ಭಾರತೀಯ ಕಾವ್ಯಮೀಮಾಂಸೆಯ ಅವಲೋಕನ
ಮೈಸೂರು: ಭಾಷೆ ಮತ್ತು ಬದುಕು ಒಂದೇ ಆಗಿರುವುದರಿಂದ ಕನ್ನಡ ಐಚ್ಛಿಕ ವಿದ್ಯಾರ್ಥಿಗಳಿಗೆ ಯಾವುದೇ ಭಾಷೆಯ ಕಲಿಕಾ ನಿರ್ಬಂಧವಿರಬಾರದು ಎಂದು ಡಾ.ಮ. ರಾಮಕೃಷ್ಣ ಅಭಿಪ್ರಾಯಪಟ್ಟರು.
ಜಯಲಕ್ಷ್ಮೀಪುರಂನ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಭಾರತೀಯ ಕಾವ್ಯಮೀಮಾಂಸೆಯ ಅವಲೋಕನ ಕುರಿತ ಉಪನ್ಯಾಸ ಮತ್ತು ಪ್ರಥಮ ವರ್ಷದ ಐಚ್ಛಿಕ ಕನ್ನಡ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಗಾಂಧೀಜಿಯವರ ಹೇಳಿಕೆಯಂತೆ ಎಲ್ಲಾ ಕಿಟಕಿಗಳನ್ನು ತೆರೆದಿಡು, ಎಲ್ಲಾ ಜ್ಞಾನಗಳು ಬಂದು ಸೇರಲಿ ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು ಎಂದರು.
ರಂ.ಶ್ರೀ. ಮುಗಳಿ ಅವರು ಕನ್ನಡಕ್ಕೆ ಗುಣಪಡಿಸುವ ಶಕ್ತಿ ಇದೆ. ರಸಾನುಭವದ ಸುಂದರ ಅಭಿವ್ಯಕ್ತಿಯೇ ಸಾಹಿತ್ಯ ಎಂದರು. ಕಾವ್ಯ ಕಟ್ಟುವುದಕ್ಕೆ ಛಂದಸ್ಸು, ಮೀಮಾಂಸೆ ಅಗತ್ಯವಿದೆ. ಕಾವ್ಯ ಕುರಿತು ಗಂಭೀರವಾಗಿ ಚರ್ಚಿಸುವುದು ಕಾವ್ಯಮೀಮಾಂಸೆ. ಭಾರತೀಯ ಭಾಷೆಗಳಿಗೆಲ್ಲಾ ಪುರಾತನ ಸಂಸ್ಕೃತ ಭಾಷೆಯಲ್ಲಿ ರಚನೆಗೊಂಡ ಗಂಭೀರವಾದ ಕಾವ್ಯಚಿಂತನೆಯನ್ನೇ ಭಾರತೀಯ ಕಾವ್ಯಮೀಮಾಂಸೆ ಎನ್ನಲಾಗುತ್ತದೆ ಎಂದು ವಿವರಿಸಿದರು. ಪ್ರಾಂಶುಪ್ರಾಲ ಪ್ರೊ.ಕೆ.ವಿ. ಪ್ರಭಾಕರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ ಅತಿಥಿಯಾಗಿ ಭಾಗವಹಿಸಿದ್ದರು. ಕೆ. ಅನನ್ಯಭಟ್ ಪ್ರಾರ್ಥಿಸಿದರು. ನಾಗೇಶ್ ಸ್ವಾಗತಿಸಿದರು. ಚಿಕ್ಕಂಕ ವಂದಿಸಿದರು. ಸಿ.ಎಂ. ಕಿರಣ್ಕುಮಾರ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

