ಮೈಸೂರು

9ರಂದು ತಿರು ಕಲ್ಯಾಣ ಮಹೋತ್ಸವ

Published On :

ಕ.ಪ್ರ.ವಾರ್ತೆ ,   ಮೈಸೂರು ,   ಜೂ. 5
ಇಲ್ಲಿನ ಕಲ್ಯಾಣಗಿರಿ ನಗರದ ಡಾ. ರಾಜ್‌ಕುಮಾರ್ ರಸ್ತೆಯ ಕಲ್ಯಾಣ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನದ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಜೂ. 9ರಂದು ತಿರು ಕಲ್ಯಾಣ ಮಹೋತ್ಸವ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ತಿರುಮಲ ತಿರುಪತಿ ದೇವಸ್ಥಾನದಿಂದ ನೇರವಾಗಿ ಬಂದು ಜೂ. 9ರ ಸಂಜೆ 4ಕ್ಕೆ ತಿರು ಕಲ್ಯಾಣ ಮಹೋತ್ಸವ ನೆರವೇರಿಸಲಾಗುತ್ತದೆ ಎಂದು ದೇವಸ್ಥಾನ ಸಂಸ್ಥಾಪಕ ಎಚ್.ಜಿ. ಗಿರಿಧರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೂ. 8ರ ಬೆಳಗ್ಗೆ 7ಕ್ಕೆ ಸ್ವಸ್ತಿವಾಚನ, ಆಚಾರ್ಯ ವರುಣ, ಋತ್ವಿಕಾವರಣ, ಸಭಾನುಜ್ಞ, ಭಗವದ್ ವಾಸುದೇವ ಪುಣ್ಯಾಹ, ರಕ್ಷಬಂಧನ, ಶತಕಲಶ ಸ್ಥಾಪನೆ, ಮಹಾಸಂಕಲ್ಪ, ಯಾಗಶಾಲಾ ಪ್ರವೇಶ, ಪ್ರಾಕಾರೋತ್ಸವ, ನಿವೇದನ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ 5.30ಕ್ಕೆ ಮಹಾಸಂಕಲ್ಪ, ಮಹಾಸುದರ್ಶನ ಹೋಮ, ಪೂರ್ಣಾಹುತಿ, ಪ್ರಾಕಾರೋತ್ಸವ, ನಿವೇದನ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ ಎಂದರು.
ಜೂ. 9ರ ಬೆಳಗ್ಗೆ 6ಕ್ಕೆ ಸುಪ್ರಭಾತ ಸೇವೆ 8ಕ್ಕೆ ಸಂಕಲ್ಪ, ಲಕ್ಷ್ಮೀನಾರಾಯಣ ಹೋಮ, ಪೂರ್ಣಾಹುತಿ, ಪ್ರಾಕಾರೋತ್ಸವ ನಿವೇದನ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯುತ್ತದೆ. ಸಂಜೆ 4ಕ್ಕೆ ತಿರುಮಲ ತಿರುಪತಿ ದೇವಸ್ಥಾನದಿಂದ ನೇರವಾಗಿ ಬಂದು ತಿರುಕಲ್ಯಾಣ ಮಹೋತ್ಸವ ನೆರವೇರಿಸಲಾಗುತ್ತದೆ. ಅಂದು ಸಂಜೆ ರಂಗೋಲಿ ಸ್ಪರ್ಧೆ, ಕೋಲಾಟ ನಡೆಯಲಿದೆ. ವಿವಿಧ ಭಜನಾ ತಂಡಗಳು ಏಕರಾಗದಲ್ಲಿ ಭಜನೆ ನಡೆಸುವುದಾಗಿ ಹೇಳಿದರು.
ಜೂ. 10ರ ಬೆಳಗ್ಗೆ 6ಕ್ಕೆ ಸುಪ್ರಭಾತ ಸೇವೆ, ಶ್ರೀನಿವಾಸ ದೇವರಿಗೆ ಶತಕಳಶಾಭಿಷೇಕ, ನಿವೇದನ, ಪ್ರಾಕಾರೋತ್ಸವ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಸಂಜೆ 6ಕ್ಕೆ ರಾಜಬೀದಿಯಲ್ಲಿ ಮುತ್ತಿನ ಪಲ್ಲಕ್ಕಿ ಉತ್ಸವ ಮೆರವಣಿಗೆ ಮತ್ತು ರಾತ್ರಿ ಶಯನೋತ್ಸವ, ನಿವೇದನ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯುತ್ತದೆ ಎಂದು ತಿಳಿಸಿದರು.
ತಿರುಪತಿಯಿಂದ 10 ಸಾವಿರ ಲಾಡು ತಂದು ಕಲ್ಯಾಣ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಹಂಚಲಾಗುವುದು. ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು 50 ಸಾವಿರ ಮಂದಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು, 10 ರಿಂದ 15 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ ಕೆ.ಪಿ. ವಿಜಯ್‌ಕುಮಾರ್, ಕಾರ್ಯದರ್ಶಿ ಲಕ್ಷ್ಮೀನಾರಾಯಣ್, ಉಪಾಧ್ಯಕ್ಷ ದಯಾನಿಧಿ, ರವಿಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.