ಸಾಮೂಹಿಕ ವಿವಾಹ 25 ರಂದು
ಮೈಸೂರು: ಸುತ್ತೂರಿನಲ್ಲಿ ಆ. 25 ರಂದು ತಿಂಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆಸಕ್ತ ಕುಟುಂಬಗಳು ಸಾಮೂಹಿಕ ವಿವಾಹಕ್ಕೆ ಹೆಸರು ನೋಂದಾಯಿಸಿಕೊಳ್ಳಲು 10 ದಿನ ಮುಂಚಿತವಾಗಿ ಆಡಳಿತಾಧಿಕಾರಿಗಳು, ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳು, ಸುತ್ತೂರು ಇವರನ್ನು ಖುದ್ದು ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗೆ ದೂ. 08221-232033, 232054 ಸಂಪರ್ಕಿಸಬಹುದು.
ಕಾಲೇಜು ಸಂಯೋಜನೆಗೆ ಅರ್ಜಿ
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯವು 2014-15ನೇ ಸಾಲಿಗೆ ಸಂಯೋಜನೆ ನೀಡುವ ಸಂಬಂಧ ಅರ್ಜಿ ಆಹ್ವಾನಿಸಿದೆ. ಸಂಯೋಜನೆ ಪಡೆದ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು 2014-15ನೇ ಶೈಕ್ಷಣಿಕ ವರ್ಷದಲ್ಲಿ ತಮ್ಮ ಕಾಲೇಜುಗಳ ತಾತ್ಕಾಲಿಕ ಸಂಯೋಜನೆ ನವೀಕರಣಕ್ಕೆ, ಹೊಸ ಕೋರ್ಸ್, ವಿಷಯ, ಭಾಷೆಗಳು ಮತ್ತು ವಿದ್ಯಾರ್ಥಿ ಪ್ರಮಾಣ ಹೆಚ್ಚು ಮಾಡಲು, ಶಾಶ್ವತ ಸಂಯೋಜನೆ ಮುಂದುವರಿಕೆಗೆ ದ್ವಿಪ್ರತಿಯಲ್ಲಿ ಅರ್ಜಿ ಸಲ್ಲಿಸಬೇಕು. ನೋಂದಾಯಿಸಲ್ಪಟ್ಟ ಶೈಕ್ಷಣಿಕ ಸಂಘ ಸಂಸ್ಥೆಗಳು ಮಾತ್ರ ಹೊಸದಾಗಿ ಪ್ರಥಮ ದರ್ಜೆ ಕಾಲೇಜನ್ನು ಕನಿಷ್ಠ ಎರಡು ಪ್ರತ್ಯೇಕ ವಿಷಯಗಳೊಂದಿಗೆ ಪ್ರಾರಂಭಿಸಲು ಪ್ರಸ್ತಾವನೆ ಸಲ್ಲಿಸಬೇಕು. ಐದು ವರ್ಷಗಳ ನಿರಂತರ ತಾತ್ಕಾಲಿಕ ಸಂಯೋಜನೆ ಪಡೆದು, ಅಸ್ತಿತ್ವದಲ್ಲಿರುವ ವಿಷಯಗಳಿಗೆ ಸ್ಥಳೀಯ ತನಿಖಾ ಸಮಿತಿಯವರು ವಿಧಿಸಿರುವ ಷರತ್ತುಗಳನ್ನು ಸಂಪೂರ್ಣವಾಗಿ ಪಾಲಿಸಿ, ಉತ್ತಮ ಶೈಕ್ಷಣಿಕ ಗುಣಮಟ್ಟ ಹೊಂದಿದ್ದು, ನ್ಯಾಕ್ ಸಂಸ್ಥೆಯ ಅಕ್ರೆಡಿಟೇಷನ್ ಹೊಂದಿದ್ದಲ್ಲಿ ಅಂತಹ ಕಾಲೇಜುಗಳು ಶಾಶ್ವತ ಸಂಯೋಜನೆ ಮಂಜೂರಾತಿ ಕೋರಬಹುದು. ಅರ್ಜಿಯನ್ನು ಕುಲ ಸಚಿವರು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು- 05 ಇವರಿಗೆ ಹೆಸರಿಸಿ ದ್ವಿಪ್ರತಿಯಲ್ಲಿ ನಿರ್ದೇಶಕರು, ಕಾಲೇಜು ಅಭಿವೃದ್ಧಿ ಮಂಡಳಿ, ಮೈಸೂರು ವಿಶ್ವವಿದ್ಯಾನಿಲಯ, ಮಹಾರಾಜ ಕಾಲೇಜು ಶತಮಾನೋತ್ಸವ ಭವನ, ಮೈಸೂರು-05 ಇವರಿಗೆ ದಂಡ ಶುಲ್ಕವಿಲ್ಲದೆ ಆ. 31ರೊಳಗೆ ಕಳುಹಿಸಬೇಕು. ದಂಡ ಶುಲ್ಕದೊಂದಿಗೆ ಸೆ.10ರೊಳಗೆ ಸಲ್ಲಿಸಬೇಕು. ಸಂಯೋಜನಾ ಶುಲ್ಕ, ಸೇವಾಶುಲ್ಕ, ಅಗತ್ಯ ಬಿದ್ದಲ್ಲಿ ಕಟ್ಟಬೇಕಾದ ದಂಡ ಶುಲ್ಕಗಳನ್ನು ಹಣಕಾಸು ಅಧಿಕಾರಿಗಳು, ಮೈಸೂರು ವಿಶ್ವ ವಿದ್ಯಾನಿಲಯ, ಮೈಸೂರು ಹೆಸರಿಗೆ ಡಿಡಿ ಪಡೆಯಬೇಕು. ಹೆಚ್ಚಿನ ಮಾಹಿತಿಗೆ ಡಿಡಿಠ///್ಡಟ್ಝಿ-ಟಣಡ್ಟ್ಠಜ.ಛ್ಛ.್ಝಟಿನಲ್ಲಿ ಪಡೆಯಬಹುದು. ಅರ್ಜಿಯನ್ನು ಇಮೇಲ್ ಮೂಲಕ ಕಳುಹಿಸುವವರು ್ಛಜ್ಛ/್ಡಟ್ಝಿ-ಟಣಡ್ಟ್ಠಜ.ಛ್ಛ.್ಝಟಿ ಅಥವಾ ಟ್ಝಟ್ಜಿಛ್ಠಛಞ್ಜಛಟಿಝ್ಝ/್ಟಡಿಟಛ್ಝಟ.್ಛ್ಟಟಗೆ ಕಳುಹಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

