ನೇರ ದ್ವಿತೀಯ ಪಿಯುಸಿಗೆ ಅರ್ಜಿ
ಮೈಸೂರು: ಪ್ರಥಮ ಪಿಯುಸಿ ಫೇಲಾದವರಿಗೆ ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಜಿ.ಆರ್.ಎನ್. ಅಕಾಡೆಮಿ ಅರ್ಜಿ ಆಹ್ವಾನಿಸಿದೆ. ಕಾಲೇಜು ಶಿಕ್ಷಣ ಮಾದರಿಯಲ್ಲಿ ತರಗತಿ ನಡೆಸುವುದರ ಜತೆಗೆ, ನೆನಪಿನ ಶಕ್ತಿ ಹಾಗೂ ಕಲಿಕೆಯ ಬಗ್ಗೆ ಮಾರ್ಗದರ್ಶನ ಮಾಡಲಾಗುವುದು. ಪ್ರಥಮ ಪಿಯುಸಿ ಅನುತ್ತೀರ್ಣರಾದವರು, ಡಿಪ್ಲೊಮಾ, ಐಟಿಐ ಫೇಲ್ ಆದವರು ಭಾಗವಹಿಸಬಹುದು. ಮಾಹಿತಿಗೆ ಮೊ. 9535161811 ಅಥವಾ 9448601454 ಸಂಪರ್ಕಿಸಬಹುದು.
ಹರಿ ವಿದ್ಯಾಲಯ ಶೇ. 100
ಮೈಸೂರು: ಈ ಬಾರಿಯ ಸಿಬಿಎಸ್ಸಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಬೋಗಾದಿಯ ರೇಲ್ವೆ ಕಾಲೋನಿಯಲ್ಲಿರುವ ಹರಿ ವಿದ್ಯಾಲಯ ವಿದ್ಯಾರ್ಥಿಗಳು ಶೇ. 100 ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಪ್ರತಿಶತ 31 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಹಾಗೂ ಪ್ರತಿಶತ 54 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಇವರಲ್ಲಿ ಎಂ. ನಿಶ್ಚಯ 9.8, ಎಸ್. ನಿಸರ್ಗ 9.6, ಎಸ್. ಮಹೀಧರ 9.2 ಹಾಗೂ ಎಸ್. ಶ್ರೀಕೃಷ್ಣ 9 ಸಿಜಿಪಿಎ ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಟೀನು ರಾಮಚಂದ್ರ ಉತ್ತಮ ಸಾಧನೆ
ಮೈಸೂರು: ಈ ಬಾರಿಯ ಸಿಬಿಎಸ್ಸಿ ಪರೀಕ್ಷೆಯಲ್ಲಿ ಸರಸ್ವತಿಪುರಂನ ಮಹಾಬೋಧಿ ಶಾಲೆಯ ಟೀನು ರಾಮಚಂದ್ರ ಅವರು ಎಲ್ಲಾ ವಿಷಯಗಳಲ್ಲಿ ತಲಾ 10 ಸಿಜಿಪಿಎ ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಇವರು ನಗರದ ಕೆ.ಎನ್. ರಾಮಚಂದ್ರ ಹಾಗೂ ಕೆ. ಜ್ಯೋತಿ ಅವರ ಪುತ್ರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

