ಲೇಖಕ ಜಗನ್ನಾಥ ಪ್ರಕಾಶ್ಗೆ ಉತ್ತನೂರು ರಾಜಮ್ಮ ಪ್ರಶಸ್ತಿ
ಕೋಲಾರ: ಜಿಲ್ಲೆಯವರೇ ಆದ ಲೇಖಕ ಜಗನ್ನಾಥ ಪ್ರಕಾಶ್ ಅವರನ್ನು ನಾಡಿನ ಖ್ಯಾತ ಸಾಹಿತಿ ಉತ್ತನೂರು ರಾಜಮ್ಮ ಹೆಸರಿನಲ್ಲಿ ನೀಡಲ್ಪಡುವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜೆ.ಜಿ. ನಾಗರಾಜ್ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜೂ.12ರಂದು ಸಾಹಿತಿ ದಿ. ಉತ್ತನೂರು ರಾಜಮ್ಮ ಹುಟ್ಟು ಹಬ್ಬದ ನಗರದ ಪತ್ರಕರ್ತರ ಭವನದಲ್ಲಿ ರಾಜಮ್ಮನವರ ಸಮಗ್ರ ಪುಸ್ತಕಗಳ ಬಿಡುಗಡೆ ಹಾಗೂ ಉತ್ತನೂರು ರಾಜಮ್ಮ ಪ್ರಶಸ್ತಿಯ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಕಸಾಪ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಉತ್ತನೂರು ರಾಜಮ್ಮನವರ ಹುಟ್ಟು ಹಬ್ಬ ಆಚರಿಸಲು ನಿರ್ಧರಿಸಲಾಯಿತು.
ಇದೇ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮ ನಡೆಸುತ್ತಿದ್ದು ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಿರುವುದು ಪರಿಷತ್ತಿಗೆ ಹೆಮ್ಮೆ ವಿಷಯವಾಗಿದೆ ಎಂದಿದ್ದಾರೆ.
ಈ ಪ್ರಶಸ್ತಿ ಮೊತ್ತ 5000 ಗಳಾಗಿದ್ದು, ಪುರಸ್ಕೃತರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು, ಪ್ರಶಸ್ತಿಗೆ ಭಾಜನರಾಗುವವರು ರಾಜ್ಯ, ರಾಷ್ಟ್ರ ಅಥವಾ ಅತ್ಯುನ್ನತವಾದ ಪ್ರಶಸ್ತಿಗಳಿಂದ ದೂರ ಉಳಿದ ಸಾಹಿತಿಗಳಾಗಿರಬೇಕು. ಬೆಳಕಿಗೆ ಬಾರದ ಲೇಖಕರನ್ನು ಹುಡುಕಿ ಈ ಪ್ರಶಸ್ತಿಯನ್ನು ಕೊಡುವುದೆಂದು ಸಮಿತಿ ನಿರ್ಧರಿಸಿದ ಹಿನ್ನಲೆಯಲ್ಲಿ ಹಿರಿಯ ಲೇಖಕರಾದ ಕೋಲಾರದ ಜಗನ್ನಾಥ ಪ್ರಕಾಶ್ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಯ್ಕೆ ಸಮಿತಿಯಲ್ಲಿ ಅಧ್ಯಕ್ಷರಾಗಿ ಎನ್. ವಿಶ್ವನಾಥಶೆಟ್ಟಿ, ಸಂಚಾಲಕರಾಗಿ ಜೆ.ಜಿ. ನಾಗರಾಜ್, ಸದಸ್ಯರಾಗಿ ಪಿಚ್ಚಳ್ಳಿ ಶ್ರೀನಿವಾಸ್, ಗೋಪಾಲಗೌಡ ಕಲ್ವಮಂಜಲಿ, ಗೊಲ್ಲಹಳ್ಳಿ ಶಿವಪ್ರಸಾದ್, ಬಿ.ಎಸ್. ವೆಂಕಟಾಚಲಪತಿ, ಕೆ.ಎಸ್. ಗಣೇಶ್, ವಿ. ಗೀತಾ, ಮಂಜು ಕನ್ನಿಕಾ, ಸುಲೈಮಾನ್ಖಾನ್ ಹಾಗೂ ವಿನಯ್ ಗಂಗಾಪುರ ಇದ್ದರೆಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

