ಮೈಸೂರು

4ಕ್ಕೆ ರಾಮದಾಸ್ ಹುಟ್ಟುಹಬ್ಬ

Published On :

ಮೈಸೂರು: ಹುಲ್ಲಿನಬೀದಿ ಸೀತಾರಾಂ ಮುಖ್ಯರಸ್ತೆಯ ಸ್ನೇಹಜೀವಿ ಅರಳೀಕಟ್ಟೆ ಯುವಕರ ಬಳಗವು ನ.4 ರಂದು ಮಾಜಿ ಸಚಿವ ಎಸ್.ಎ. ರಾಮದಾಸ್ ಅವರ ಹುಟ್ಟುಹಬ್ಬ ಆಚರಿಸುತ್ತಿದೆ. ಅಂದು ಬೆಳಗ್ಗೆ 10.30ಕ್ಕೆ ಮಾರಮ್ಮನ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಉಪಾಹಾರ ಮತ್ತು ಸಿಹಿ ವಿತರಿಸಲಾಗುತ್ತದೆ. 3ನೇ ವಾರ್ಡ್ನ ಬಿಜೆಪಿಯ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಆಗಮಿಸಬೇಕು ಎಂದು ಕೃಷ್ಣರಾಜ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ಉಪಾಧ್ಯಕ್ಷ ಮುರಳೀಧರ ಕೋರಿದ್ದಾರೆ.
ದೀಪಾವಳಿ ಮಹೋತ್ಸವ
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ನ.4ರ ಸಂಜೆ 6.30ಕ್ಕೆ ಯಾದವಗಿರಿ 2ನೇ ಮುಖ್ಯರಸ್ತೆಯ ಜ್ಞಾನಪ್ರಕಾಶ ಭವನದಲ್ಲಿ ದೀಪಾವಳಿ ಮಹೋತ್ಸವ ಆಯೋಜಿಸಿದೆ. ಮಾಜಿ ಸಚಿವ ಎಸ್.ಎ. ರಾಮದಾಸ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಆಕಾಶವಾಣಿ ಸಹಾಯಕ ನಿರ್ದೇಶಕ ಆನಂದ ಪಾಟೀಲ್, ಈಶ್ವರೀಯ ವಿವಿ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜಿ ಭಾಗವಹಿಸುವರು.
ಸಾಹಸ ಕ್ರೀಡೆ
ನ್ಯಾಷನಲ್ ಅಡ್ವೆಂಟರ್ ಫೌಂಡೇಷನ್ ಕರ್ನಾಟಕ ಚಾಪ್ಟರ್- 2 ಶುಕ್ರವಾರದಿಂದ ನ.4 ರವರೆಗೆ ಸಾಹಸ ಕ್ರೀಡೆ ಆಯೋಜಿಸಿದೆ. ಟ್ರಕ್ಕಿಂಗ್, ರಾಕ್ ಕ್ಲೈಂಬಿಂಗ್, ರೆಪ್ಪೆಲ್ಲಿಂಗ್, ರಿವಾರ್ ಕ್ರಾಸಿಂಗ್, ಜುಮ್ಮೆರಿಂಗ್, ಕಾಯಕಿಂಗ್, ಫೈಯಿಂಗ್ ಫಾಕ್ಸ್ ಮುಂತಾದ ಕ್ರೀಡೆಯನ್ನು ಪಾಂಡವಪುರ, ಮಹದೇವಪುರ ಮತ್ತು ಕೊಡಗಿನಲ್ಲಿ 8 ವರ್ಷದ ಮೇಲ್ಪಟ್ಟವರಿಗಾಗಿ ಆಯೋಜಿಸಿದೆ. ಹೆಚ್ಚಿನ ಮಾಹಿತಿಗೆ ರುಕ್ಮಿಣಿಚಂದ್ರನ್ ಅವರ ಮೊ. 9448354648 ಸಂಪರ್ಕಿಸಬಹುದು.
ಪರೀಕ್ಷೆ ತರಬೇತಿ
ಮೈಸೂರು ಸ್ಕೂಲ್ ಆಫ್ ಬ್ಯಾಂಕಿಂಗ್ ಎಂಬಿಎ, ಸಿ-ಮ್ಯಾಟ್- 2014 ಪ್ರವೇಶ ಪರೀಕ್ಷೆಗೆ 60 ದಿನಗಳ ತರಬೇತಿ ಆಯೋಜಿಸಿದೆ. ಆಸಕ್ತರು ನ.4ರೊಳಗೆ ನಂ.1028/ಎ, ಸಿಎಚ್- 22/6, ಜಯಲಕ್ಷ್ಮಿವಿಲಾಸ ರಸ್ತೆ, ಚಾಮರಾಜಪುರಂ, ರಾಮಸ್ವಾಮಿ ವೃತ್ತ ಹತ್ತಿರ, ಮೈಸೂರು- 05, ಇಲ್ಲಿ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 8 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಮೊ. 8123183649 ಅಥವಾ 8123183650 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.