ಮೈಸೂರು

ವಿದ್ಯುತ್ ಅಭಾವ: ರೈತರ ಪ್ರತಿಭಟನೆ

Published On :

ಹುಣಸೂರು: ಹನಗೋಡು ಹೋಬಳಿಯ ವ್ಯಾಪ್ತಿಯಲ್ಲಿ ವಿದ್ಯುತ್ ಅಭಾವದಿಂದ ಕಂಗೆಟ್ಟ ರೈತರು ಟ್ರಾನ್ಸ್‌ಫಾರ್ಮರ್ ದುರಸ್ತಿ ಸಮಸ್ಯೆ ಸೇರಿದಂತೆ ಹತ್ತು ಹಲವು ಸಮಸ್ಯೆ ಮುಂದಿಟ್ಟುಕೊಂಡು ಹನಗೋಡು ಸೆಸ್ಕ್ ಉಪ ಕಚೇರಿಯ ಮುಂದೆ ರೈತರು ಮಂಗಳವಾರ ಪ್ರತಿಭಟಿಸಿದರು.
ಹನಗೋಡು ಹೋಬಳಿಯೂ ಕಾಡಂಚಿನ ಪ್ರದೇಶವಾಗಿದ್ದು, ಒಂದೆಡೆ ಕಾಡಾನೆಗಳ ಹಾವಳಿ, ಇನ್ನೊಂದಡೆ ವಿದ್ಯುತ್ ಸಮಸ್ಯೆಯಿಂದ ಜನತೆ ಕಂಗಾಲಾಗಿದ್ದು, ಹಲವು ಗ್ರಾಮಗಳಲ್ಲಿ ಟ್ರಾನ್ಸ್‌ಫಾರ್ಮರ್ ಸುಟ್ಟು ಹೋಗಿದ್ದು, ದುರಸ್ತಿ ಮಾಡಲು ಇಲಾಖೆ ಅಧಿಕಾರಿಗಳು ಮತ್ತು ನೌಕರರು ಕಳೆದ ಎರಡು- ಮೂರು ತಿಂಗಳಿನಿಂದ ಸತಾಯಿಸುತ್ತಿದ್ದಾರೆ. ಹುಣಸೂರು ಉಪ ವಿಭಾಗದ ಕಚೇರಿಯ ಎಇಇ ಚೆನ್ನಕೇಶವ ಪ್ರತಿಭಟನಾ ಸ್ಥಳಕ್ಕೆ ಆಗಮಿಸುವ ತನಕ ಪ್ರತಿಭಟನೆಯನ್ನು ನಿಲ್ಲಿಸದೆ ಇಲಾಖೆ ವಿರುದ್ಧ ಧಿಕ್ಕಾರ ಕೂಗಿದರು.
ಎಇಇ ಚೆನ್ನಕೇಶವ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಮಾತನಾಡಿ, ಇಲಾಖೆಯ ನಿಯಮದಂತೆ ಅಕ್ರಮ-ಸಕ್ರಮದಲ್ಲಿ ಅನಧಿಕೃತವಾಗಿ ರೈತರು ವಿದ್ಯುತ್ ಸಂಪರ್ಕ ಹೊಂದಿದ್ದು, ಕಡಿತಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿದರು. ಲೋಕೇಶ್, ದೇವರಾಜು, ಗಣೇಶ್, ಪಾಲಾಕ್ಷ, ಜಗದೀಶ್, ಸುರೇಶ್, ಕಾಳಪ್ಪ, ಸ್ವಾಮಿ, ಮಹದೇವಪ್ಪ, ಉದಯನ್, ಸಂತೋಷ್, ಪ್ರಭುಕುಮಾರ್, ಮೊಟೆಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.