ಕೋಲಾರ

ಸಮರ್ಪಕ ಅನುದಾನ ಬಳಕೆ ಅಗತ್ಯ

Published On :

ಶಿಡ್ಲಘಟ್ಟ: ಸರ್ಕಾರದಿಂದ ಬಿಡುಗಡೆಯಾಗುವಂತಹ ಅನುದಾನಗಳು ಸಮರ್ಪಕವಾಗಿ ಬಳಕೆಯಾಗಬೇಕಾದರೆ ಅಧಿಕಾರಿಗಳಲ್ಲಿ ಬದ್ಧತೆ ಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಸರ್ಕಾರದಿಂದ ತಾಲೂಕಿನ ಅಭಿವೃದ್ಧಿಗಾಗಿ ಬಿಡುಗಡೆಯಾಗುತ್ತಿರುವ ಅನುದಾನಗಳ ಸಮರ್ಪಕವಾಗಿ ಬಳಕೆಯಾಗಬೇಕು ಎಂದರು.
ತಾಲೂಕಿನಲ್ಲಿ ಅವಶ್ಯವಾಗಿರುವ ಅಂಗನವಾಡಿ ಕಟ್ಟಡ ನಿರ್ಮಾಣಕ್ಕಾಗಿ ನರೇಗಾ ಯೋಜನೆಯಲ್ಲಿ 8ಲಕ್ಷ ಹಾಗೂ ಇಲಾಖೆಯಿಂದ ಬಿಡುಗಡೆಯಾಗಿರುವ 04 ಲಕ್ಷ ಸೇರಿ ಒಟ್ಟು 12 ಲಕ್ಷ ರುಪಾಯಿಗಳನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಅನುದಾನ  ಉಪಯೋಗಿಸಿಕೊಂಡು ಕಟ್ಟಡಗಳ ನಿರ್ಮಾಣ ಮಾಡಲು ಟೆಂಡರ್ ಕರೆದು ಕಾಮಗಾರಿಗಳನ್ನು ಪ್ರಾರಂಭ ಮಾಡುವಂತೆ ತಾಪಂ ಸದಸ್ಯ ಗಂಜಿಗುಂಟೆ ನರಸಿಂಹಮೂರ್ತಿ ಸಲಹೆ ನೀಡಿದರು.
ಶಾಸಕ ರಾಜಣ್ಣ, ತಾಪಂ ಅಧ್ಯಕ್ಷ ಯರಬಚ್ಚಪ್ಪ, ಉಪಾಧ್ಯಕ್ಷೆ ಸರಸ್ವತಮ್ಮ, ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಜಿ.ಪಂ. ಎಇಇ ಗಣಪತಿ ಎಸ್ ಸಾಕರೆ, ಸದಸ್ಯರಾದ ರಾಜಣ್ಣ, ನರಸಿಂಹಮೂರ್ತಿ, ವೆಂಕಟೇಶ್, ಶ್ರೀನಾಥ್, ವೇಣುಗೋಪಾಲ್, ನಾರಾಯಣಸ್ವಾಮಿ, ಚನ್ನಕೃಷ್ಣ, ದ್ಯಾವಮ್ಮ, ಶಶಿಕಲಾ, ಮುನಿವೆಂಕಟಮ್ಮ, ರಾಧಿಕಾ, ನೇತ್ರಾವತಿ, ನಾರಾಯಣಮ್ಮ, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ವಿಕಲಚೇತನರ ಅನುದಾನ
ತಾಲೂಕು ಪಂಚಾಯ್ತಿಗೆ ಬಿಡುಗಡೆಯಾಗುತ್ತಿರುವ ಅನುದಾನಗಳಲ್ಲಿ ಮೀಸಲಾಗಿರುವ ಶೇ. 3ರಷ್ಟು ಅನುದಾನ ಇದುವರೆಗೂ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ತಾಲೂಕಿನಲ್ಲಿರುವ ವಿಕಲಚೇತನರ ಪಟ್ಟಿ ತಯಾರಿಸಬೇಕು. ಅವರಿಗೆ ಅಗತ್ಯವಾಗಿರುವ ಸಾಧನಗಳನ್ನು ವಿತರಿಸಬೇಕು. ಸಂಬಂಧಪಟ್ಟ ಅಧಿಕಾರಿಗಳ ವಿಫಲತೆಯಿಂದಾಗಿ 9.45 ಲಕ್ಷ ಅನುದಾನ ಉಳಿದಿದೆ. ಆದ್ದರಿಂದ ಮುಂದಿನ ಹದಿನೈದು ದಿನಗಳಲ್ಲಿ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ, ಟೆಂಡರ್ ಕರೆದು ಅನುದಾನ ಉಪಯೋಗಿಸಿಕೊಳ್ಳುವಂತೆ ಸಭೆಯಲ್ಲಿ ತೀರ್ಮಾನ ಮಾಡಿದರು.
ಆರೋಗ್ಯ ಇಲಾಖೆ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಕಾಡುತ್ತಿದೆ. ಆಡಳಿತ ವೈದ್ಯಾಧಿಕಾರಿ ಡಾ. ಅಮರೇಶ ಗದ್ದಿ ವರ್ಗಾವಣೆಯಾಗಿದ್ದಾರೆ. ಮತ್ತೊಬ್ಬ ವೈದ್ಯ ರಮೇಶ್ ವಲಯದಿಂೆದ ಹೊರಹೋಗಿದ್ದಾರೆ. ಇರುವ ನಾಲ್ಕು ವೈದ್ಯರುಗಳಿಂದ ನಿರ್ವಹಣೆ ಮಾಡಲಾಗುತ್ತಿದೆ ಎಂದು ಆರೋಗ್ಯಾಧಿಕಾರಿ ಡಾ. ಅನಿಲ್ ಕುಮಾರ್ ವಿವರಿಸಿದರು.
ಸಮಾಜ ಕಲ್ಯಾಣ
ತಾಲೂಕಿನಲ್ಲಿ ಇಲಾಖೆಯ ಮುಖಾಂತರ ನಡೆಯುತ್ತಿರುವ ವಿಧ್ಯಾರ್ಥಿ ನಿಲಯಗಳಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. 7 ಮಂದಿ ಮೇಲ್ವಿಚಾರಕರಿಗೆ ಕೇವಲ 3 ಮಂದಿಯಿಂದ ನಿಲಯಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಸಿಬ್ಬಂದಿ ಕೊರತೆ ನಿವಾರಣೆ ಅಗತ್ಯ. ಸಿಬ್ಬಂದಿ ಇದ್ದರೆ ಎಲ್ಲ ಸಮಸ್ಯೆಯೂ ಬಗೆಹರಿಯುತ್ತದೆ ಎಂದು ಇಲಾಖೆಯ ಅಧಿಕಾರಿ ಜಯಪ್ರಕಾಶ್ ತಿಳಿಸಿದರು.
ತೋಟಗಾರಿಕಾ
ಇಲಾಖೆಯಲ್ಲಿ ಎನ್‌ಎಚ್‌ಎಂ ಪ್ರದೇಶಾಭಿವೃದ್ಧಿ ಯೋಜನೆಯನ್ನು ಕಡಿತಗೊಳಿಸಲಾಗಿದೆ. ಸುಮಾರು ರು. 40 ಲಕ್ಷಕ್ಕೆ ಅಂದಾಜು ಪಟ್ಟಿ ತಯಾರಿಸಲಾಗಿದೆ. ಮುಂದಿನ ದಿನಗಳಲ್ಲಿ ಎಷ್ಟು ಅನುದಾನ ಬರುಬಹುದು ಎಂಬುದನ್ನು ಕಾದು ನೋಡಬೇಕಾಗಿದೆ. ಲಭ್ಯ ಅನುದಾನದ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಲಾಗುವುದು ಎಂದು ಸಹಾಯಕ ನಿರ್ದೇಶಕ ರಮೇಶ್ ಹೇಳಿದರು.
ಕೃಷಿ ಇಲಾಖೆ
ತಾಲೂಕು ಪಂಚಾಯ್ತಿ ಕೇವಲ 40 ಸಾವಿರ ಅನುದಾನ ನೀಡಿದ್ದಾರೆ. ಅದಕ್ಕೆ ಕ್ರಿಯಾಯೋಜನೆ ತಯಾರಿಸಬೇಕಾಗಿದೆ. ಎಸ್‌ಸಿಪಿ ಯೋಜನೆಯಲ್ಲಿ 60 ಸಾವಿರ ಅನುದಾನ ಲಭ್ಯವಿದೆ. ಸದಸ್ಯರು ಪಟ್ಟಿ ನೀಡಿದರೆ ಗುಣಮಟ್ಟದ 55 ಕೃಷಿ ಪೆಟ್ಟಿಗೆಗಳನ್ನು ಖರೀದಿಸಬಹುದಾಗಿದೆ ಎಂದು ಸಹಾಯಕ ನಿರ್ದೇಶಕ ರಾಘವೇಂದ್ರ ತಿಳಿಸಿದರು.  
ರೇಷ್ಮೆ ಇಲಾಖೆ
ಇಲಾಖೆಯಿಂದ ಗೂಡು ಬೆಳೆಯುವಂತಹ ರೈತರಿಗೆ ಪ್ರತಿ ಕೆ.ಜಿಗೆ 10 ರೂಪಾಯಿ ಮಿಶ್ರತಳಿ ಗೂಡಿಗೆ 40 ರೂಪಾಯಿಯಂತೆ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಗಟರ್ಟ್ರ್ಸೇ ಈಗಾಗಲೇ ವಿತರಣೆ ಮಾಡಲಾಗಿದೆ, ಪರಿಶಿಷ್ಟ ಜಾತಿ, ಪಂಗಡದ ಜನಾಂಗಕ್ಕೆ ಬಂದಿದ್ದ ಸೌಲಭ್ಯಗಳನ್ನು ಶೇ 100 ರಷ್ಟು ವಿತರಣೆ ಮಾಡಲಾಗಿದ್ದು ಈಗ ಗೂಡುಗಳ ಸಹಾಯಧನಕ್ಕಾಗಿ ಏಪ್ರಿಲ್ 2013 ರಿಂದ ಬಾಕಿ ಉಳಿದಿದ್ದ ಹಣ  40 ಲಕ್ಷ ಬಿಡುಗಡೆಯಾಗಿದ್ದು, ರೈತರಿಗೆ ತಲುಪಿಸಲಾಗುತ್ತಿದೆ ಎಂದರು ಕೃಷಿ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ ತಿಳಿಸಿದರು.
ತಾಲೂಕು ಪಂಚಾಯ್ತಿ
ತಾಪಂಗೆ ಬಂದಿರುವ ಅನುದಾನಗಳಲ್ಲಿ ಶೇ. 22.75, ಶೇ. 3ರಷ್ಟು ಹಣವನ್ನು ಪ್ರತ್ಯೇಕಿಸಿದ ನಂತರ ಉಳಿದ ಹಣದಲ್ಲಿ ಶೇ.20 ರಷ್ಟು ಹಣಕ್ಕೆ ಮಾತ್ರ ರಸ್ತೆಗಳ ಅಭಿವೃದ್ಧಿಗಾಗಿ ಕ್ರೀಯಾಯೋಜನೆ ತಯಾರಿಸಬೇಕಾಗಿದೆ ಎಂದು ಇ.ಓ.ಉಮೇಶ್ ಪ್ರಸ್ತಾಪ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.