ಪ್ರೊ.ರಾಮದಾಸ್ ನೆನಪಿನಲಿ ನಾಳೆ
ಮೈಸೂರು: ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯಿಂದ ಜೂ.23ರ ಬೆಳಗ್ಗೆ 10.30ಕ್ಕೆ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ಪ್ರೊ.ಕೆ. ರಾಮದಾಸ್ ನೆನಪಿನಲಿ ಸಂವಾದ ಏರ್ಪಡಿಸಲಾಗಿದ್ದು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ಮಟ್ಟು ಉದ್ಘಾಟಿಸುವರು. ಚಿಂತಕ ಪ್ರೊ.ಎಚ್.ಎಲ್. ಕೇಶವಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಪತ್ರಿಕೋದ್ಯಮಿ ರಾಜಶೇಖರ ಕೋಟಿ ಪುಸ್ತಕ ಬಿಡುಗಡೆಗೊಳಿಸುವರು. ಸಾಹಿತಿ ಡಾ.ಕೆ. ಮರಳುಸಿದ್ದಪ್ಪ ಪ್ರಶಸ್ತಿ ಪ್ರದಾನ ಮಾಡುವರು.
ನಾಳೆ ವಾರ್ಷಿಕ ಮಹಾಸಭೆ
ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆಯು ಜೂ.23ರ ಬೆಳಗ್ಗೆ 11ಕ್ಕೆ ದೇವಯ್ಯ ಭವನದಲ್ಲಿ ನಡೆಯಲಿದೆ ಎಂದು ಕಾರ್ಯದರ್ಶಿ ಪಿ. ಲಕ್ಷ್ಮಣ್ ತಿಳಿಸಿದ್ದಾರೆ. ಮೊ. 94490 09244 ಸಂಪರ್ಕಿಸಬಹುದು.
ನಾಳೆ ವಿಶ್ವ ತಂದೆಯರ ದಿನ
ಕಾಳಿದಾಸ ರಸ್ತೆಯ ವಿಎಲ್ಸಿಸಿ ಸಂಸ್ಥೆಯಲ್ಲಿ ವಿಶ್ವ ತಂದೆಯರ ದಿನಾಚರಣೆ ಅಂಗವಾಗಿ ಜೂ.23ರ ಬೆಳಗ್ಗೆ 11ಕ್ಕೆ ಆರೋಗ್ಯ ತಪಾಸಣೆ, ರಸಪ್ರಶ್ನೆ, ಸಮತೋಲನ ಆಹಾರ ಪ್ರದರ್ಶನ, ಮನರಂಜನ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ದೂ.0821- 4252621 ಸಂಪರ್ಕಿಸಿ.
ಶಂಕಿತ ಡೆಂಘೀಗೆ ಒಬ್ಬ ಸಾವು
ಜ್ವರದಿಂದ ಬಳಲಿ ವ್ಯಕ್ತಿಯೊಬ್ಬರು ಶುಕ್ರವಾರ ಮೃತಪಟ್ಟಿದ್ದು, ಡೆಂಘೀಗೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು ನಂದಿಪುರ ಗ್ರಾಮದ ಕೃಷ್ಣೇಗೌಡ (40) ಮೃತಪಟ್ಟವರು. ಗುರುವಾರ ಬೆಳಗ್ಗೆ ತೀವ್ರ ಜ್ವರದಿಂದ ಕೃಷ್ಣೇಗೌಡರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರತಿಭಾ ಪುರಸ್ಕಾರ
ಶ್ರೀ ಬಸವೇಶ್ವರ ಗೃಹನಿರ್ಮಾಣ ಸಹಕಾರ ಸಂಘದಿಂದ ಜೂ.23ರ ಬೆಳಗ್ಗೆ 11ಕ್ಕೆ ರಾಮಾನುಜ ರಸ್ತೆಯಲ್ಲಿರುವ ಸಂಘದ ಉದ್ದೇಶಿತ ಬಡಾವಣೆಯಲ್ಲಿ ಪ್ರಥಮ ಕಂತಿನ ನಿವೇಶನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿದ್ದು, ಶ್ರೀ ಶಿವರಾತ್ರಿ ಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಚಿವ ಎಚ್.ಎಸ್. ಮಹದೇವಪ್ರಸಾದ್ ಭಾಗವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

