ಮೈಸೂರು

ಜಿಲ್ಲೆಯ ಸಮಸ್ಯೆ ಪರಿಹರಿಸಿ

Published On :

ಕ.ಪ್ರ.ವಾರ್ತೆ   ಮೈಸೂರು   ಮೇ 29
ಜಿಲ್ಲೆಯ ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಕರ್ನಾಟಕ ರಾಜ್ಯ ಗ್ರಾಹಕ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಪಿ. ತಿರುಮಲಾರಾವ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ನಗರಕ್ಕೆ 24್ಗ7 ಮಾದರಿಯಲ್ಲಿ ನೀರು ಒದಗಿಸುವುದಾಗಿ ಕರಾರು ಮಾಡಿಕೊಂಡ ಜಸ್ಕೋ ಸಂಸ್ಥೆಯು ನಂತರ ತನ್ನ ಮಾತಿಗೆ ತಪ್ಪಿ ನಡೆದಿದೆ. ನೀರು ನಿರ್ವಹಣೆಗೆ ನಗರಪಾಲಿಕೆ ಕೋಟ್ಯಂತರ ರು.ಗಳನ್ನು ಜಸ್ಕೋಗೆ ನೀಡಿ ಅತಂತ್ರವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಜತೆಗೆ ನೀರು ಅಭಾವ ನೀಗಿಸಲು ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಶ್ಲಾಘನೀಯ ಎಂದಿದ್ದಾರೆ.
ಮೈಸೂರಿನ ಕುಕ್ಕರಹಳ್ಳಿ ಕೆರೆ ಪರಿಸರದ ಸಮಸ್ಯೆಯಾಗಿ ಪರಿಣಮಿಸಿದೆ. ಕರ್ನಾಟಕ ಗ್ರಾಹಕ ವೇದಿಕೆಯು 1989 ರಿಂದ ಕೇಂದ್ರ ಪರಿಸರಮಾಲಿನ್ಯ ಮಂಡಳಿಗೆ ದೂರು ಸಲ್ಲಿಸುತ್ತಿದ್ದು, 2003ರಲ್ಲಿ ಮಂಡಳಿಯು ಮೈಸೂರು ವಿಭಾಗೀಯ ಕಚೇರಿಯ ಅಧಿಕಾರಿ ರಮೇಶ್ಕುಮಾರ್ ವರದಿ ನೀಡಿ ಅನುಷ್ಠಾನಕ್ಕೆ ಸೂಚಿಸಿತ್ತು. ಆದರೆ, ಇಲ್ಲಿಯವರೆಗೆ ಅದು ಕಾರ್ಯಗತಗೊಳಿಸಿಲ್ಲ. ತಾವು ಸದರಿ ವರದಿಯನ್ನು ಅನುಷ್ಠಾನಕ್ಕೆ ತರಬೇಕಾಗಿದೆ ಎಂದು ವಿನಂತಿಸಿದ್ದಾರೆ.
ಅಧಿಕಾರಿಗಳಲ್ಲಿ ನಿಷ್ಕ್ರೀಯತೆ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆಯಲಾಗಿದ್ದು, ಗ್ರಾಹಕ ರಕ್ಷಣಾ ಕಾಯಿದೆ ಅನುಷ್ಠಾನದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖಾಧಿಕಾರಿಗಳ ನಿಷ್ಕ್ರಿಯತೆಯನ್ನು ಸಚಿವರ ಗಮನಕ್ಕೆ ತಂದಿದ್ದಾರೆ.
ಹಿಂದಿನ ಕರ್ನಾಟಕ ರಾಜ್ಯ ಗ್ರಾಹಕ ರಕ್ಷಣಾ ಪರಿಷತ್ತಿನ ಅವಧಿ ಮುಗಿದು ನಾಲ್ಕಾರು ವರ್ಷಗಳಾಗಿದ್ದರೂ ಗ್ರಾಹಕ ರಕ್ಷಣಾ ಕಾಯಿದೆಯನ್ವಯ ರಚಿಸಬೇಕಾಗಿದೆ. ಹಾಗೆ ಆ. 9ರಂದು ನಡೆಸಲು ಉದ್ದೇಶಿಸಿರುವ ಉಪವಾಸ ಸತ್ಯಾಗ್ರಹದ ಅಗತ್ಯತೆ ಉದ್ಭವಿಸದಂತೆ ಗ್ರಾಹಕ ರಕ್ಷಣಾ ನಿಯಾಮಾವಳಿ ರೂಪಿಸಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಗಳು ಗ್ರಾಹಕರ ದೂರುಗಳನ್ನು ನಿಗದಿಪಡಿಸಿರುವಂತೆ ತೊಂಬತ್ತು ದಿನಗಳೊಳಗೆ ಇತ್ಯರ್ಥ ಮಾಡುವಂತೆ ಕಡ್ಡಾಯವಾಗಿ ಪಾಲಿಸಲು ನಿರ್ದೇಶನ ನೀಡುವಂತೆ ತಿರುಮಲರಾವ್ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.