ಕೆನರಾ ಬ್ಯಾಂಕ್ನಿಂದ ಇ- ಲಾಂಜ್
ಕ.ಪ್ರ.ವಾರ್ತೆ , ಮೈಸೂರು , ಆ. 26
ಕೆನರಾ ಬ್ಯಾಂಕ್ನಿಂದ ಕುವೆಂಪುನಗರ ಶಾಖೆಯಲ್ಲಿ 24್ಗ7 ಮಾದರಿಯಲ್ಲಿ ಆರಂಭಿಸಲಾದ ಇ- ಲಾಂಜ್ ಸೇವೆಯನ್ನು ಬ್ಯಾಂಕಿನ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್.ಕೆ. ದುಬೆ ಲೋಕಾರ್ಪಣೆ ಮಾಡಿದರು. ಇ- ಲಾಂಜ್ ಎಂಬುದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಮಾದರಿಯದ್ದಾಗಿದ್ದು, ಇದರ ಮೂಲಕ ಹಣ ಠೇವಣಿ, ಚೆಕ್ ಠೇವಣಿ, ಹಣ ಡ್ರಾ ಹಾಗೂ ಪಾಸ್ಬುಕ್ ನಮೂದಿಸಿಕೊಳ್ಳಬಹುದಾಗಿದೆ. ಈ ಯಂತ್ರವು ಅಂತರ್ಜಾಲದ ಮೂಲಕ ದತ್ತಾಂಶಗಳನ್ನು ವಿನಿಮಯ ಮಾಡಿಕೊಳ್ಳಲಿದ್ದು, ಗ್ರಾಹಕರಿಗೆ ಹೆಚ್ಚು ಉಪಯೋಗವಾಗಲಿದೆ. ಜತೆಗೆ ಬ್ಯಾಂಕಿನಿಂದ ಇರುವ ಸೌಲಭ್ಯದ ಬಗ್ಗೆಯೂ ಇ- ಲಾಂಜ್ನಿಂದ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಇದೇ ವೇಳೆ ಇನ್ಫೋಸಿಸ್ನ ನಾಗರಾಜ ಶ್ರೀನಿವಾಸ, ಕೆನರಾ ಬ್ಯಾಂಕಿನ ಕೇಂದ್ರದ ವ್ಯವಸ್ಥಾಪಕ ಎಸ್.ಎಸ್. ಭಟ್, ಮೈಸೂರು ವಲಯ ವ್ಯವಸ್ಥಾಪಕ ಡಾ.ಎಸ್.ಟಿ. ರಾಮಚಂದ್ರ, ಶಾಖಾ ಮುಖ್ಯಸ್ಥ ಆರ್. ರಮೇಶ್ ಇದ್ದರು.
ನಾಳೆ ಕೆಲವೆಡೆ ವಿದ್ಯುತ್ ವ್ಯತ್ಯಯ
ಬನ್ನೂರು: ಟಿ. ನರಸೀಪುರ ತಾಲೂಕು ಬನ್ನೂರು ಉಪವಿಭಾಗದ ವ್ಯಾಪ್ತಿಗೆ ಬರುವ 66 ಕೆವಿ ಡಿಸಿ 1 ಮತ್ತು 2 ವಾಜಮಂಗಲ ಎಸ್ಎಫ್ಸಿ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳುವುದರಿಂದ ಆ. 28ರ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಹೊಂದಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ. ಬನ್ನೂರು ಪಟ್ಟಣ, ಚಿದ್ರಳ್ಳಿ, ಅಡಕನಹಳ್ಳಿ, ತುರುಗನೂರು, ಮಲಿಯೂರು, ಹೆಗ್ಗೂರು, ಬಿ.ಸಿ. ಹಳ್ಳಿ, ಕೊಡಗಳ್ಳಿ, ಹನುಮನಾಳು, ರಂಗಸಮುದ್ರ, ಕೇತುಪುರ, ಸೋಮನಾಥಪುರ, ಅತ್ತಹಳ್ಳಿ ಗ್ರಾಪಂಗೆ ಒಳಪಡುವ ಪ್ರದೇಶಗಳು ಹಾಗೂ 66ಕೆವಿ ನಂಜಾಪುರ ಏತ ನೀರಾವರಿ ಸ್ಥಾವರ.
ಅತ್ಯಾಚಾರ ಖಂಡಿಸಿ ಪ್ರತಿಭಟನೆ
ಮೈಸೂರು: ಮುಂಬೈನಲ್ಲಿ ಮಾಧ್ಯಮ ಛಾಯಾಗ್ರಾಹಕಿ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ಸ್ ಆ್ಯಂಡ್ ವೀಡಿಯೋಗ್ರಾಫರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಗಾಂಧಿಚೌಕದ ಬಳಿ ಪ್ರತಿಭಟಿಸಿದರು.ವರದಿ ಮಾಡಲು ತೆರಳಿದ್ದ ಛಾಯಾಗ್ರಾಹಕಿ ಮೇಲೆ ಅತ್ಯಾಚಾರ ನಡೆಸಿರುವುದು ಖಂಡನೀಯ. ಅತ್ಯಾಚಾರ ಎಸಗಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣವನ್ನು ನಿಯಂತ್ರಣಕ್ಕೆ ತರಬೇಕು ಎಂದು ಆಗ್ರಹಿಸಿದರು. ಸಂಘದ ಅಧ್ಯಕ್ಷ ಜಿ.ಟಿ. ರಮೇಶ್ಕುಮಾರ್, ಉಪಾಧ್ಯಕ್ಷ ಎಂ. ರಾಜಶೇಖರ ಮೂರ್ತಿ, ಕಾರ್ಯದರ್ಶಿ ಎನ್. ಉಮೇಶ್, ಜಂಟಿ ಕಾರ್ಯದರ್ಶಿ ಎಸ್. ಗಿರಿಮಂಜು, ಸಾರ್ವಜನಿಕ ಸಂಪರ್ಕಾಧಿಕಾರಿ ಜಿ.ಎಸ್. ಬಾಬು, ನಿರ್ದೇಶಕರಾದ ಸಿ. ಚಂದ್ರಶೇಖರ್, ಎಂ.ಕೆ. ತನುಜ ಕುಮಾರ್ ಇದ್ದರು.
ರಘು ಆಚಾರ್ ಗೆಲವಿಗೆ ಸಂಭ್ರಮ
ಮೈಸೂರು: ಚಿತ್ರದುರ್ಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮೈಸೂರಿನ ರಘು ಅಚಾರ್ ಜಯ ಗಳಿಸಿರುವುದಕ್ಕೆ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಲದ ಜಿಲ್ಲಾ ಘಟಕವು ಸೋಮವಾರ ಸಂಭ್ರಮ ಆಚರಿಸಿತು. ಮಂಡಲದ ಜಿಲ್ಲಾಧ್ಯಕ್ಷ ಸಿ.ಟಿ. ಆಚಾರ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಪ್ರಾಣೇಶ್ ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಇಲ್ಲಿನ ಹುಣಸೂರು ರಸ್ತಯ ರಿಂಗ್ರೋಡ್ ಬಳಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ಸಂಘಟನೆಯ ಜಿಲ್ಲಾ ಯುವ ಅಧ್ಯಕ್ಷ ಉಯಿಲಾಳು ಕುಮಾರ್, ಜಿಲ್ಲಾ ಸಂಚಾಲಕ ಹೆಬ್ಬಾಳ್ ಎ. ಗೋಪಾಲಚಾರ್, ಗೌರವಾಧ್ಯಕ್ಷ ಆರ್. ಜಯಕುಮಾರ್, ಚಾಮುಂಡೇಶ್ವರಿ ಕ್ಷೇತ್ರ ಅಧ್ಯಕ್ಷ ಯೋಗಣ್ಣ, ಹಿನಕಲ್ ಕ್ಷೇತ್ರದ ಅಧ್ಯಕ್ಷ ನರಸಿಂಹಮೂರ್ತಿ, ವಕೀಲ ತಿಮ್ಮಚಾರ್, ಮುಖಂಡರಾದ ಪುಟ್ಟಸೋಮಚಾರ್, ಎಂ. ಮೊಗಣ್ಣಚಾರ್, ಹೆಬ್ಬಾಳ್ ರವಿಕುಮಾರ್, ಹೂಟಗಳ್ಳಿ ಗುರುಸ್ವಾಮಿ, ವರುಣಾ ನಿಂಗಾಚಾರ್, ಉತ್ತನಹಳ್ಳಿ ಗೋವಿಂದಚಾರ್, ಬೋಗಾದಿ ಕುಮಾರ್, ಹುಲ್ಲೇನಹಳ್ಳಿ ಸತ್ಯ, ಟಿ. ರಾಜಗೋಪಾಲ್, ಎನ್.ಆರ್. ಮೊಹಲ್ಲಾ ಎಂ.ಎಸ್. ಕೃಷ್ಣಾಚಾರ್, ವರಕೋಡು ನಾಗರಾಜಚಾರ್, ಹಿನಕಲ್ ಅರ್ಕೇಷ್, ಚಂದ್ರಶೇಖರ್, ಉದಯಗಿರಿ ಕೆ.ಟಿ. ಲೋಕೇಶ್, ಎಂ. ರವಿಕುಮಾರ್ ಇದ್ದರು.
ಇಬ್ಬರು ಅಪರಿಚಿತರ ಸಾವು
ಮೈಸೂರು: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಅಪರಿಚಿತರು ಮೃತಪಟ್ಟಿದ್ದಾರೆ. ಕೆಆರ್ಎಸ್ ರಸ್ತೆಯ ಚಂದ್ರೋದಯ ಕಣ್ಣಿನ ಆಸ್ಪತ್ರೆ ಬಳಿಯ ಫುಟ್ಪಾತ್ನಲ್ಲಿ ಅಸ್ವಸ್ಥರಾಗಿ ಬಿದ್ದಿದ್ದ ಓರ್ವರನ್ನು ಚಿಕಿತ್ಸೆಗಾಗಿ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟಿದ್ದಾರೆ. ಸುಮಾರು 5.4 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಬಲಗಾಲಿನ ಹಿಮ್ಮಡಿಯ ಬಳಿ ಹಳೆಯ ಗಾಯದ ಗುರುತಿದೆ. ವಿವಿ ಪುರಂ ಪೊಲೀಸ್ ಠಾಣೆ ದೂ. 2418314, 2418514 ಸಂಪರ್ಕಿಸಬಹುದು. ಮತ್ತೊಂದು ಪ್ರಕರಣದಲ್ಲಿ ನಗರ ರೇಲ್ವೆ ನಿಲ್ದಾಣದ ಬಳಿಯ ಬಸ್ ನಿಲ್ದಾಣದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದ 58 ವರ್ಷದ ವ್ಯಕ್ತಿಯೊಬ್ಬರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. 5.6 ಅಡಿ ಎತ್ತರ, ಗೋದಿ ಬಣ್ಣ, ತೆಳ್ಳನೆ ಶರೀರ, ಕೋಲು ಮುಖ, ಗಡ್ಡ ಮೀಸೆ ಬಿಟ್ಟಿರುವ ಇವರು ಕೆಂಪು ಟೀ ಶರ್ಟ್ ಧರಿಸಿದ್ದಾರೆ. ಮಂಡಿ ಪೊಲೀಸ್ ಠಾಣೆ ದೂ. 2418339, 2418313 ಸಂಪರ್ಕಿಸಬಹುದು.
ಕಟ್ಟಡ ಕಾರ್ಮಿಕರ ಮನವಿ
ಮೈಸೂರು: ಕಟ್ಟಡ ಕಾರ್ಮಿಕರಿಗೆ ಇಎಸ್ಐ ಸೌಲಭ್ಯ ಮತ್ತು ಬಿಪಿಎಲ್ ಕಾರ್ಡ್ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಭಾರತ ಮಾತ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಕಟ್ಟಡ ಕಾರ್ಮಿಕರು ಅನೇಕ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ಅವರಿಗೆ ಇಎಸ್ಐ ಸೌಲಭ್ಯ, ವೃದ್ಧಾಪ್ಯ ವೇತನ ಮತ್ತು ಬಿಪಿಎಲ್ ಕಾರ್ಡ್ ನೀಡಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಆರ್ಟಿಐ ವೇದಿಕೆ ಅಸ್ತಿತ್ವಕ್ಕೆ
ಮೈಸೂರು: ಕರ್ನಾಟಕ ಮಾಹಿತಿ ಹಕ್ಕು ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಮೊದಲ ಪ್ರಯತ್ನವಾಗಿ ಕಾರ್ಯಕರ್ತರ ಕೈಪಿಡಿ ಹೊರತರಲು ಉದ್ದೇಶಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಹಕ್ಕು ಕಾರ್ಯಕರ್ತರ ಹಾಗೂ ಸಂಸ್ಥೆಗಳ ವಿವರ ಆಹ್ವಾನಿಸಿದ್ದು, ಈಗಾಗಲೇ ಕಾರ್ಯನಿರ್ವಹಿಸುತ್ತಿರುವವರ ಜತೆಗೆ ಹೊಸಬರೂ ತಮ್ಮ ವಿವರವನ್ನು ನೋಂದಾವಣಿ ಮಾಡಿಕೊಳ್ಳಬಹುದು. ಆಸಕ್ತರು ತಮ್ಮ ವಿವರಗಳನ್ನು ಕರ್ನಾಟಕ ಮಾಹಿತಿ ಹಕ್ಕು ವೇದಿಕೆ, ರಾಜ್ಯ ಘಟಕ, ನಂ. 1699,3, ಜೆ.ಎಚ್. ಪಟೇಲ್ ಕಾಲೇಜು ಕಟ್ಟಡ, ಹೇಮಾವತಿ ಹಾಸ್ಟೆಲ್ ಹತ್ತಿರ, ಬಿಐಇಟಿ ರಸ್ತೆ, ದಾವಣಗೆರೆ- 577004. ಅಥವಾ ಇ- ಮೇಲ್- ಝಢ್ಞಛ್ಠಟಿಛಡಿಛ್ಞಛಅ್ಜಟಛ್ಝಟ.್ಛ್ಟಟ ಇಲ್ಲಿಗೆ ಆ. 31 ರೊಳಗೆ ಕಳುಹಿಸಬಹುದು ಎಂದು ರಾಜ್ಯ ಸಂಯೋಜಕ ದೊಗ್ಗಳ್ಳಿಗೌಡ್ರು ಪುಟ್ಟರಾಜು ತಿಳಿಸಿದ್ದಾರೆ.
ಫ್ರೆಂಚ್ ಕಲಿಕಾ ಶಿಬಿರ
ಮೈಸೂರು: ಅಲಯನ್ಸ್ ಫ್ರಾನ್ಸಿಸ್ ಡಿ ಬೆಂಗಳೂರು ಮೈಸೂರು ಘಟಕವು ಸೆ. 2 ರಿಂದ ಫ್ರೆಂಚ್ ಭಾಷೆ ಕಲಿಕಾ ಶಿಬಿರ ಆರಂಭಿಸಲಿದ್ದು, ಮೊ. 9663381667 ಸಂಪರ್ಕಿಸಬಹುದು.
ಅಧ್ಯಕ್ಷ ಸ್ಥಾನ ನೀಡಲು ಮನವಿ
ಮೈಸೂರು: ದಲಿತ ಮುಖಂಡ ಹರಿಹರ ಆನಂದಸ್ವಾಮಿ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಕರ್ನಾಟಕ ದಲಿತ ಸಾಹಿತ್ಯ ಅಕಾಡೆಮಿಯ ರಾಜ್ಯಾಧ್ಯಕ್ಷ ನಾಗರಾಜ್ ತಲಕಾಡು ಕಾಂಗ್ರೆಸ್ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.
ತಾಂತ್ರಿಕ ಉಪನ್ಯಾಸ
ಮೈಸೂರು: ಜೆಎಲ್ಬಿ ರಸ್ತೆಯಲ್ಲಿರುವ ಎಂಜಿನಿಯರುಗಳ ಸಂಸ್ಥೆಯಲ್ಲಿ ಆ.30ರ ಸಂಜೆ 6ಕ್ಕೆ ಕಾರ್ಪೋರೆಟ್ ಆಸ್ತಿ ಮೌಲ್ಯಮಾಪನ ಹಾಗೂ ವಿನಮಯದಲ್ಲಿ ಜಾಗತಿಕ ಆರ್ಥಿಕತೆ ಕುರಿತು ಎಸ್ಡಿಎಂ ಐಎಂಡಿಯ ಪ್ರಾಧ್ಯಾಪಕ ಹರೀಶ್ ಮಚಿಯಾ ಕೊಡಂದೆರಾ ಉಪನ್ಯಾಸ ನೀಡುವರು.
ಉಪನ್ಯಾಸ
ಮೈಸೂರು: ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಎಸ್ಡಿಎಂ ಐಎಂಡಿಯಲ್ಲಿ ಆ. 30ರ ಮಧ್ಯಾಹ್ನ 2.30ಕ್ಕೆ ಪ್ರತಿಷ್ಠಾಪನಾ ದಿನಾಚರಣೆ ಅಂಗವಾಗಿ ಉಪನ್ಯಾಸ ಏರ್ಪಡಿಸಿದ್ದು, ಸೆಲ್ಕೊ ಎಂಡಿ ಡಾ.ಎಚ್. ಹರೀಶ್ ಹಂಡೆ ಅತಿಥಿಯಾಗಿ ಭಾಗವಹಿಸುವರು.
ವೃದ್ಧೆ ನಾಪತ್ತೆ
ಮೈಸೂರು: ಮಗಳ ಮನೆಗೆಂದು ಹೋದ ವೃದ್ಧೆಯೊಬ್ಬರು ನಾಪತ್ತೆಯಾಗಿದ್ದಾರೆ. ಬಿ. ಸಿದ್ದಪ್ಪ ಎಂಬವರ ತಾಯಿ ಚೆನ್ನಮ್ಮ (82) ನಾಪತ್ತೆಯಾದವರು. ಕಳೆದ ಶನಿವಾರ ತನ್ನ ಹಿರಿಯ ಮಗಳ ಮನೆಗೆ ಹೋಗುವುದಾಗಿ ಹೇಳಿ ಹೋದ ಚೆನ್ನಮ್ಮ ಅವರು ಮಗಳ ಮನೆಗೂ ಹೋಗದೆ, ಮಗನ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ. ಗೋದಿಬಣ್ಣ, ಗುಂಡುಮುಖ, 5.1 ಅಡಿ ಎತ್ತರ ಇದ್ದು, ಕನ್ನಡ ಮಾತನಾಡುತ್ತಾರೆ. ಇವರ ಪತ್ತೆಯಾದಲ್ಲಿ ಕೆ.ಆರ್. ಪೊಲೀಸ್ ಠಾಣೆ ದೂ. 2418319 ಅಥವಾ 2418519 ಸಂಪರ್ಕಿಸಬಹುದು.
ಸಾಂಸ್ಕೃತಿಕ ಕಾರ್ಯಕ್ರಮ
ಮೈಸೂರು: ಕುವೆಂಪುನಗರ ಗಾನಭಾರತೀ ವೀಣೆ ಶೇಷಣ್ಣ ಭವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆ. 30 ರಿಂದ ಸೆ. 1 ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಆ. 30ರಂದು ಸಿ.ಎನ್. ತ್ಯಾಗರಾಜು ಅವರಿಂದ ಕೊಳಲು ವಾದನ, ಆ. 31 ರಂದು ಟಿ.ಎನ್. ಮಾಧುರಿ ಅವರಿಂದ ಹಾಡುಗಾರಿಕೆ, ಸೆ. 1 ರಂದು ಆರ್.ಎಸ್. ಅಕ್ಷತಾ ಅವರಿಂದ ಹಾಡುಗಾರಿಕೆ ಏರ್ಪಡಿಸಲಾಗಿದೆ. ಎಲ್ಲಾ ಕಾರ್ಯಕ್ರಮಗಳು ಪ್ರತಿದಿನ ಸಂಜೆ 6ಕ್ಕೆ ನಡೆಯಲಿವೆ.
ಅರ್ಜಿ ಆಹ್ವಾನ
ಕೆ.ಆರ್. ನಗರ: ಸಾಲಿಗ್ರಾಮದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಖಾಲಿ ಇರುವ ಬಿ.ಇ ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್, ಬಿ.ಇ ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್, ಬಿ.ಇ ಡಿಪ್ಲೊಮಾ ಇನ್ ಎಲೆಕ್ಟ್ರಾನಿಕಲ್ ಎಂಜಿನಿಯರಿಂಗ್ಅರ್ಜಿ ಆಹ್ವಾನಿಸಲಾಗಿದೆ. ಸಂಸ್ಥೆಯ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು.
ನಾಳೆ ಹುಚ್ಚಗಣಿಯಲ್ಲಿ ಕೊಂಡೋತ್ಸವ
ನಂಜನಗೂಡು: ತಾಲೂಕಿನ ಹುಲ್ಲಹಳ್ಳಿ ಹೋಬಳಿಯ ಹುಚ್ಚಗಣಿ ಗ್ರಾದಮಲ್ಲಿ ಆ. 28ರ ಮಧ್ಯಾಹ್ನ 12ಕ್ಕೆ ಮಹದೇವಮ್ಮನವರ ದೇವಸ್ಥಾನದಲ್ಲಿ ಆದಿಶಕ್ತಿ ಮಹದೇವಮ್ಮನವರ ಕೊಂಡೊತ್ಸವ ನಡೆಯಲಿದೆ. ಭಕ್ತಾದಿಗಳು ಕೊಂಡೊತ್ಸವದಲ್ಲಿ ಭಾಗವಹಿಸುವಂತೆ ಆದಿಶಕ್ತಿ ಮಹದೇವಮ್ಮನವರ ಕ್ಷೇಮಾಭಿದ್ಧಿ ಸಂಘದ ಅಧ್ಯಕ್ಷ ಎಚ್.ಎನ್. ಬಾಲರಾಜು ಕೋರಿದ್ದಾರೆ.
ನಾಗರಿಕ ಪ್ರಜ್ಞಾ ಅಭಿಯಾನ
ಹುಣಸೂರು: ತಾಲೂಕಿನ ಕಸಬಾ ವಲಯದ ಕೊಳಗಟ್ಟದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಸ್ಥೆಯು ನಾಗರಿಕ ಪ್ರಜ್ಞಾ ಅಭಿಯಾನ ಕಾರ್ಯಕ್ರಮ ನಡೆಯಿತು.ಕೊಳಗಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಯೋಜನೆಯ ಮೇಲ್ವಿಚಾರಕ ಪ್ರಶಾಂತ್ ವಿವಿಧ ಸಂಘಗಳು ಹಾಗೂ ಸ್ವಸಹಾಯ ಗುಂಪುಗಳ ಸದಸ್ಯರಿಗೆ ನಾಗರಿಕ ಪ್ರಜ್ಞೆಯ 12 ಪ್ರಮುಖ ಸೂತ್ರಗಳ ಕುರಿತು ಮಾಹಿತಿ ನೀಡಿದರು. ಕಸ ಗುಡಿಸುವ ಮೂಲಕ ಸ್ವಚ್ಛತೆಯ ಅರಿವು ಮೂಡಿಸಿದರು. ಶಾಲಾ ಮುಖ್ಯ ಶಿಕ್ಷಕಿ ಮಿಲ್ಲಿ, ಗ್ರಾಮದ ಮುಖಂಡರಾದ ಶಿವಣ್ಣ, ಮಂಜಯ್ಯ, ಸೇವಾ ಪ್ರತಿನಿಧಿ ಕಾಂತರಾಜು ಭಾಗವಹಿಸಿದ್ದರು.
ಪ್ರತಿಭಾ ಪುರಸ್ಕಾರ
ಕೆ.ಆರ್. ನಗರ: ತಾಲೂಕು ಅಚ್ಚುತಾ ಸ್ನೇಹ ಬಳಗದ ವತಿಯಿಂದ 2013- 14ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಮ್ಮಿಕೊಂಡಿದೆ. ಅರ್ಹ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಮತ್ತು ಜಾತಿ ಪ್ರಮಾಣ ಪತ್ರದೊಂದಿಗೆ ಪಟ್ಟಣದ 7ನೇ ರಸ್ತೆಯಲ್ಲಿರುವ ಬಳಗದ ಕಚೇರಿಗೆ ಬಂದು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಅಧ್ಯಕ್ಷ ಎಂ. ತಮ್ಮಣ್ಣ ಕೋರಿದ್ದಾರೆ. ಮಾಹಿತಿಗಾಗಿ ಮೊ. 9845687458 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

