ಕೋಲಾರ

ಕಳಪೆ ಕಾಮಗಾರಿ ನಿಲ್ಲಿಸಿ

Published On :

ಮಾಲೂರು: ಸರ್ಕಾರಿ ಕಾಮಗಾರಿಗಳನ್ನು ಸಾರ್ವಜನಿಕರೇ ಮುಂದೆ ನಿಂತು ಪರಿಶೀಲಿಸುವ ಮೂಲಕ ಕಾಮಗಾರಿಯ ಗುಣಮಟ್ಟ ಕಾಪಾಡಬೇಕು ಎಂದು ಶಾಸಕ ಮಂಜುನಾಥ್ ಗೌಡ ಹೇಳಿದರು.  ಅವರು ತಾಲೂಕಿನ ದೊಡ್ಡಶಿವಾರ ಗೇಟ್ ಬಳಿ ನರ್ಬಾಡ್ ಯೋಜನೆಯಡಿ 90 ಲಕ್ಷ ರು.ಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಸ್ತೆ ಕಾಮಗಾರಿಗೆ ಶನಿವಾರದಂದು ಚಾಲನೆ ನೀಡಿ ಮಾತನಾಡಿ, ಗುತ್ತಿಗೆದಾರರು ಕಾಮಗಾರಿ ಪಡೆಯುವ ಸಲುವಾಗಿ ಅತಿ ಕಡಿಮೆ ದರ ನಮೂದಿಸಿ ಕಾಮಗಾರಿ ಪಡೆಯುತ್ತಿದ್ದಾರೆ. ಇದರಿಂದ ಕಾಮಗಾರಿಯ ಗುಣಮಟ್ಟ ಕಡಿಮೆಯಾಗಬಹುದು. ಈ ಬಗ್ಗೆ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು. ಕಾಮಗಾರಿಯಲ್ಲಿ ಕಳಪೆ ಕಂಡು ಬಂದಲ್ಲಿ ಕೆಲಸವನ್ನು ನಿಲ್ಲಿಸಿ, ಉತ್ತಮ ಕಾಮಗಾರಿ ನಡೆಯವರಗೆ ಬಿಡಬೇಡಿ ಎಂದರು.  ಜಿಲ್ಲಾ ಕಾರ್ಯಪಾಲಕ ಅಭಿಯಂತರ ಮುನಿ ಆಂಜಿನಪ್ಪ ಮಾತನಾಡಿ, ನಬಾರ್ಡ್ ಯೋಜನೆಯಡಿ 4.5 ಕಿ.ಮೀ.ರಸ್ತೆಗೆ ಡಾಂಬರೀಕರಣ ಕಾಮಗಾರಿ ಪ್ರಾರಂಭಿಸಲಾಗಿದೆ. ಗುಣಮಟ್ಟದಲ್ಲಿ ರಾಜಿಯಾಗದಂತೆ ಕಾಮಗಾರಿಯನ್ನು ಇಲಾಖೆಯ ವೀಕ್ಷಣೆಯಲ್ಲಿ ನಡೆಸಲಾಗುವುದು ಎಂದರು.
 ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಬಸವರಾಜು,ಅಭಿಯಂತರ ಧನಂಜಯ, ರಾಜಗೋಪಾಲ್, ಜಿ.ಪಂ.ಸದಸ್ಯ ರಾಮಸ್ವಾಮಿ ರೆಡ್ಡಿ, ತಾ.ಪಂ.ಅಧ್ಯಕ್ಷ ಕೃಷ್ಣಪ್ಪ, ಸದಸ್ಯೆ ಪಾರ್ವತಮ್ಮ ಸ್ವಾಮಿ,ಚೌಡರೆಡ್ಡಿ, ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ಶಾಲಾ ಸಮಿತಿ ಅಧ್ಯಕ್ಷ ಚಂದ್ರಾರೆಡ್ಡಿ, ಎಸ್.ಎನ್.ರಘುನಾಥ್, ಪಾಪಾರೆಡ್ಡಿ, ಶ್ರೀನಾಥ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣರೆಡ್ಡಿ, ಶಿವಣ್ಣ,ರಾಜಣ್ಣ,ಶ್ರೀನಿವಾಸ್, ಹೇಮಾರೆಡ್ಡಿ, ಕರವೇ ಅಧ್ಯಕ್ಷ ರಾಮಕೃಷ್ಣಪ್ಪ, ಮುನೇಂದ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.