ಮೈಸೂರು

ನಾಳೆ ವಿಶೇಷ ಸ್ವಾತಿ ಪೂಜೆ

Published On :

ಮೈಸೂರು: ಜಯಲಕ್ಷ್ಮೀಪುರಂನ ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಜು.17ರ ಸ್ವಾತಿ ನಕ್ಷತ್ರದ ಪ್ರಯುಕ್ತ ವಿಶೇಷ ಸ್ವಾತಿ ಪೂಜೆ ಏರ್ಪಡಿಸಿದೆ. ಅಂದು ಬೆಳಗ್ಗೆ 6.15ಕ್ಕೆ ಮಹಾಸುದರ್ಶನ ಹೋಮ ಮತ್ತು ಪೂರ್ಣಾಹುತಿ, ಬೆಳಗ್ಗೆ 8.30ಕ್ಕೆ ವಿಶೇಷ ಮಹಾಭಿಷೇಕ ಮತ್ತು ಪುಷ್ಪಾಲಂಕಾರ ಸೇವೆ, ಮಧ್ಯಾಹ್ನ ಒಂದಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ರಾತ್ರಿ 7.30 ಕ್ಕೆ ಪ್ರಾಕಾರೋತ್ಸವ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಸಿ.ವಿ. ಶ್ರೀನಿವಾಸರಾವ್ ತಿಳಿಸಿದ್ದಾರೆ.
ಸಂಪ್ರದಾಯ ಗೀತೆ ತರಗತಿ
ಮೈಸೂರು: ಕುವೆಂಪುನಗರದ ಮೈಸೂರು ಸಂಗೀತ ಪ್ರತಿಷ್ಠಾನ ವತಿಯಿಂದ ಸಂಪ್ರದಾಯ ಗೀತೆಗಳ ತರಗತಿ ನಡೆಸಲಾಗುತ್ತದೆ. ತರಗತಿಯಲ್ಲಿ ಡಾ.ಮನೋನ್ಮಣಿ ಅವರು ಮದುವೆ, ಮುಂಜಿ, ಸೀಮಂತ ಇತ್ಯಾದಿ ಸಮಾರಂಭಗಳಲ್ಲಿ ಹಿಂದಿನವರು ಹಾಡುತ್ತಿದ್ದ ಸಂಪ್ರದಾಯ ಗೀತೆಗಳು ಹಾಗೂ ದೇವರನಾಮಗಳನ್ನು ಕಲಿಸಿಕೊಡುವರು. ಆಸಕ್ತರು ಮೊ. 91411196511 ಸಂಪರ್ಕಿಸಬಹುದು.
ಸಂಗೀತ ಕಾರ್ಯಕ್ರಮ
ಮೈಸೂರು: ಜೆಎಸ್‌ಎಸ್ ಮಹಾವಿದ್ಯಾಪೀಠವು, ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜು.19ರ ಸಂಜೆ 6ಕ್ಕೆ ವಿದುಷಿ ಎಂ.ಎಸ್. ಶೀಲಾ ಅವರ ಗಾಯನ ಕಾರ್ಯಕ್ರಮ ಏರ್ಪಡಿಸಿದೆ. ಕಾಲೇಜು ಆವರಣದಲ್ಲಿ ನಿರ್ಮಿಸಿರುವ ಶ್ರೀ ಮಹಾವಿದ್ಯಾಗಣಪತಿ ದೇವಸ್ಥಾನಕ್ಕೆ 25 ವರ್ಷ ತುಂಬಿದ ನೆನಪಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.