ಮೈಸೂರು

'ಶ್ರಮಿಕ ವರ್ಗ ಸಂಘಟಿತರಾಗಲಿ'

Published On :

ಕ.ಪ್ರ.ವಾರ್ತೆ , ನಂಜನಗೂಡು , ಜು. 7
ಶ್ರಮಿಕರು ಹಿಂದುಳಿದವರು ಆದ ಉಪ್ಪಾರ ಸಮಾಜ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಮಾನತೆ ಕಾಣಲು ಒಗ್ಗಟ್ಟು ಪ್ರದರ್ಶಿಸಿದರೆ ಸಮಾಜದ ಬದಲಾವಣೆ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀಕಂಠೇಶ್ವರ ಕಲಾಮಂದಿರದಲ್ಲಿ ಉಪ್ಪಾರ ಜನಜಾಗೃತಿ ಸಂಘದ ಉದ್ಘಾಟನೆ ಹಾಗೂ ಭಗೀರಥಿ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಉಪ್ಪಾರ ಮುಖಂಡರಿಗೆ ರಾಜಕೀಯದಲ್ಲಿ ಅವಕಾಶ ಕಡಿಮೆ ಇದ್ದರೂ ಚಾಮರಾಜನಗರದ ಕ್ಷೇತ್ರದ ಶಾಸಕ ಸಿ. ಪುಟ್ಟರಂಗಶೆಟ್ಟಿ ಕ್ಷೇತ್ರದ ಅಭಿವೃದ್ಧಿ ಹಾಗೂ ಸಮಾಜದ ಒಡನಾಟದಿಂದ ಎರಡನೇ ಬಾರಿಗೆ ಆಯ್ಕೆಯಾಗಿ ರಾಜ್ಯದಲ್ಲೇ ಉಪ್ಪಾರ ಸಮಾಜದ ಏಕೈಕ ಶಾಸಕರೆನಿಸಿದ್ದಾರೆ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಪ್ಪಾರ ಸಮಾಜದವರು ಹೆಚ್ಚಾಗಿ ನನ್ನನ್ನು ಬೆಂಬಲಿದ್ದರಿಂದ ಶಾಸಕನಾಗಿ ಈಗ ಸಚಿವನಾಗಿದ್ದೇನೆ. ಉಪ್ಪಾರ ಸಮಾಜಕ್ಕೆ ಸುಸಜ್ಜಿತ ಸಮುದಾಯ ಭವನ ನಿರ್ಮಿಸಲು ಚಿಂತಿಸಲಾಗಿದೆ. ರಾಜಕೀಯವಾಗಿ ಉಪ್ಪಾರ ಸಮಾಜದವರಿಗೆ ಪ್ರಾತಿನಿಧ್ಯ ನೀಡಲು ಮುಂದಾಗಿದ್ದೇವೆ. ಉಪ್ಪಾರ ಸಮಾಜದಲ್ಲಿ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯದೆ ಇದ್ದರೆ ಸಮಾಜ ಉದ್ಧಾರವಾಗುತ್ತದೆ ಎಂದು ಸಲಹೆ ನೀಡಿದರು.
ಸಂಸದ ಆರ್. ಧ್ರುವನಾರಾಯಣ, ಶಾಸಕ ಸಿ. ಪುಟ್ಟರಂಗಶೆಟ್ಟಿ, ಕೆಪಿಸಿಸಿ ಸದಸ್ಯರಾದ ಕೆ.ಆರ್. ಮೋಹನಕುಮಾರ್, ಎಸ್.ಸಿ. ಬಸವರಾಜು, ಯು.ಎನ್. ಪದ್ಮನಾಭರಾವ್, ಬ್ಲಾಕ್ ಅಧ್ಯಕ್ಷರಾದ ಕೆ.ಎಸ್. ಸುಬ್ಬಣ್ಣ, ಬಿ.ಎಸ್. ಮಹದೇವಪ್ಪ, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ್, ವಕೀಲ ಎಸ್.ಎಸ್. ನಿರಂಜನ್, ಜಿಪಂ ಮಾಜಿ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ತಾಪಂ ಸದಸ್ಯೆ ಲಕ್ಷ್ಮಿನಾಗರಾಜ್, ಮಾಜಿ ಅಧ್ಯಕ್ಷ ಹನುಂತಶೆಟ್ಟಿ, ಉಪ್ಪಾರ ಜನಜಾಗೃತಿ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಉಪ್ಪಾರ ಸಮಾಜ ಅಧ್ಯಕ್ಷ ಕನಕನಗರದ ಮಹದೇವು, ಪುರಸಭಾ ಸದಸ್ಯರಾದ ದೊರೆಸ್ವಾಮಿ, ರಾಜೇಶ್ವರಿ, ವಕೀಲ ಉಮೇಶ್, ಮಾಜಿ ಅಧಿಕಾರಿ ಡಿ. ಜಗನ್ನಾಥ್ ಸಾಗರ್, ಮುಖಂಡರಾದ ಕೋಟೆ ಹುಂಡಿ ಮಹದೇವು, ಪ್ರೂಟ್ ಬಾಬು, ಮಾಲೇಗೌಡ, ಆಣ್ಣಯ್ಯ ಶೆಟ್ಟಿ, ಮೂಗಶೆಟ್ಟಿ, ನಾಗೇಶ್, ಶಂಕರ್, ಎನ್.ವಿ. ತಿಮ್ಮೆಗೌಡ, ರಾಜು, ಶಿವರಾಜು, ಮಹದೇವಶೆಟ್ಟಿ, ಪುಟ್ಟಮಾದಶೆಟ್ಟಿ ನಾಗೆಂದ್ರ, ಬಾಲಚಂದ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.