ಕಂಟೈನರ್ಗೆ ಬೀಳದ ಕಸ
ಚಿಂತಾಮಣಿ: ನಗರದ 27ನೇ ವಾರ್ಡಿಗೆ ಸೇರಿದ ಶಾಂತಿನಗರದಲ್ಲಿ ಹೊಸದಾಗಿ ನಿರ್ಮಿಸಿರುವ ವರ್ತುಲ ರಸ್ತೆ (ರಿಂಗ್ ರೋಡ್) ಸಮೀಪ ಕಸ ಸಂಗ್ರಹಣೆಗಾಗಿ ಕಂಟೈನರ್ ಇಟ್ಟಿದ್ದರೂ ಪ್ರಯೋಜನವಿಲ್ಲವಾಗಿದೆ.
ಕಂಟೈನರ್ ಕಸದ ತಿಪ್ಪೆಯ ಮೇಲೆ ಇಟ್ಟಿದ್ದು ಕಂಟೈನರ್ನಲ್ಲಿರುವ ಕಸವನ್ನು ಮಾತ್ರ ತೆಗೆದುಕೊಂಡು ಹೋಗುತ್ತಿದ್ದಾರೆಯೇ ಹೊರತು ತಿಪ್ಪೆಗುಂಡಿಯಲ್ಲಿರುವ ಕಸವನ್ನು ತೆಗೆಯದೆ ಹಾಗೆಯೇ ಬಿಟ್ಟಿರುವುದರಿಂದ ಈ ಕಸಕಡ್ಡಿಗಳು ಗಾಳಿಗೆ ಅಕ್ಕ ಪಕ್ಕದ ಮನೆಗಳನ್ನು ಸೇರುತ್ತಿವೆ. ಹಾಗೂ ಇಲ್ಲಿನ ಕೆಲವು ಮಂದಿ ತ್ಯಾಜ್ಯ ವಸ್ತುಗಳನ್ನು ತಿಪ್ಪೆಯಲ್ಲಿಯೇ ಹಾಕುತ್ತಿದ್ದಾರೆ. ಕೆಲವು ಮಕ್ಕಳು ಇಲ್ಲಿಯೇ ಬಹಿರ್ದೆಸೆಗೆ ಹೋಗುತ್ತಿದ್ದಾರೆ. ಇದರಿಂದಾಗಿ ಇಲ್ಲಿ ದುರ್ವಾಸನೆ ಉಂಟಾಗುವುದರ ಜೊತೆಗೆ ನೊಣ ಮತ್ತು ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ.
ಸ್ವಚ್ಛತೆ ಹಾಗೂ ನೈರ್ಮಲ್ಯದ ಬಗ್ಗೆ ಗಮನ ಹರಿಸಬೇಕಾದ ನಗರ ಸಭೆಯ ಸಿಬ್ಬಂದಿ ಇದನ್ನು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಚರಂಡಿ ಮತ್ತು ರಸ್ತೆಗಳಲ್ಲಿನ ಕಸವನ್ನು ತೆಗೆದುಕೊಂಡು ಹೋಗಲು ಟ್ರಾಕ್ಟರ್ನಲ್ಲಿ ಬರುವ ಪೌರಕಾರ್ಮಿಕರಿಗೆ ಈ ತಿಪ್ಪೆಯಲ್ಲಿನ ಕಸವನ್ನು ತೆಗೆಯುವಂತೆ ತಿಳಿಸಿದರೆ ಅದು ತಮಗೆ ಸಂಬಂಧವಿಲ್ಲ ಎನ್ನುತ್ತಾರೆ. ಆದರೆ ಕೆಲವರು ರಸ್ತೆಗಳಲ್ಲಿ ದನಕರುಗಳನ್ನು ಕಟ್ಟುತ್ತಿದ್ದು ಅಲ್ಲಿನ ಕಸವನ್ನು ಮಾತ್ರ ಎತ್ತಿಕೊಂಡು ಹೋಗುತ್ತಾರೆ. ಇನ್ನಾದರೂ ಗಾಢನಿದ್ರೆಯಲ್ಲಿರುವ ಅಧಿಕಾರಿಗಳಿಗೆ ಕೂಡಲೇ ಎಚ್ಚೆತ್ತುಕೊಂಡು ಬಡ ಜನರು ವಾಸಿಸುವ ಈ ಪ್ರದೇಶದಲ್ಲಿನ ಈ ತಿಪ್ಪೆಯಲ್ಲಿನ ಕಸವನ್ನು ಕೂಡಲೇ ತೆಗೆದು ಇಲ್ಲಿನ ಜನರ ಆರೋಗ್ಯ ರಕ್ಷಣೆಗೆ ಮುಂದಾಗಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹ ಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

