ದಿನವಿಡೀ ಸಂಗೀತದ ನಾದದ ಒಲುಮೆ
ಕ.ಪ್ರ.ವಾರ್ತೆ ಮೈಸೂರು ಜು. 21
ಕಳೆದ ದಸರಾ ಸಂದರ್ಭದಲ್ಲಿ ಅರಮನೆ ಮುಂಭಾಗ ಸೂರ್ಯೋದಯದಿಂದ ಸೂರ್ಯಸ್ತಮಾನದವರೆಗೆ ಎಂಬ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮ ಸವಿದಿದ್ದ ಮೈಸೂರಿಗರಿಗೆ ಭಾನುವಾರ ದಿನವಿಡಿ ನಡೆದ ಇಂಪು ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ರಸಸ್ವಾದವನ್ನು ಉಣಬಡಿಸಿತು.
ಇಂತಹ ವಿನೂತನ ಪ್ರಯೋಗಕ್ಕೆ ಕಾರಣವಾಗಿದ್ದು ಪಂಡಿತ ತಾರಾನಾಥ ಫೌಂಡೇಷನ್. ಸಂಗೀತ ಲೋಕದ ದಿಗ್ಗಜರೆನೆಸಿದ ಪಂ. ತಾರಾನಾಥರು ಅಹೋರಾತ್ರಿ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಅವರ ಪುತ್ರರಾದ ಸರೋದ್ ವಾದಕ ರಾಜೀವ್ ತಾರಾನಾಥ ಅವರೂ ಕೂಡ ಜನಮನ್ನಣೆ ಗಳಿಸಿದ್ದವರು. ಇವರು ಮೈಸೂರಿನಿಂದ ಬೆಂಗಳೂರಿಗೆ ಸ್ಥಳಾಂತರವಾದ ಮೇಲೆ ತಂದೆಯ ಹೆಸರಿನಲ್ಲಿ ಫೌಂಡೇಷನ್ ಸ್ಥಾಪಿಸಿದರು. ಈ ಸಂಸ್ಥೆಯಿಂದ ಸಂಗೀತ ಲೋಕಕ್ಕೆ ಕೊಡುಗೆ ನೀಡುವ ಹಂಬಲದೊಂದಿಗೆ ಭಾನುವಾರ ಇಂಪು ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಗರದ ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ದಿನವಿಡಿ ಕಾರ್ಯಕ್ರಮ ನಡೆಯಿತು. ಬೆಳಗ್ಗೆ 8.30ಕ್ಕೆ ಆಸೀನರಾಗಿದ್ದ ಕಲಾರಸಿಕರಿಗೆ ರಸಸ್ವಾದಕ್ಕೆ ಭಂಗವಾಗದಂತೆ ಅತ್ಯಂತ ಸರಳವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೊದಲಿಗೆ ಸಂಜನಾ ಕೌಶಿಕ್ ಗಾಯನ ಪ್ರಸ್ತುತಪಡಿಸಿದರು. ಅವರಿಗೆ ಮಿಲಿಂದ್ ತಬಲ, ಹಾರ್ಮೋನಿಯಂ ನಿತಿನ್ ರಾಜಾರಾಮ ಶಾಸ್ತ್ರಿ ಪಕ್ಕವಾದ್ಯದಲ್ಲಿ ಸಾಥ್ ನೀಡಿದರು.
ಬಳಿಕ ನಿಶಾಂತ್ ಗಾಯನ, ರಮೇಶ್ ಧನ್ನೂರ್ ತಬಲ, ಪ್ರಭುರಾವ್ ಹಾರ್ಮೋನಿಯಂ, ಸಮೀರ್ ರಾವ್ ಬಾನ್ಸುರಿ, ಮಿಲಿಂದ್ ತಬಲ, ಪೂರ್ಣಿಮಾ ಭಟ್ ಕುಲಕಣಿ ಗಾಯನ, ಭೀಮಾಶಂಕರ ಬಿದನೂರು ತಬಲಾ, ಶ್ರೀರಾಮ ಭಟ್ ಹಾರ್ಮೋನಿಯಂ, ಇಂದೂಧರ ನಿರೋಡಿ ಗಾಯನ, ರಮೇಶ್ ಧನ್ನೂರ್ ತಬಲಾ, ವೀರಭದ್ರಯ್ಯ ಹಿರೇಮಠ ಹಾರ್ಮೋನಿಯಂ, ಪಂ. ನರಸಿಂಹ ವಡವಾಟಿ ಕ್ಲಾರಿಯೋನೆಟ್, ಜಗದೀಶ್ ಡಿ. ಕುರ್ತಕೋಟಿ ತಬಲ ನುಡಿಸಿದರು.
ಮಧ್ಯಾಹ್ನದ ಭೋಜನವಾದ ನಂತರ ಇಳಿಸಂಜೆಯಿಂದ ರಾತ್ರಿವರೆಗೆ ಸರ್ಫರಾಜ್ ಖಾನ್ ಸಾರಂಗಿ, ಸುದತ್ತ ತಬಲಾ, ಎಸ್. ಹಿರಣ್ಮಯಿ ಗಾಯನ, ಭೀಮಾಶಂಕರ ಬಿದನೂರು ತಬಲಾ, ಪ್ರಭುರಾವ್ ಹಾರ್ಮೋನಿಯಂ, ರವಿಶಂಕರ ಮಿಶ್ರ ಬಾನ್ಸುರಿ, ಕಿರಣ್ ಯಾವಗಲ್ ತಬಲಾ, ಉಸ್ತಾದ್ ಫಯ್ಯಾಜ್ಖಾನ್ ಗಾಯನ, ಡಾ. ರವೀಂದ್ರ ಕಾಟೋಟಿ ಹಾರ್ಮೋನಿಯಂ, ಪಂ. ಪ್ರಬೀರ್ ಭಟ್ಟಾಚಾರ್ಯ ಸಿತಾರ್, ಪಂ. ರವೀಂದ್ರ ಯಾವಗಲ್ ತಬಲಾ, ಪಂ. ಪರಮೇಶ್ವರ ಹೆಗಡೆ ಗಾಯನ, ಕಿರಣ್ ಯಾವಗಲ್ ತಬಲಾ ಹಾಗೂ ಅಂತಿಮ ಕಾರ್ಯಕ್ರಮವಾಗಿ ಪಂ. ರಾಜೀವ ತಾರಾನಾಥ್ ಅವರಿಂದ ಸರೋದ್ ವಾದನ ಸಂಗೀತಾಸಕ್ತರನ್ನು ಸೆಳೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

