ಗಮನ ಸೆಳೆದ ಜಾವಾ ಬೈಕ್ ರ್ಯಾಲಿ
ಕ.ಪ್ರ.ವಾರ್ತೆ ಮೈಸೂರು ಜು. 14
ನಗರದಲ್ಲಿ ಭಾನುವಾರ ಅಂತಾರಾಷ್ಟ್ರೀಯ ಜಾವಾ ದಿನಾಚರಣೆ ಅಂಗವಾಗಿ ಜಾವಾ ಬೈಕ್ಗಳ ರ್ಯಾಲಿ ನಡೆಯಿತು.
1947 ರಿಂದ 1996 ರವರೆಗಿನ ಮಾಡೆಲ್ನ ಬೈಕ್ಗಳು ಈ ರ್ಯಾಲಿಯಲ್ಲಿ ಭಾಗವಹಿಸಿದ್ದವು. ಜಾವಾ ಸಿಝಡ್ 175 ಸಿಸಿ, ಜಾವಾ ಸಿಟಿ ಸಿಲಿಂಡರ್ 350 ಸಿಸಿ, ಯೆಜ್ಡಿ 350, ಯೆಜ್ಡಿ ರೋಡ್ಕಿಂಗ್, ಆಯಿಲ್ಕಿಂಗ್, ಯೆಜ್ಡಿ ಬಿ ಟೈಪ್ ಮತ್ತು ಯೆಜ್ಡಿ ಕೋಲ್ಟ್ ಭಾಗವಹಿಸಿದ್ದವು.
ಅಬಕಾರಿ ಮತ್ತು ಲಾಟರಿ ನಿಷೇಧ ಜಾರಿ ವಿಭಾಗದ ಎಸ್ಪಿ ಬಸವರಾಜ ಮಾಲಗತ್ತಿ ಅವರು ಈ ಬೈಕ್ ರ್ಯಾಲಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಈ ರ್ಯಾಲಿಯು ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಕುವೆಂಪುನಗರ, ಒಂಟಿಕೊಪ್ಪಲ್, ಕಾಳಿದಾಸ ರಸ್ತೆ, ಜಾವಾ ಕಾರ್ಖಾನೆ ಇದ್ದ ಸ್ಥಳ ಮತ್ತು ಬನ್ನಿಮಂಟಪದ ಬಾಲಭವನ ಬಳಿ ಅಂತ್ಯಗೊಂಡಿತು.
ಸಮೀರ್, ಮಂಜು, ಖೈಜರ್, ಹಮೀದ್, ಜಾವಾ ಕಾರ್ಖಾನೆಯ ನೌಕರರಾಗಿದ್ದ ಅನ್ವರ್, ಪ್ರಭಾಕರ್, ಶಂಕರ್, ಸಂಗಮ್, ಮಜೀದ್ ಇತರರು ಈ ರ್ಯಾಲಿಯ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

