ಆಂಗ್ಲ ಸಂವಹನ ಅನಿವಾರ್ಯ: ಗೋಪಾಲ್
ಕ.ಪ್ರ.ವಾರ್ತೆ ಮೈಸೂರು ಆ. 6
ಇಂದು ಬದುಕಿಗೂ ಸಹ ಇಂಗ್ಲಿಷ್ ಸಂವಹನ ಅನಿವಾರ್ಯ ಎಂದು ಜಿ.ಪಂ. ಸಿಇಒ ಪಿ.ಎ. ಗೋಪಾಲ್ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಮುಕ್ತ ಗಂಗೋತ್ರಿಯ ತುಂಗಭದ್ರ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಇಂಗ್ಲಿಷ್ ಕಲಿಕಾ ತರಬೇತಿ ಶಿಬಿರಾರ್ಥಿಗಳಿಗೆ ಶುಭ ಹಾರೈಕೆ ಕಾರ್ಯಕ್ರಮದಲ್ಲಿ ಮುಕ್ತ ಭಂಡಾರ ಅಧ್ಯಯನ ಸಾಮಗ್ರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಆಯಾಯ ರಾಜ್ಯದಲ್ಲಿ ಮಾತೃಭಾಷೆಗಳು ಸಂವಹನ ಮಾಧ್ಯಮವಾಗಿದ್ದರೂ, ಇಡೀ ದೇಶದಲ್ಲಿ ಇಂಗ್ಲಿಷ್ ಭಾಷೆ ಆವರಿಸಿರುವುದರಿಂದ ಇಂಗ್ಲಿಷ್ ಕಲಿಕೆ ಅನಿವಾರ್ಯವಾಗಿದೆ. ಯಾವುದೇ ಮಹಲ್, ಹೋಟೆಲ್ ಮುಂತಾದ ಕಡೆ ಸಂವಹನ ನಡೆಸಬೇಕಾದರೆ ಇಂದು ಇಂಗ್ಲಿಷ್ ಅಗತ್ಯವಾಗಿದೆ. ಆದ್ದರಿಂದ ಬದುಕಿಗೂ ಇದು ಅನಿವಾರ್ಯವಾಗಿದೆ ಎಂದರು.
ಎಲ್ಲಾ ರಂಗಕ್ಕೂ ಬೇಕು: ಉದ್ಯೋಗಕ್ಕೆ ಮಾತ್ರ ಅಗತ್ಯವಾಗಿದ್ದ ಇಂಗ್ಲಿಷ್ ಭಾಷೆಯು ಇಂದು ಎಲ್ಲಾ ರಂಗಗಳಲ್ಲಿಯೂ ಆಗಾಧವಾಗಿ ಬೆಳದಿದೆ. ಇಂಗ್ಲಿಷ್ ಕಲಿತರೆ ಅಂತಾರಾಷ್ಟ್ರೀಯ ಮನ್ನಣೆ ದೊರಕಲಿದೆ.
ಆದ್ದರಿಂದ ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ಯುವಜನತೆ ತಮ್ಮನ್ನು ಸಿದ್ಧಗೊಳಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಕ್ತ ವಿವಿ ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್, ಇಂದಿನ ಜಾಗತೀಕರಣದಲ್ಲಿ ಇಂಗ್ಲಿಷ್ ಪ್ರಾಮುಖ್ಯತೆ ಪಡೆದಿದೆ.
ಮಾತೃಭಾಷೆ ಜತೆಗೆ, ಇಂಗ್ಲಿಷ್ ಅಭ್ಯಾಸ ಬದುಕಿಗೆ ಅವಶ್ಯಕ. ಉದ್ಯೋಗ ಪಡೆಯಲು ಕೌಶಲದೊಂದಿಗೆ ಉತ್ತಮ ಸಂವಹನ ಅಗತ್ಯ ಎಂದರು. ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

