ಮೂಲ ಸಮಸ್ಯೆ ಪರಿಹರಿಸಿ
ಗೌರಿಬಿದನೂರು: ದಲಿತರ ವಿವಿಧ ಬೇಡಿಕೆ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ತಹಸೀಲ್ದಾರ್ ಡಾ.ಎನ್. ಭಾಸ್ಕರ್ ತಿಳಿಸಿದರು.
ತಾಲೂಕು ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿಯ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಕಂದಾಯ ಇಲಾಖೆ ಹಾಗೂ ತಾಪಂನಿಂದ ಆಗಬೇಕಾದ ನಿವೇಶನಗಳ ಸಮಸ್ಯೆ ಸರ್ವೆ ಅಧಿಕಾರಿಗಳು, ಪಿಡಿಒ, ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳಿಂದ ಸ್ಥಳ ತನಿಖೆ ನಡೆಸಿ ಶಾಶ್ವತ ಪರಿಹಾರ ಕೈಗೊಳ್ಳಲಾವುಗುದು. ಪಹಣಿ, ತಿದ್ದುಪಡಿ, ಪವತಿ ಖಾತೆಗಳನ್ನು 28ರಂದು ತಾಲೂಕಿನಾದ್ಯಂತ ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ನಡೆಯುವ ಕಂದಾಯ ಅದಾಲತ್ನಲ್ಲಿ ಸ್ಥಳದಲ್ಲಿಯೇ ಬಗೆಹರಿಸಲಾಗುವುದು ಎಂದರು.
ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಇಡಗೂರು ನರಸಿಂಹಮೂರ್ತಿ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಲು ಹಾಗೂ ಶಸ್ತ್ರಚಿಕಿತ್ಸೆಗೆ ವೈದ್ಯರು ಹಣ ಕೇಳುತ್ತಾರೆ. ಪ್ರತಿ ಹೆರಿಗೆಗೂ ಬಡವರು ಹಣ ನೀಡಬೇಕು ಇದಕ್ಕೆ ಕಡಿವಾಣಹಾಕಿ ಎಂದರು.
ತಾಲೂಕಿನಾದ್ಯಂತ ಇರುವ ದಲಿತರಿಗೆ ನಿವೇಶನ ನೀಡುತ್ತೇವೆ ಎಂದು ಸರ್ಕಾರ ಹೇಳುತ್ತಿದ್ದರೂ ಇನ್ನೂ ಸಿಕ್ಕಿಲ್ಲ, ಕೆಲವೆಡೆ ಹಕ್ಕುಪತ್ರ ನೀಡಿದ್ದರೂ ಅದು ಕಾನೂನು ಬದ್ಧವಾಗಿಲ್ಲ ಎಂಬ ಬಗ್ಗೆ ಉತ್ತರಿಸಿದ ಇಒ ರೆಡ್ಡಪ್ಪ ಮಾತನಾಡಿ, ಈ ಬಗ್ಗೆ ಉಪವಿಭಾಗಾಧಿಕಾರಿಗಳಿಂದ ಆದೇಶವಾಗಿರುವ ಪತ್ರದ ನಕಲುಗಾಗಿ ಪತ್ರ ಬರೆಯಲಾಗಿತ್ತು. ಆದೇಶವಾಗಿರುವ ಕಡತ ಅಲ್ಲಿಯೂ ಇಲ್ಲ ಎಂದು ಹಿಂಬರಹ ನೀಡಲಾಗಿದೆ. ತಾಲೂಕು ಕಚೇರಿಯಲ್ಲಿಯೂ ಇಲ್ಲ ತಾಪಂ ಕಚೇರಿಯಲ್ಲೂ ಈ ಬಗ್ಗೆ ದಾಖಲೆಗಳಿಲ್ಲವಾದ್ದರಿಂದ ಇದಕ್ಕೆ ಬದಲಿ ವ್ಯವಸ್ಥೆಗೆ ಚಿಂತನೆ ನಡೆಸಲಾಗುವುದು ಎಂದರು.
ತಾಲೂಕಿನ ಎಲ್ಲಾ ಹಳ್ಳಿಗಳ ಪ್ರತಿ ಅಂಗಡಿಗಳಲ್ಲಿಯೂ ಮದ್ಯಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳಿ ಎಂಬ ದಲಿತ ಮುಖಂಡರ ಆಗ್ರಹಕ್ಕೆ ಉತ್ತರಿಸಿದ ತಹಸೀಲ್ದಾರ್ ಇದನ್ನು ತಡೆಯಲು ವಿಚಕ್ಷಣಾ ದಳ ರೂಪಿಸಲಾಗುವುದು ಎಂದರು. ಹುದುಗೂರು ನಂಜುಂಡಪ್ಪ, ಮೇಳ್ಯ ಅಂಜಿ, ಚಿಕ್ಕಹನುಮೇನಹಳ್ಳಿವೆಂಕಟೇಶ್, ಉಪ್ಪರಹಳ್ಳಿ ಗಂಗಣ್ಣ, ಕುದುರೆಬ್ಯಾಲ್ಯ ನರಸಿಂಹಮೂರ್ತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

