ಸಸಿ ನೆಟ್ಟು ಪರಿಸರ ದಿನ ಆಚರಣೆ
ಕ.ಪ್ರ.ವಾರ್ತೆ , ಮೈಸೂರು , ಜೂ. 5
ಸಂಸ್ಥೆಯ ಜಂಟಿ ನಿರ್ದೇಶಕ ಡಾ.ವಿ.ವಿ. ಕುಮಾರ್ ಅವರು ಆಹಾರದ ಸಮರ್ಪಕ ಬಳಕೆಯ ಕುರಿತು ಬೆಳಕು ಚೆಲ್ಲುವ ಪ್ರಯತ್ನಕ್ಕೆ ವಿಶ್ವ ಸಂಸ್ಥೆ ಮುಂದಾಗಿದೆ. ಆಹಾರ ಪದಾರ್ಥ ಪೋಲಾಗುವುದಕ್ಕೆ ಕಡಿವಾಣ ಹಾಕಿ, ಹಸಿದವರಿಗೆ ಆಹಾರ ನೀಡಬೇಕೆನ್ನುವ ಮಹತ್ವದ ಉದ್ದೇಶವನ್ನು ಈ ಧ್ಯೇಯ ವಾಕ್ಯ ಹೊಂದಿದೆ ಎಂದು ತಿಳಿಸಿದರು. ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ವಿಶ್ವದ ಪ್ರತಿ 7 ಜನರಲ್ಲಿ ಒಬ್ಬ ಹಸಿವಿನಿಂದ ನರಳುತ್ತಿರುತ್ತಾನೆ. ಪ್ರತಿ ವರ್ಷ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 20 ಸಾವಿರ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ. ಪ್ರಕೃತಿಯ ನಾಲ್ಕು ಮುಖಗಳೆಂದರೆ ನಿರಾಕರಣೆ, ಕಡಿತ, ಮರುಬಳಕೆ, ಪುನರ್ ನವೀಕರಣ ಸಿದ್ಧಾಂತಗಳು. ಇವುಗಳನ್ನು ಮನದಟ್ಟು ಮಾಡಿ ಪರಿಸರಸ್ನೇಹಿ ಕ್ರಮ ಅನುಸರಿಸಿ ಪ್ರತಿಯೊಬ್ಬರೂ ಸ್ವಚ್ಛ ಪರಿಸರಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು. ಕೆಎಂಎಫ್ ನಿವೃತ್ತ ಹಿರಿಯ ಉಪನಿರ್ದೇಶಕ ಕೆ. ರಾಂಪ್ರಸಾದ್, ಸಹಕಾರಿ ತರಬೇತಿ ಸಂಸ್ಥೆ ನಿವೃತ್ತ ಪ್ರಾಂಶುಪಾಲ ಗೋವಿಂದೇಗೌಡ, ಡೆಲ್ಟಾ ಇನ್ ಫಾರ್ಮೆಟಿಕ್ಸ್ ಮುಖ್ಯಸ್ಥ ಶ್ರೀನಿವಾಸ್ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

