ಮೈಸೂರು

ಇಂಗ್ಲಿಷ್ ಸಂವಹನ 10ರಂದು ತರಗತಿ

Published On :

ಮೈಸೂರು: ಮೈಸೂರು ವಿವಿಯ ಸಾಮರ್ಥ್ಯಾಭಿವೃದ್ಧಿ ಮತ್ತು ಉದ್ಯೋಗವಕಾಶಗಳ ಸೇವಾ ಕೇಂದ್ರವು ಮಾನಸ ಗಂಗೋತ್ರಿಯ ಸಂಸ್ಥೆಯಲ್ಲಿ  ಸಂಶೋಧನಾ ವಿದ್ಯಾರ್ಥಿಗಳಿಗೆ ವಿಶೇಷ ಸಂವಹನ ತರಗತಿ ಆಯೋಜಿಸಿದೆ. ಜೂ. 10ರಂದು ಬೆಳಗ್ಗೆ 10.30ಕ್ಕೆ ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಉದ್ಘಾಟಿಸುವರು. ಪ್ರಸಾರಾಂಗ ನಿರ್ದೇಶಕ ಪ್ರೊ. ಸಿ. ನಾಗಣ್ಣ ಮುಖ್ಯ  ಅತಿಥಿಯಾಗಿ ಭಾಗವಹಿಸುವರು.
ಚಿತ್ರಕಲಾ ಶಿಕ್ಷಣಕ್ಕೆ ಅರ್ಜಿ ಆಹ್ವಾನ
ಮೈಸೂರು: ಚಿತ್ರಕಲೆ, ಶಿಲ್ಪಕಲೆ, ವಾಸ್ತುಶಿಲ್ಪ ಹಾಗೂ ಶಿಕ್ಷಣ ತರಬೇತಿಗೆ ಚೆನ್ನಪಟ್ಟಣದ ಕೆಂಗಲ್ನಲ್ಲಿ ಹೊಂಬೇಗೌಡ ಶಿಕ್ಷಣ ಸಂಸ್ಥೆಯ ಗಂಗರಸ ಕಾಲೇಜ್ ಆಫ್ ಫೈನ್ಸ್ ಆರ್ಟ್ಸ್ ಕಾಲೇಜು ಅರ್ಜಿ ಆಹ್ವಾನಿಸಿದೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತೀರ್ಣ ಅಥವಾ ಅನುತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಬೆಂಗಳೂರು ವಿವಿಯಿಂದ ಬಿವಿಎ ಪದವಿಗೆ ಮಾನ್ಯತೆ ಪಡೆಯಲಾಗಿದೆ. ವಿವಿಧ ಕಲೆಗಳ ಕುರಿತು ಉನ್ನತ ಶಿಕ್ಷಣ ಪಡೆಯಬಹುದಾಗಿದೆ ಎಂದು ಪ್ರಾಂಶುಪಾಲ ಎಂ.ಎನ್. ದೊಡ್ಡಚಾರ್ ತಿಳಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಊಟ ಹಾಗೂ ವಸತಿಯ ವ್ಯವಸ್ಥೆ ಜತೆಗೆ ಬಸ್ ಅಥವಾ ರೈಲು ಪಾಸ್ ನೀಡಲಾಗುವುದು. ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ ವಿದ್ಯಾರ್ಥಿ ವೇತನ ಸೌಲಭ್ಯವಿರುತ್ತದೆ. ಮಾಹಿತಿಗೆ ಕೆಂಗಲ್ನಲ್ಲಿರುವ ಸಂಸ್ಥೆಯಾಗಲಿ ಅಥವಾ 080- 27300884 ಅಥವಾ ಮೊ. 8762990729 ಸಂಪರ್ಕಿಸಬಹುದು ಎಂದಿದ್ದಾರೆ.
ವಿದ್ಯಾರ್ಥಿನಿಲಯಕ್ಕೆ ಪ್ರವೇಶ
ಮೈಸೂರು: ರಾವ್ ಬಹದ್ದೂರ್ ಧರ್ಮಪ್ರವರ್ತಕ ಗುಬ್ಬಿ ತೋಟದಪ್ಪನವರ ಧರ್ಮಸಂಸ್ಥೆಯ ಅಕ್ಕಮಹಾದೇವಿ ವಿದ್ಯಾರ್ಥಿನಿಲಯಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2013- 14ನೇ ಶೈಕ್ಷಣಿಕ ಸಾಲಿಗೆ ಪ್ರತಿಭೆ ಮತ್ತು ಬಡತನದ ಆಧಾರದ ಮೇಲೆ ಡಿಪ್ಲೊಮಾ, ನರ್ಸಿಂಗ್, ಐಟಿಐ, ಡಿ.ಇಡಿ, ಬಿಇ, ಎಂಬಿಬಿಎಸ್, ಬಿಎಎಂಎಸ್ ಮತ್ತು ಬಿ.ಡಿಎಸ್ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುವ ವೀರಶೈವ ಬಡ ವಿದ್ಯಾರ್ಥಿನಿಯರಿಗೆ ವಸತಿ ಮತ್ತು ಊಟದ ಉಚಿತ ವ್ಯವಸ್ಥೆ ಇದೆ. ಆಸಕ್ತರು ನಂ. 2,1, ಸಿದ್ದಪ್ಪಾಜಿ ದೇವಸ್ಥಾನದ ಹತ್ತಿರ, ಆಲನಹಳ್ಳಿ ಬಡಾವಣೆ, ಮೈಸೂರು- 11 ಇಲ್ಲಿ ಜೂ. 15ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಧರ್ಮಸಂಸ್ಥೆಯ ಗೌರವ ಕಾರ್ಯದರ್ಶಿ ಎನ್.ಎಸ್. ಬಸವರಾಜು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.