ನವವಿವಾಹಿತೆ ನೇಣಿಗೆ ಶರಣು
ನಂಜನಗೂಡು: ಜೀವನದಲ್ಲಿ ಜಿಗುಪ್ಸೆಗೊಂಡು ನವವಿವಾಹಿತೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಆರ್.ಪಿ. ರಸ್ತೆಯ 11ನೇ ಕ್ರಾಸ್ನಲ್ಲಿ ಗುರುವಾರ ಮಧ್ಯಾಹ್ನ ಜರುಗಿದೆ. ಆಟೋ ಚಾಲಕ ದೀಪು ಪತ್ನಿ ಸುಷ್ಮಾ (19) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೂಲತಃ ಮಂಡ್ಯ ಜಿಲ್ಲೆಯ ಬಾಬುರಾಯನ ಕೊಪ್ಪಲಿನ ನಿವಾಸಿಯಾದ ಈಕೆ, ಎರಡು ತಿಂಗಳ ಹಿಂದೆ ನಂಜನಗೂಡಿನ ಆಟೋ ಚಾಲಕ ದೀಪುನನ್ನು ಪ್ರೀತಿಸಿ, ಮೈಸೂರಿನ ಒಂಟಿಕೊಪ್ಪಲಿನ ದೇವಾಲಯದಲ್ಲಿ ಮದುವೆಯಾಗಿದ್ದರು.
ಕಲ್ಕುಂದ ಗೋಳು ಕೇಳೋರ್ ಯಾರು?
ನಂಜನಗೂಡು: ಸ್ವಾತಂತ್ರ್ಯ ಬಂದು 65 ವರ್ಷಗಳು ಕಳೆದಿದ್ದರೂ ಗ್ರಾಮೀಣ ಅಭಿವೃದ್ಧಿ ಮರೀಚಿಕೆಯಾಗಿಯೇ ಉಳಿದಿದೆ. ಅದಕ್ಕೆ ನಿದರ್ಶನವೆಂದರೆ ವರುಣ ಕ್ಷೇತ್ರದ ಕಲ್ಕುಂದ ಗ್ರಾಮದ ಗೋಳು ಹೇಳತೀರದಾಗಿದೆ. ತಾಲೂಕಿನ ಬಿಳಿಗೆರೆ ಗ್ರಾಪಂ ವ್ಯಾಪ್ತಿಗೆ ಸೇರಿದ ಕಲ್ಕುಂದ ಗ್ರಾಮದಲ್ಲಿ ದಲಿತ, ಲಿಂಗಾಯಿತ, ಗಾಣಿಗ ಮತ್ತು ಬ್ರಾಹ್ಮಣ ಕುಟುಂಬಗಳು ವಾಸ ಮಾಡುತ್ತಿದ್ದು ಇಲ್ಲಿ ಯಾವುದೇ ಮೂಲಭೂತ ಸಮಸ್ಯೆಗಳು ನಿವಾರಣೆಯಾಗಿಲ್ಲ. ಕುಡಿಯುವ ನೀರಿಗೆ ನಿತ್ಯ ಪರದಾಟ, ರಸ್ತೆಗಳು ಇಲ್ಲದಾಗಿವೆ. ಕೃಷಿಭೂಮಿ ಬಂಜರು ಭೂಮಿಯಾಗಿದೆ. ಇಂತಹ ಸಮಸ್ಯೆಗಳಿಗೆ ಮುಕ್ತಿ ಎಂದೋ ಎಂದು ಗ್ರಾಮಸ್ಥರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಟಿ. ನರಸೀಪುರದಿಂದ ಕಲ್ಕುಂದ ಗ್ರಾಮದ ಮಾರ್ಗವಾಗಿ ತಗಡೂರು- ನಂಜನಗೂಡು ಮಾರ್ಗ ಇದ್ದ ರಸ್ತೆಗಳು ಕೆಸರುಗದ್ದೆಯಾಗಿ ಪರಿವರ್ತನೆಯಾಗಿದೆ. ದೊಡ್ಡ ಗುಂಡಿಗಳು ಬಿದ್ದು ನಡೆದಾಡುವುದೇ ಕಷ್ಟವಾಗಿದೆ. ನಡೆದಾಡುವುದೇ ಕಷ್ಟವಾಗಿರುವಾಗ ಇನ್ನು ಭಾರಿ ವಾಹನಗಳು ಚೆಲಿಸಲು ಹೇಗೆ ಸಾಧ್ಯ. ಆದ್ದರಿಂದ ಸಂಬಂಧಪಟ್ಟವರು ದಯ ಮಾಡಿ ಪರಿಹರಿಸುವಂತೆ ಕೆ.ಪಿ. ಮಹದೇವಸ್ವಾಮಿ ಮನವಿ ಮಾಡಿದ್ದಾರೆ.
16 ಎಕರೆ ಎಲ್ಲಿ ಹೋಯಿತು?: ಕಲ್ಕುಂದ ಗ್ರಾಮದಲ್ಲಿ 16 ಎಕರೆ ಕೊಮ್ಮನಕೆರೆ, ಕಲ್ಲುಕೆರುಗಳ ಒತ್ತುವರಿ ಮಾಡಿ ಹಾಳು ಮಾಡಿದ್ದಾರೆ. ಈ ಕೆರೆಗಳನ್ನು ಅಭಿವೃದ್ಧಿಪಡಿಸಿ ನಮ್ಮ ಊರು ನಮ್ಮ ಕೆರೆ ಸಂರಕ್ಷಿಸುವಂತೆ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

