ಮೈಸೂರು

ಇಂದು ಹಿರಿಯ ವಿದ್ಯಾರ್ಥಿಗಳ ಸಭೆ

Published On :

ಪಿರಿಯಾಪಟ್ಟಣ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೋಷಕರ ಸಂಘ ಮತ್ತು ಹಳೆ ವಿದ್ಯಾರ್ಥಿಗಳ ಸಂಘವನ್ನು ರಚಿಸುವ ಸಲುವಾಗಿ ಆ.17 ರಂದು ಮಧ್ಯಾಹ್ನ 2ಕ್ಕೆ ಸಭೆ ಕರೆಯಲಾಗಿದೆ ಎಂದು ಪ್ರಾಂಶುಪಾಲ ಟಿ.ಆರ್. ತ್ರಿಣೇಶ್ ಹೇಳಿದ್ದಾರೆ. ಕಾಲೇಜಿನ ಅಭಿವೃದ್ಧಿಯ ದೃಷ್ಟಿಯಿಂದ ನ್ಯಾಕ್ ಮಾನ್ಯತೆ ಪಡೆಯುವ ಸಲುವಾಗಿ ಪೋಷಕರ ಹಾಗೂ ಹಳೆ ವಿದ್ಯಾರ್ಥಿಗಳ ಸಂಘ ರಚಿಸುವುದು ಅನಿವಾರ್ಯವಾಗಿದೆ. ಆದ್ದರಿಂದ ಆಸಕ್ತ ಹಳೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಸಭೆಗೆ ಆಗಮಿಸುವಂತೆ ಮನವಿ ಮಾಡಿದ್ದಾರೆ.
ಬಡ ಮಕ್ಕಳಿಗೆ ಉಚಿತ ಕ್ಷೌರ
ಬೈಲುಕುಪ್ಪೆ: ಶ್ರೀ ಕ್ಷೇತ್ರ ಧರ್ಮಸ್ಥಳ ಮಹಿಳಾ ಸಂಘದ ವತಿಯಿಂದ 67ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೊಪ್ಪ ಗ್ರಾಮದ ಬಡ 15 ಮಕ್ಕಳಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಉಚಿತವಾಗಿ ಹೇರ್ ಕಟಿಂಗ್ ಮಾಡಿಸಲಾಯಿತು. ದೊಡ್ಡಹೊಸೂರಿನ ಶ್ರೀ ಕ್ಷೇತ್ರ ಧರ್ಮಸ್ಥಳ ಮಹಿಳಾ ಸಂಘದ ಅಧ್ಯಕ್ಷೆ ಮಂಜುಳಾ, ಶಾಲೆಯ ಮುಖ್ಯ ಶಿಕ್ಷಕ ಶಿವನಂಜಪ್ಪ, ಮಹಿಳಾ ಸಂಘದ ಅಂಬುಜಮ್ಮ, ಸುಹಾಸಿನಿ, ರಾಜು ಇದ್ದರು.
ಸರ್ಕಾರಿ ಐಟಿಐಗೆ ಅರ್ಜಿ ಆಹ್ವಾನ
ನಂಜನಗೂಡು: ಇಲ್ಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ 2013ನೇ ಸಾಲಿನಲ್ಲಿ ಸಿಒಇ ವೃತ್ತಿಯಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸ್ವೀಕರಿಸಲು ಆ.23 ಕಡೆ ದಿನ, ಸಂದರ್ಶನಕ್ಕೆ ಹಾಜರಾಗಲು ಆ.24, ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು. ಹೆಚ್ಚಿನ ವಿವರಗಳಿಗೆ ಪ್ರಾಂಶುಪಾಲರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ದೂ.08221- 225887 ಸಂಪರ್ಕಿಸಬಹುದು.



ನಗರದ ಹಲವೆಡೆ ಸ್ವಾತಂತ್ರ್ಯ ದಿನಾಚರಣೆ

ಚಾಮುಂಡೇಶ್ವರಿ ಮಹಿಳಾ ಸಂಸ್ಥೆ
ಎಂ.ಜಿ. ಕೊಪ್ಪಲಿನ ಶ್ರೀ ಚಾಮುಂಡೇಶ್ವರಿ ಮಹಿಳಾ ಸಂಸ್ಥೆ ಮತ್ತು ಸಾಂತ್ವನ ಮಹಿಳಾ ಸಹಾಯವಾಣಿಯು ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವೃದ್ಧೆ ನಿಂಗಮ್ಮ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ನಿರ್ದೇಶಕಿಯರಾದ ಯಶೋದಾ ಗಾಯಿತ್ರಮ್ಮ, ಮಹದೇವಮ್ಮ, ಶಿವಗಂಗಾ, ಗೀತಾ, ಮಂಜುಳಾ ಇದ್ದರು.


ಕನಕ ಮಹಿಳಾ ಸಂಘ
ಕುವೆಂಪುನಗರದ ಶ್ರೀ ಕನಕ ಮಹಿಳಾ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಛಾಯಾದೇವಿ ಅನಾಥಾಶ್ರಮದ ಮಕ್ಕಳಿಗೆ ಸಂಘದ ಅಧ್ಯಕ್ಷೆ ರಾಜಲಕ್ಷ್ಮಿ ಸಿಹಿ ಮತ್ತು ಹಣ್ಣು ವಿತರಿಸಿದರು. ಮಾಜಿ ಅಧ್ಯಕ್ಷ ನಾಗಮ್ಮ ನಾಗರಾಜ್, ರಾಜೇಶ್ವರಿ, ಜ್ಞಾನೇಶ್ವರಿ, ಭಾಗ್ಯಮ್ಮ, ಉಮಾಮಣಿ, ತ್ರಿವೇಣಿ ಇದ್ದರು.


ಉದಯಗಿರಿ ಕನ್ನಡ ಸಂಘ
ಉದಯಗಿರಿ ಕನ್ನಡ ಸಂಘ ಕ್ಯಾತಮಾರನಹಳ್ಳಿಯ ಸುಭಾಷ್ಚಂದ್ರಬೋಸ್ ಉದ್ಯಾನದಲ್ಲಿ ಏರ್ಪಡಿಸಿದ್ದ 67ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಉದ್ಯಮಿ ಮಾಂಬಳ್ಳಿ ಕೆ.ಪಾಪೇಗೌಡ ಧ್ವಜಾರೋಹಣ ನೆರವೇರಿಸಿದರು. ಟಿ.ಎಂ. ಡ್ಯಾನಿಯಲ್, ಮಡ್ಡಿಕೆರೆ ಗೋಪಾಲ್, ಉಪಾಧ್ಯಕ್ಷ ಎಂ.ಕೆ. ಗೋವಿಂದರಾಜು, ಬಿ. ವಿದ್ಯಾಸಾಗರ ಕದಂಬ ಇದ್ದರು.


ಕೆನರಾ ಬ್ಯಾಂಕ್ ವೃತ್ತ ಕಚೇರಿ
ಮೈಸೂರಿನ ಕೆನರಾ ಬ್ಯಾಂಕ್ ವೃತ್ತ ಕಚೇರಿಯಲ್ಲಿ ಉಪ ಮಹಾಪ್ರಬಂಧಕ ಡಾ.ಎಸ್.ಟಿ. ರಾಮಚಂದ್ರ ಧ್ವಜಾರೋಹಣ ನೆರವೇರಿಸಿದರು. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಶಬ್ದಕೋಶ ಮತ್ತು ನೋಟ್ ಪುಸ್ತಕ ನೀಡಲಾಯಿತು. ಕಚೇರಿಯ ಎಲ್ಲಾ ಸಿಬ್ಬಂದಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದರು.


ಜೆಡಿಎಸ್ ಕಚೇರಿಯಲ್ಲಿ
ನಗರದ ಜೆಡಿಎಸ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಧ್ಯಕ್ಷ ರಾಜಣ್ಣ ಧ್ವಜಾರೋಹಣ ನೆರವೇರಿಸಿದರು. ಕಾರ್ಯಾಧ್ಯಕ್ಷ ಎಸ್.ಬಿ.ಎಂ. ಮಂಜು, ಪಾಲಿಕೆ ಸದಸ್ಯ ಚೆನ್ನಪ್ಪ, ಗಂಗಾಧರಗೌಡ, ಮುಖಂಡ ಶರಾವತಿ ವೆಂಕಟೇಶ್, ಅನಂತನಾರಾಯಣ್ ಇದ್ದರು.


ಈಶ್ವರ್ ವಿದ್ಯಾಲಯ
ಚೋರನಹಳ್ಳಿಯ ಈಶ್ವರ್ ವಿದ್ಯಾಲಯವು 67ನೇ ಸ್ವಾತಂತ್ರ್ಯ ದಿನಾಚರಣೆ ಏರ್ಪಡಿಸಿತ್ತು. ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಮತ್ತು ಅವರ ಪೋಷಕರು, ಶಾಲೆಯ ಸಿಬ್ಬಂದಿ ಇದ್ದರು.


ವಿನಾಯಕ ಗೆಳೆಯರ ಬಳಗ
ಮೈಸೂರಿನ ವಿಜಯನಗರ 4ನೇ ಹಂತ, 2ನೇ ಘಟ್ಟದಲ್ಲಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಸಾಸಿವೆಕಾಳು ಗಣಪತಿ ವೃತ್ತದಲ್ಲಿ ಸ್ವಾತಂತ್ರ್ಯ ದಿನಾಚರಣೆ ಏರ್ಪಡಿಸಲಾಗಿತ್ತು. ಕೃಷ್ಣಪ್ಪ, ರಾಮಕೃಷ್ಣ, ಬಸವರಾಜು ಕಾಣೆ, ದೇವೀರನಾಯಕ, ಆನಂದ, ಪ್ರೊ.ಮಹೇಶ್ ಇದ್ದರು.


ಹೆಬ್ಬಾಳು ಕೈಗಾರಿಕಾ ಸಂಘ
ಮೈಸೂರಿನ ಹೆಬ್ಬಾಳು ಕೈಗಾರಿಕಾ ಸಂಸ್ಥೆ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಎನ್.ಎಚ್. ಜಯಂತ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಕುಮಾರ್, ಕಾರ್ಯದರ್ಶಿ ಸಿ.ಎಂ. ಸುಬ್ರಮಣಿಯನ್, ಜಂಟಿ ಕಾರ್ಯದರ್ಶಿ ಪ್ರಕಾಶ್, ಹರ್ಷ ಇದ್ದರು.


ಎಇಟಿ ಪಬ್ಲಿಕ್ ಶಾಲೆ
ಮೈಸೂರಿನ ಅಜೀಜಿಯಾ ಎಜುಕೇಷನಲ್ ಟ್ರಸ್ಟ್ ಕಲ್ಯಾಣಗಿರಿಯ ಎಇಟಿ ಪಬ್ಲಿಕ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಏರ್ಪಡಿಸಿತ್ತು. ದಾರುಲ್ ಉಲೂಮ್ ಅಜೀಜಿಯಾ ಮುಖ್ಯಸ್ಥ ಮೌಲಾನಾ ಅನ್ವರ್ ಅಹಮದ್ ನಿಜಾಮಿ ಸಾಹೆಬ್ ಧ್ವಜಾರೋಹಣ ನೆರವೇರಿಸಿದರು.

ಮದ್ರಸ- ಎ- ಸಾಬಿರ್
ಮದ್ರಸ-ಎ-ಸಾಬಿರ್ ಮತ್ತು ಸಾಬಿರ್ ಪಿಯಾ ಬೈತ್ ಉಲ್-ಮಾಲ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಏರ್ಪಡಿಸಲಾಗಿತ್ತು. ಸಮಿತಿ ಕಾರ್ಯದರ್ಶಿ ಅನ್ಸರ್ ಪಾಷ ರಜ್ಜಿ ಧ್ವಜಾರೋಹಣ ನೆರವೇರಿಸಿದರು. ಮೊಹಮ್ಮದ್ ಸಬೀರ್, ಮೊಹಮ್ಮದ್ ಖಲೀಲ್, ಅಕ್ತರ್ ರಾಜಾ ಇದ್ದರು.


ಎನ್.ಆರ್. ಫೌಂಡೇಷನ್
ಎನ್.ಆರ್. ಫೌಂಡೇಷನ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಆಯೋಜಿಸಲಾಗಿತ್ತು. ಮಾನಸಿಕ ರೋಗ ತಜ್ಞ ಡಾ.ಎಚ್.ಆರ್. ಅಭಿಜಿತ್, ಡಾ. ಕೃಷ್ಣ ಹೊಂಬಾಳ್  ಇದ್ದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು. ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ಇದ್ದರು.


ಟೆರೇಷಿಯನ್ ಕಾಲೇಜು
ಟೆರೇಷಿಯನ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿದ್ಯಾರ್ಥಿನಿಯರು ವಿವಿಧ ದೇಶಭಕ್ತಿ ಗೀತೆಗೆ ನರ್ತಿಸಿದರು. ಪ್ರಾಂಶುಪಾಲ ಪ್ರೊ.ವಿ.ಕೆ. ಜೋಷ್ ಧ್ವಜಾರೋಹಣ ನೆರವೇರಿಸಿದರು. ಪದವಿ ಕಾಲೇಜಿನ ವಿದ್ಯಾರ್ಥಿಗಳು ಈ ವೇಳೆ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.