನು ಹಾರ್ದಿಕವಾಗಿ ಸ್ವಾಗತಿಸಲಾಯಿತು. ಶಾಸಕ ಕೊತ್ತೂರು ಮಂಜುನಾಥ್ ಸಮ್ಮುಖದಲ್ಲಿ ಆಯೋಜಿಸಿದ್ದ ಆಯವ್ಯಯ ಮಂಡನೆ ಸಭೆಯ ಅಧ್ಯಕ್ಷತೆಯನ್ನು  ಪುರಸಭೆ ಅಧ್ಯಕ್ಷೆ ಶಾಹೀನ್ ತಾಜ್ ವಹಿಸಿದ್ದರು. ಉಪಾಧ್ಯಕ್ಷೆ ಬಿ.ಎಸ್. ದಿವ್ಯಶ್ರೀ, ಪುರಸಭೆ ಮುಖ್ಯಾಧಿಕಾರಿ ಅಶೋಕ್ ಕುಮಾರ್, ಸದಸ್ಯರಾದ ಠಾಕೂರ್ ಸಿಂಗ್, ಎನ್. ಸತೀಶ್ ಕುಮಾರ್, ಜಿ. ನಾಗರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.