ಮೈಸೂರು

46 ಸಾವಿರ ಶೌಚಾಲಯ ನಿರ್ಮಾಣ ಗುರಿ

Published On :

ಕ.ಪ್ರ.ವಾರ್ತೆ    ಹುಣಸೂರು    ಆ. 13
ಜಿಲ್ಲೆಯಲ್ಲಿ ಶೌಚಾಲಯವಿಲ್ಲದ 1.23 ಲಕ್ಷ ಕುಟುಂಬ ಗುರುತಿಸಿದ್ದು, ನಿರ್ಮಲ ಭಾರತ ಹಾಗೂ ಉದ್ಯೋಗ ಖಾತರಿ ಯೋಜನೆಯಡಿ ಮೊದಲ ಹಂತದಲ್ಲಿ 46 ಸಾವಿರ ಶೌಚಾಲಯ ನಿರ್ಮಿಸುವ ಗುರಿ ಇದೆ ಎಂದು ಜಿಪಂ ಸಿಇಒ ಪಿ.ಎ. ಗೋಪಾಲ್ ತಿಳಿಸಿದರು.
ಶೌಚಾಲಯ ನಿರ್ಮಾಣಕ್ಕೆ 9,300 ಸಹಾಯಧನ ನೀಡಲಾಗುತ್ತಿದ್ದು, ಉಳಿದ 1,200 ಗಳನ್ನು ಫಲಾನುಭವಿಗಳು ಭರಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯಡಿ 26,937 ಮಾನವ ದಿನಗಳನ್ನು ಗುರುತಿಸಲಾಗಿದೆ. ಈ ಸಾಲಿನಲ್ಲಿ 60 ರಿಂದ 65 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಮುಂದಿನ ಎರಡು ವರ್ಷದೊಳಗೆ ನರೇಗಾ ಯೋಜನೆಯಡಿ ಜಿಲ್ಲೆಯ ಎಲ್ಲಾ ಶಾಲೆಗಳು, ಅಂಗನವಾಡಿ ಕೇಂದ್ರಗಳಿಗೆ ಕಾಂಪೌಂಡ್ ನಿರ್ಮಿಸುವ ಗುರಿ ಇದೆ.
ಶಾಲೆಯ ದುಸ್ಥಿತಿ: ಜಿಪಂ ಸದಸ್ಯ ಸಿ.ಟಿ. ರಾಜಣ್ಣ ಅವರು, ತಾಲೂಕಿನ ಚಿಲ್ಕುಂದ ಶಾಲೆ ಸಂಪೂರ್ಣ ದುಸ್ಥಿತಿಯಲ್ಲಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೋಪಾಲ್ ಅವರು, ಜಿಲ್ಲೆಯಲ್ಲಿ 168 ಶಾಲಾ ಕಟ್ಟಡ ದುಸ್ಥಿತಿಯಲ್ಲಿವೆ. ದುರಸ್ತಿಗೊಳಿಸಲು ಹಾಗೂ ತುಂಬಾ ಹಳೆ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸಲು ತಜ್ಞರ ವರದಿ ಕೇಳಲಾಗಿದೆ. ಚಿಲ್ಕುಂದ ಶಾಲೆ ಬಗ್ಗೆ ಚರ್ಚಿಸಲಾಗಿದೆ. ಈ ಬಗ್ಗೆ ಕೂಡಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪಟ್ಟಣದ ಚಿಕ್ಕಹುಣಸೂರು ಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಿಸಲು ಮಂಜೂರಾದ ಹಣ ಸಾಲುವುದಿಲ್ಲ ಎಂದು ಭೂಸೇನಾ ನಿಗಮ ನಿರಾಕರಿಸಿರುವುದರಿಂದ ಈ ಸಮಗ್ರ ವರದಿ ನೀಡುವಂತೆ ಬಿಇಒ ರಾಜಶೇಖರ್ಗೆ ಸೂಚಿಸಿದರು.
ವಿವಿಧ ಯೋಜನೆಯಡಿ ಮಂಜೂರಾದ ಮನೆಗಳಿಗೆ ಜಿಪಿಎಸ್ ತಯಾರಿಸುವ ಕುರಿತು ಗ್ರಾಪಂ ಪಿಡಿಒಗಳಿಗೆ ತರಬೇತಿ ನೀಡಲಾಗುತ್ತಿದೆ. ಇನ್ನು ಮುಂದೆ ಮನೆ ನಿರ್ಮಾಣದ ಬಿಲ್ ಪಾವತಿ ತಡವಾಗುವುದಿಲ್ಲ. ಅಲ್ಲದ,ೆ ಈ ಹಿಂದೆ ಮಂಜೂರಾದ ಹೆಚ್ಚುವರಿ ಮನೆಗಳು ರದ್ದಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಆಶ್ರಮ ಶಾಲಾ ಶಿಕ್ಷಕರ ಬಾಕಿ ವೇತನ ಪಾವತಿಸಲಾಗಿದೆ. ಆದರೆ, ಪಿರಿಯಾಪಟ್ಟಣ ತಾಲೂಕು ಮುತ್ತೂರು ಕಾಲೋನಿಯ ಶಾಲಾ ಶಿಕ್ಷಕರಿಗೆ ತಾಂತ್ರಿಕ ಕಾರಣದಿಂದ ಸಂಬಳ ನೀಡಿಲ್ಲ. ತಾಲೂಕಿನ ನಾಗಾಪುರ ಪ್ರೌಢಶಾಲೆ, ಆಶ್ರಮ ಶಾಲೆಗಳಿಗೆ ಭೇಟಿ ನೀಡಿದ್ದು, ಎರಡು ಶಾಲೆಗಳು ಬೇರೆಡೆಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು. ಪಟ್ಟಣದ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಪಶುವೈದ್ಯ ಆಸ್ಪತ್ರೆಗೂ ಭೇಟಿ ನೀಡಿ ಪರಿಶೀಲಿಸಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.