ನಾಳೆ ಅನಂತಯಾತ್ರಿ ಬಿಡುಗಡೆ
ಮೈಸೂರು: ಮಹಾರಾಜ ಕಾಲೇಜಿನ ವಾರ್ಷಿಕ ಸಂಚಿಕೆ ಅನಂತಯಾತ್ರಿಯನ್ನು ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಆ.7 ರಂದು ಬೆಳಗ್ಗೆ 11.30ಕ್ಕೆ ಜೂನಿಯ್ ಬಿ.ಎ ಹಾಲ್ನಲ್ಲಿ ನಡೆಯುವ ಸಮಾರಂಭದಲ್ಲಿ ಬಿಡುಗಡೆ ಮಾಡುವರು. ಪ್ರಭಾರ ಪ್ರಾಂಶುಪಾಲ ಡಾ.ವಸಂತ, ಆಡಳಿತಾಧಿಕಾರಿ ಡಾ. ಬಿ. ನಾಗರಾಜಮೂರ್ತಿ, ಸಂಪಾದಕ ಡಾ.ಎಸ್. ಶಿವರಾಜಪ್ಪ ಉಪಸ್ಥಿತರಿರುವರು.
ಸಾಂಸ್ಕೃತಿಕ ವೇದಿಕೆ ಉದ್ಘಾಟನೆ
ಮರಿಮಲ್ಲಪ್ಪ ಸಂಜೆ ಪದವಿ ಪೂರ್ವ ಕಾಲೇಜಿನ ಸಂಜೆ ಸಿರಿ ಸಾಂಸ್ಕೃತಿಕ ವೇದಿಕೆ ಉದ್ಘಾಟನಾ ಸಮಾರಂಭ ಆ.8 ರಂದು ಸಂಜೆ 6ಕ್ಕೆ ನಡೆಯಲಿದೆ. ಸಂಸ್ಥೆಯ ಅಧ್ಯಕ್ಷ ಎಸ್. ಪರಮಶಿವಯ್ಯ, ಗೌ.ಕಾರ್ಯದರ್ಶಿ ಪ್ರೊ. ಕೆ.ಎನ್. ಪಂಚಾಕ್ಷರಸ್ವಾಮಿ, ರಂಗಕರ್ಮಿ ಎಚ್. ಜನಾರ್ದನ್, ಪ್ರೊ.ಎಸ್. ಪ್ರಫುಲ್ಲಕುಮಾರ್, ಎಂ.ಈ. ಶಂಕರಪ್ಪ, ಎಸ್.ಎಂ. ರಾಜೇಶ್ವರಿ, ಜಿ. ಸಿದ್ದೇಶ್ವರ ಪ್ರಸಾದ್ ಭಾಗವಹಿಸುವರು.
ಕ್ಲರ್ಕ್ ಹುದ್ದೆಗೆ ತರಬೇತಿ
ಜೈನ್ಭವನದ ಬಳಿಯ ವಿದ್ಯಾಭವನ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದಲ್ಲಿ ಐಬಿಪಿಎಸ್ ಕ್ಲರಿಕಲ್ ಹಾಗೂ ಪ್ರೊಬೇಷನ್ ಅಧಿಕಾರಿ ಪರೀಕ್ಷೆಗಳಿಗೆ ತರಬೇತಿ ಆರಂಭಿಸುತ್ತಿದೆ. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಡಾ.ಎ.ಎನ್. ಸೋಮಶೇಖರ್, ಮೊ. 9448938469 ಸಂಪರ್ಕಿಸಬಹುದು. ಚಾಮರಾಜ ಮೊಹಲ್ಲಾದ ಕುಂಬಾರಗೇರಿಯ ನವೋದಯ ಫೌಂಡಶನ್ ವತಿಯಿಂದ ಐಬಿಪಿಎಸ್, ರಾಷ್ಟ್ರೀಕೃತ ಬ್ಯಾಂಕ್ಗಳ ಪ್ರೊಬೇಷನರಿ ಮತ್ತು ಕ್ಲರ್ಕ್ ಹುದ್ದೆಗೆ ಪ್ರತಿ ಶನಿವಾರ ಮತ್ತು ಭಾನುವಾರ ತರಬೇತಿ ಆಯೋಜಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9741869722 ಸಂಪರ್ಕಿಸಬಹುದು. ನೇತಾಜಿ ಎಜುಕೇಷನ್ ಫೌಂಡೇಷನ್ನಿಂದ ಪ್ರೊಬೆಷನರಿ ಆಫೀಸರ್ ಮತ್ತು ಕ್ಲರಿಕಲ್ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಎರಡು ತಿಂಗಳು ತರಬೇತಿ ಶಿಬಿರ ಪ್ರಾರಂಭಿಸಿದೆ. ಆಸಕ್ತರು ಮಾಹಿತಿಗಾಗಿ 9980639953 ಸಂಪರ್ಕಿಸಿ.
15ಕ್ಕೆ ಮಹಾಸಭೆ
ಎನ್.ಆರ್. ಮೊಹಲ್ಲಾದ ಕೃಷ್ಣರಾಜೇಂದ್ರ ಮಿಲ್ಸ್ ಸ್ಟಾಫ್ ಅಸೋಸಿಯೇಷನ್ನ 2013-14ನೇ ಸಾಲಿನ ವಾರ್ಷಿಕ ಸಭೆಯು ಆ.15ರ ಬೆಳಗ್ಗೆ 11ಕ್ಕೆ ನಡೆಯಲಿದೆ. ಎಲ್ಲಾ ಸದಸ್ಯರು ಸಭೆಗೆ ಹಾಜರಾಗುವಂತೆ ಕಾರ್ಯದರ್ಸಿ ಎಂ.ಎಸ್. ರಾಮಮೂರ್ತಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

