ಬಸವ ವಸತಿ ಯೋಜನೆಯಲ್ಲಿ ಅಕ್ರಮ
ಭೇರ್ಯ: ಬಸವ ವಸತಿ ಯೋಜನೆಯ ಮನೆಗಳನ್ನು ಫಲಾನುಭವಿಗಳಿಗೆ ನೀಡದೆ ಹೊಸ ಅಗ್ರಹಾರ ಗ್ರಾಪಂ ಅಧ್ಯಕ್ಷೆ ಮತ್ತು ಪಿಡಿಒ ಶಾಮೀಲಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಗ್ರಾಪಂ ಸದಸ್ಯ ಹವಲ್ದಾರ್ ರಾಜೇಗೌಡ ತಮ್ಮ ಬೆಂಬಲಿಗರೊಂದಿಗೆ ಗ್ರಾಪಂ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದರು.
ತಾಪಂನಿಂದ ನೋಡಲ್ ಅಧಿಕಾರಿಯನ್ನು ನೇಮಿಸಿ ಸೂಕ್ತ ಫಲಾನುಭವಿಗಳನ್ನು ಗುರುತಿಸಿ ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಿದ್ದರೂ ಅಧ್ಯಕ್ಷರ ಪುತ್ರ ಮತ್ತು ಪಿಡಿಒ ಸೇರಿಕೊಂಡು ತಲಾ 10 ಸಾವಿರಕ್ಕೆ ಮನೆ ಉಳ್ಳವರಿಗೆ ಮಾರಾಟ ಮಾಡಿದ್ದಾರೆ. ಜೊತೆಗೆ ದಿನಕ್ಕೊಂದು ಪಟ್ಟಿ ಸಿದ್ಧಪಡಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕಂಚಿನಕೆರೆ ಗ್ರಾಮದವರೊಬ್ಬರ ಮಗ, ಸೊಸೆ ಸರ್ಕಾರಿ ನೌಕರಿಯಲ್ಲಿದ್ದರು ಸಹ ಅವರಿಗೆ ಮನೆ ನೀಡಲಾಗಿದೆ ಎಂದು ದೂರಿದರು.
ಲೋಪ ಕಂಡುಬಂದಲ್ಲಿ ಕ್ರಮ: ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಬಸವರಾಜ್ ಭೇಟಿ ನೀಡಿ ಮಾತನಾಡಿ, ಸಧ್ಯಕ್ಕೆ ಈಗಿರುವ ಪಟ್ಟಿಯನ್ನು ಯಾವುದೆ ಕಾರಣಕ್ಕೂ ಮಂಜೂರು ಮಾಡುವುದಿಲ್ಲ. ಜೊತೆಗೆ ಗ್ರಾಪಂ ಸಭೆಯಲ್ಲಿ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲಾ ಸದಸ್ಯರ ಜೊತೆ ಚರ್ಚಿಸಿ ಲೋಪ ಕಂಡು ಬಂದರೆ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಇಒ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆದರು.
ಗ್ರಾಪಂ ಸದಸ್ಯ ಬೀರೇಗೌಡ, ಜೆಡಿಎಸ್ ಮುಖಂಡ ಮಂಜು, ಶಂಕರ್, ನಾರಾಯಣ್, ಸುರೇಶ್, ಕಾಳೇಗೌಡ, ಜಯರಾಮೇಗೌಡ, ಮನೆಪಟ್ಟಿಯಲ್ಲಿ ವಂಚಿತರಾದ ಕಂಚಿನಕೆರೆ ಗ್ರಾಮದ ಮಹಿಳೆಯರು ಭಾಗವಹಿಸಿದ್ದರು. ಎಎಸ್ಐ ಸಣ್ಣಮಾದಯ್ಯ, ಮುಖ್ಯಪೇದೆ ಕುಮಾರ್, ಪರಮೇಶ್, ಪೇದೆಗಳಾದ ಷಫಿವುಲ್ಲಾ ಬಂದೋಬಸ್ತ್ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

