ಮೈಸೂರು

ಕಾಂತರಾಜ ಸ್ವಾಮಿ ವಿಧಿವಶ

Published On :

ಕ.ಪ್ರ.ವಾರ್ತೆ   ನಂಜನಗೂಡು   ಜೂ. 6
ಕಪಿಲಾ ನದಿ ದಡದಲ್ಲಿರುವ ಕರ್ನಾಟಕದ ಶಬರಿಮಲೆ ಎಂದೇ ಪ್ರಸಿದ್ಧಿಯಾಗಿರುವ ಸ್ವಾಮಿ ಅಯ್ಯಪ್ಪ ದೇಗುಲದ ಸಂಸ್ಥಾಪಕರು ಹಾಗೂ ಗುರುಸ್ವಾಮಿಗಳಾದ ಪಿ. ಕಾಂತರಾಜ ಸ್ವಾಮಿ (63) ಗುರುವಾರ ಮಧ್ಯಾಹ್ನ ನಿಧನರಾದರು.
ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಎಂಡಿಎ ಮಾಜಿ ಅಧ್ಯಕ್ಷ ಪಿ. ಗೋವಿಂದರಾಜು, ನಗರಪಾಲಿಕೆ ಮಾಜಿ ಸದಸ್ಯ ಪಿ. ದೇವರಾಜ್ ಮೃತರ ಸಹೋದರರು.
ಇವರು ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕೇರಳದ ಶಬರಿಮಲೆ ಯಾತ್ರೆಗೆ ಸ್ನೇಹಿತರೊಡನೆ ಮಾಲೆ ಧರಿಸಿ ಅನೇಕ ಬಾರಿ ತೆರಳುತ್ತಿದ್ದ ಕಾಂತರಾಜಸ್ವಾಮಿ, ಅಲ್ಲಿ ನೂಕು ನುಗ್ಗಲಿನಲ್ಲಿ ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆಯುತ್ತಿದ್ದದನ್ನು ಗಮನಿಸಿ, ಕೇರಳದ ಅಯ್ಯಪ್ಪ ದೇಗುಲದ ಮಾದರಿಯಲ್ಲಿಯೇ ರಾಜ್ಯದ ದಕ್ಷಿಣ ಕಾಶಿ ಪ್ರಖ್ಯಾತಿಯ ನಂಜನಗೂಡಿನಲ್ಲಿಯೂ ಅಯ್ಯಪ್ಪ ದೇಗುಲದ ನಿರ್ಮಾಣ ಮಾಡಲು ತೀರ್ಮಾನಿಸಿ, ನಟ ದಿವಂಗತ ಡಾ. ರಾಜ್ಕುಮಾರ್ ಅಮೃತಹಸ್ತದಿಂದ ದೇಗುಲದ ಭೂಮಿ ಪೂಜೆ ನೆರವೇರಿಸಿ ಸಾರ್ವಜನಿಕರ ಸಹಕಾರದೊಡನೆ ದೇವಾಲಯ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾದರು.
1997ರ ಜೂ. 6ರಂದು ನಂಜನಗೂಡಿನಲ್ಲಿ ಅಯ್ಯಪ್ಪಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಕಾಕತಾಳೀಯ ಎಂಬಂತೆ 2013ರ ಜೂ.6 ರಂದೆ ಪಿ. ಕಾಂತರಾಜ ಸ್ವಾಮಿ ವಿಧಿವಶವಾಗಿರುವುದು ದೇವಾಲಯದ ಸಿಬ್ಬಂದಿ ಮತ್ತು ಭಕ್ತ ವೃಂದಕ್ಕೆ ಅಪಾರ ನೋವುಂಟು ಮಾಡಿದೆ. ವರನಟ ದಿ ಡಾ. ರಾಜ್ಕುಮಾರ್ ಅವರ ಕುಟುಂಬದ ನಿಕಟ ಸಂಬಂಧಿಗಳಾಗಿದ್ದರು.
ಇಂದು ಅಂತ್ಯಕ್ರಿಯೆ: ಮೃತ ಪಿ. ಕಾಂತರಾಜ ಸ್ವಾಮಿ ಅವರ ಅಂತ್ಯಕ್ರಿಯೆ ಮೈಸೂರು ತಾಲೂಕಿನ ವರುಣದಲ್ಲಿರುವ ದಿ ಪಿ. ಸುಂದರ್ ಅವರ ತೋಟದಲ್ಲಿ ಜೂ.7ರ ಮಧ್ಯಾಹ್ನ 12ಕ್ಕೆ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮಲ್ಲನಮೂಲೆ ಮಠದ ಚನ್ನಬಸವ ಸ್ವಾಮೀಜಿ, ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್, ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ, ಮಾಜಿ ಸಚಿವ ಎಂ. ಮಹದೇವ್, ಕಳಲೆ ಕೇಶವಮೂರ್ತಿ, ಎಸ್. ಮಹದೇವಯ್ಯ, ಕೆಪಿಸಿಸಿ ಸದಸ್ಯ ಕೆ.ಆರ್. ಮೋಹನ್ಕುಮಾರ್ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.