ಮೈಸೂರು

ಬಸವಣ್ಣನ ಕಾಯಕ ತತ್ವ ಪಾಲಿಸಿ

Published On :

ಕ.ಪ್ರ.ವಾರ್ತೆ   ರಾವಂದೂರು   ಜೂ. 22
ಬಸವಣ್ಣ ಸರ್ವ ಕಾಲಕ್ಕೂ, ಸರ್ವರಿಗೂ ಬೆಳಕಾಗಿ ಒಡಮೂಡುತ್ತಾರೆ. 12ನೇ ಶತಮಾನದಲ್ಲಿ ತೆರೆದ ಅನುಭವ ಮಂಟಪ ಎಂಬ ಮಹಾ ಪರಿಕಲ್ಪನೆ ಇಂದು ನಮಗೆ ಸಂವಿಧಾನವಾಗಿ ಹೊರಹೊಮ್ಮಿದೆ ಎಂದು ಮಡಿಕೇರಿಯ ಸರಸ್ವತಿ ಡಿ.ಇಡಿ. ಕಾಲೇಜಿನ ಪ್ರಾಂಶುಪಾಲ ಕುಮಾರ್ ಅಭಿಪ್ರಾಯಪಟ್ಟರು.
ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಗ್ರಾಮದಲ್ಲಿ ನಡೆದ 202ನೇ ಮಾಸಿಕ ಶರಣರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣನವರ ಕುರಿತಾಗಿ ಪ್ರವಚನ ನೀಡಿದರು.
ಸಮಾನತೆ, ಭ್ರಾತೃತ್ವ ಹಾಗೂ ಸಾಮರಸ್ಯವನ್ನು ಜಗತ್ತಿಗೆ ಸಾರಿದ ಮಹಾತಪಸ್ವಿ ಕಾಯಕಯೋಗಿ ಬಸವಣ್ಣನವರ ಜೀವನ ಆದರ್ಶವನ್ನು ಪ್ರತಿಯೊಬ್ಬರೂ ಕೈಗೂಡಿಸಿಕೊಂಡರೆ ಜಗತ್ತಿನಲ್ಲಿ ಅಶಾಂತಿಯೇ ಇರಲಾರದು ಎಂದು ತಿಳಿಸಿದರು.
ಲಂಡನ್ ಹಾಗೂ ಅಮೆರಿಕಾದಂತಹ ಹೊರರಾಷ್ಟ್ರಗಳಲ್ಲಿ ಬಸವಣ್ಣನ ಪುತ್ಥಳಿಗಳನ್ನು ಪ್ರತಿಷ್ಠಾಪಿಸಿ ಅವರ ಆದರ್ಶವನ್ನು ಅರಿವು ಮೂಡಿಸುವ ಪ್ರಯತ್ನ ಅಲ್ಲಿನ ಪ್ರಜೆಗಳಿಂದ ಆಗುತ್ತಿದೆ. ಆದರೆ, ಬಸವಣ್ಣ ಹುಟ್ಟಿದ ಪುಣ್ಯಭೂಮಿ ಭಾರತದಲ್ಲಿ ಬಸವಣ್ಣನವರ ಆದರ್ಶ ಅರಿಯುವಲ್ಲಿ ನಾವು ತೋರುತ್ತಿರುವ ನಿರಾಸಕ್ತಿ ಇಂದಿನ ಎಲ್ಲಾ ಅಶಾಂತಿಗಳಿಗೆ ಕಾರಣವಾಗುತ್ತಿದೆ ಎಂದು ವಿಷಾದಿಸಿದರು.
ಮುರುಘಾ ಮಠದ ಪೀಠಾಧಿಪತಿ ಮೋಕ್ಷಪತಿ ಶ್ರೀಗಳು ಆಶೀರ್ವಚನ ನೀಡಿ, ಬಸವಾದಿ ಶರಣರ ಪರಂಪರೆಯನ್ನು ಜನರಲ್ಲಿ ಬಿಂಬಿಸಲು, ಸ್ವಚ್ಛ, ಸುಂದರ ಸಮಾಜ ಕಟ್ಟುವ ಕೈಗಳನ್ನು ಸೃಷ್ಟಿಸಲು, ಮಕ್ಕಳಲ್ಲಿ ಉತ್ತಮ ಸಂಸ್ಕಾರ ಒಡಮೂಡಿಸುವ ದಿಸೆಯಿಂದ ಶ್ರೀಮಠದ ವತಿಯಿಂದ ಶರಣರ ಸ್ಮರಣೋತ್ಸವ ಎಂಬ ಕಾರ್ಯಕ್ರಮವನ್ನು ಕಳೆದ 201ನೇ ಮಾಸದಿಂದಲೂ ನಡೆಸುತ್ತಾ ಬಂದಿರುವುದಾಗಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಸೋಮವಾರಪೇಟೆ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಮೂರ್ತಿ ಮಾತನಾಡಿದರು.
ಪ್ರೌಢಶಾಲಾ ವಿದ್ಯಾರ್ಥಿಗಳಿಂದ ವಚನ ಗಾಯನ ಕಾರ್ಯಕ್ರಮ ನಡೆಯಿತು. ಬಿಜೆಪಿ ಮುಖಂಡ ಆರ್.ಟಿ. ಸತೀಶ್, ವಿಜೇಂದ್ರ, ರಘು, ಆರ್.ಎಸ್. ಮಹೇಶ್, ಅಶೋಕ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.