ಮೈಸೂರು

ನಾಳೆ ವಾರ್ಷಿಕ ಮಹಾಸಭೆ

Published On :

ಎಚ್.ಡಿ. ಕೋಟೆ: ತಾಲೂಕಿನ ಅಖಿಲ ನಾಮಧಾರಿಗೌಡ ನೌಕರರ ಸಂಘದ 2012- 13ನೇ ಸಾಲಿನ ವಾರ್ಷಿಕ ಮಹಾಸಭೆಯು ಜು. 14ರಂದು ಬೆಳಗ್ಗೆ 10ಕ್ಕೆ ಸರಗೂರು ಪಟ್ಟಣದ ಅಖಿಲ ನಾಮಧಾರಿಗೌಡ ಸಮುದಾಯ ಭವನದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ. 9986665085 ಅಥವಾ 9448897885 ಸಂಪರ್ಕಿಸುವಂತೆ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ತಿಳಿಸಿದ್ದಾರೆ.
17 ರಂದು ವಿದ್ಯುತ್ ವ್ಯತ್ಯಯ
ನಂಜನಗೂಡು: ತಾಲೂಕಿನ ದೇವನೂರು ಉಪವಿಭಾಗದ ಹುಲ್ಲಹಳ್ಳಿ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಇರುವುದರಿಂದ ಜು.17 ರಂದು ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ವಿದ್ಯುತ್ ನಿಲುಗಡೆಯಾಗಲಿದೆ. ಕರಿಹುಂಡಿ, ನಲ್ಲಿತಾಳಪುರ, ಅರಗನಹಳ್ಳಿ, ಹುಲ್ಲಹಳ್ಳಿ, ಶಿರ್ಮಳ್ಳಿ, ಹಗಿನವಾಳು, ಹೆಗಡಹಳ್ಳಿ ಹಾಗೂ ರಾಂಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿದ್ಯುತ್ ಅಡಚಣೆಯಾಗಲಿದ್ದು, ಗ್ರಾಹಕರು ಸಹಕರಿಸಬೇಕು ಎಂದು ಸೆಸ್ಕ್ ನಂಜನಗೂಡು ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ವಾರ್ಷಿಕೋತ್ಸವ
ಬಿಳಿಕೆರೆ: ಹುಣಸೂರು ತಾಲೂಕು ಬಿಳಿಕೆರೆ ಪ್ರಾಥಮಿಕ ಶಾಲೆಯಲ್ಲಿ ನಡೆದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವಿವಿಧ ಸಂಘಗಳ ವಾರ್ಷಿಕೋತ್ಸವ ಸಂಭ್ರಮದಿಂದ ಆಚರಿಸಿತು. ಅಧಿಕಾರಿ ವಲಯದ ಮೇಲ್ವಿಚಾರಕ ಸೋಮಶೇಖರ ಕಾರ್ಯಕ್ರಮ ಉದ್ಘಾಟಿಸಿದರು. ಪಿಡಿಒ ಶ್ರೀನಿವಾಸ ಮಾತನಾಡಿದರು. ಕಾಳಿದಾಸ ನಾಯಕ, ಗ್ರಾಪಂ ಸದಸ್ಯ ರಾಜೇಶ್, ಪ್ರತಿಕಾ ಪ್ರತಿನಿಧಿ ಆರ್.ಎಂ. ಬಸವರಾಜು, ಸಂಘದ ಸದಸ್ಯರಾದ ಸಿದ್ದಪ್ಪಾಜಿ, ರಾಘವೇಂದ್ರ, ನಿಮಿಷಾಂಬ, ಕಾವೇರಿ ಒಕ್ಕೂಟದ ಅಧ್ಯಕ್ಷೆ ಲತಾಮಣಿ, ಪೂರ್ಣಿಮಾ ಇದ್ದರು. ಗೌರಮ್ಮ ಮತ್ತು ಕುಸುಮ ಸ್ವಾಗತಿಸಿದರು.
ಟಿಕೆಟ್ಗೆ ಮನವಿ
ಟಿ. ನರಸೀಪುರ: ಕಾಂಗ್ರೆಸ್ ಮುಖಂಡ ಎಸ್.ಶಂಕರ್ ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡುವಂತೆ ತಾಲೂಕಿನ ರಂಗಚಾರಿಹುಂಡಿ ಗ್ರಾಮದ ಡಾ.ಬಾಬು ಜಗಜೀವನರಾಂ ಯುವ ಹವ್ಯಾಸಿ ಕಲಾ ಸಂಘದ ಗೌರವಾಧ್ಯಕ್ಷ ಎನ್. ಶಿವಣ್ಣ ಹಾಗೂ ಅಧ್ಯಕ್ಷ ಎಸ್. ಸುನಿಲ್ ಒತ್ತಾಯಿಸಿದ್ದಾರೆ.
ಶಾಲೆಯಲ್ಲಿ ಕಳ್ಳತನ
ಹುಣಸೂರು: ತಾಲೂಕಿನ ಗುರುಪುರದ ಸರ್ಕಾರಿ ಫ್ರೌಢಶಾಲೆಯ 1.65 ಲಕ್ಷ ಬೆಲೆ ಬಾಳುವ 11 ಕಂಪ್ಯೂಟರ್, ಪ್ರೊಜೆಕ್ಟರ್ ಸೇರಿದಂತೆ ವಿವಿಧ ಬಿಡಿ ಭಾಗಗಳನ್ನು ದರೋಡೆಕೋರರು ಗುರುವಾರ ರಾತ್ರಿ ಶಾಲಾ ಕಂಪ್ಯೂಟರ್ ಕೊಠಡಿಯ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಶಾಲಾ ಕಚೇರಿಯ ಬಾಗಿಲು ಮುರಿದು ಬೀರುಗಳನ್ನು ಶೋಧನೆ ಮಾಡಿದ್ದಾರೆ. ಈ ಬಗ್ಗೆ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಮುಖ್ಯ ಶಿಕ್ಷಕ ಶ್ರೀಶೈಲ ಬಿಳಗಿ ದೂರು ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.