ಕೋಲಾರ

ಕಂಪ್ಯೂಟರ್ ಸೆಂಟರ್‌ನಲ್ಲಿ ಸ್ಫೋಟ

Published On :

ಕೋಲಾರ: ನಗರದ ಎಸ್ಪಿ ಮನೆ ಸಮೀಪದ ನೇಸರ ಕಂಪ್ಯೂಟರ್ ಸೆಂಟರ್‌ನಲ್ಲಿ ಯುಪಿಎಸ್‌ಗೆ ಬಳಸುವ ಬ್ಯಾಟರಿಗಳಿಗೆ ಡಿಸ್ಟಿಲರಿ ವಾಟರ್ ಬದಲು ಸ್ವೀರಿಟ್ ಸುರಿದ ಪರಿಣಾಮ ಬ್ಯಾಟರಿಗಳು ಸ್ಫೋಟಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ.  ಕಂಪ್ಯೂಟರ್ ಸೆಂಟರಿನ ಮಾಲೀಕನಿಗೆ ಗಾಯವಾಗಿದ್ದು ಗಾಬರಿಯಿಂದ ಓಡಿ ಹೋಗಿದ್ದಾರೆ. ವಿಷಯ ತಿಳಿದ ಆಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬ್ಯಾಟರಿಯಿಂದ ಹೊರ ಹೊಮ್ಮುತ್ತಿದ್ದ ವಿಷದ ಗಾಳಿಯನ್ನು ನಿಯಂತ್ರಿಸಲು ಹರ ಸಾಹಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆಗ್ನಿ ಶಾಮಕ ದಳದ ಅಧಿಕಾರಿಯೊಬ್ಬರೂ ಅಸ್ವಸ್ಥ್ಥಗೊಂಡಿದ್ದಾರೆ. ಗಲ್‌ಪೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಮಹಿಳೆ ಆತ್ಮಹತ್ಯೆ
ಚಿಂತಾಮಣಿ: ಗೃಹಿಣಿಯೊಬ್ಬಳು ಹೊಟ್ಟೆನೋವು ತಾಳಲಾರದೆ ವಿಷಪೂರಿತ ಔಷಧ ಸೇವಿಸಿ ಮೃತಪಟ್ಟಿದ್ದಾಳೆ ಎಂದು ಪೋಲೀಸರು ತಿಳಿಸಿದ್ದಾರೆ. ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಂಡವೆನಕಪಲ್ಲಿ ಗ್ರಾಮದ ನಿವಾಸಿ ಗೌರಮ್ಮ(38) ಮೃತಪಟ್ಟಾಕೆ. ಕಳೆದ ಹಲವು ದಿನಗಳಿಂದ ಹೊಟ್ಟೆ ನೋವು ತಾಳಲಾರದೆ ವಿಷಪೂರಿತ ಕ್ರಿಮಿನಾಷಕ ಔಷಧ ಸೇವಿಸಿದ ಪರಿಣಾಮ ಸಾವು ನೋವಿನಿಂದ ನರಳುತ್ತಿದ್ದ ಈಕೆಯನ್ನು ತಕ್ಷಣ ಕೋಲಾರ ಆಸ್ಪತ್ರೆ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ಸೈನೇಡ್ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ಕೆಜಿಎಫ್: ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಕೆಜಿಎಫ್‌ನಲ್ಲಿ ಸೈನೇಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ರಾಜಾಜೀನಗರದ ಎ.ಬ್ಲಾಕ್ ನಿವಾಸಿ ಶಿವಶಂಕರ್(32) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.  ಕಳೆದ ಬುಧವಾರ ರಾತ್ರಿ ಬೆಂಗಳೂರಿನಿಂದ ರೈಲಿನಲ್ಲಿ ಬಂಗಾರಪೇಟೆಗೆ ಬಂದಿಳಿದು ಅಲ್ಲಿಂದ ಬಸ್‌ನಲ್ಲಿ ಕೆಜಿಎಫ್‌ಗೆ ಬಂದು ಉರಿಗಾಂ ರೈಲ್ವೆ ರಸ್ತೆಯಲ್ಲಿರುವ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮದ್ಯವನ್ನು ಸೇವಿಸಿ ಕುಡಿದ ಅಮಲಿನಲ್ಲಿ ಸೈನೇಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ. ಗುರುವಾರ ಮದ್ಯಾಹ್ನ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ರಾಬರ್ಟ್‌ಸನ್‌ಪೇಟೆ ಠಾಣಾ ಪಿಎಸ್‌ಐ ರಂಗಶಾಮಯ್ಯ ಭೇಟಿ ನೀಡಿ ಪರಿಶೀಲಿಸಿ ಮರಣೋತ್ತರ ಪರಿಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ನಂತರ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.