ನಾನೂ ಆಕಾಂಕ್ಷಿ: ದೇವಯ್ಯ
ಹುಣಸೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಿಂದ ತಾವೊಬ್ಬ ಆಕಾಂಕ್ಷಿಯಾಗಿರುವುದಾಗಿ ಸಹಕಾರಿ ಧುರೀಣ ಹಾಗೂ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಎಂ.ಬಿ. ದೇವಯ್ಯ ಹೇಳಿದರು.
ತಾವು 1971ರಿಂದ ಜನ ಸಂಘದಿಂದಲೂ ಸಂಘದ ಹಾಗೂ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ. ಮೈಸೂರು-ಕೊಡಗು ಭಾಗದ ಜ್ವಲಂತ ಸಮಸ್ಯೆಗಳ ಕುರಿತು ತಮಗೆ ಅರಿವಿದೆ. ಬಿಜೆಪಿ ಪಕ್ಷ ತಮಗೆ ಅವಕಾಶ ಮಾಡಿಕೊಟ್ಟಲ್ಲಿ ಜನತೆ ಸೇವೆ ಮಾಡುತ್ತೇನೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಳೆದ ಹಲವಾರು ವರ್ಷಗಳಿಂದ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ, ಕೊಡಗು ಛೇಂಬರ್ ಆಫ್ ಕಾಮರ್ಸ್, ಜನತಾ ಬಜಾರ್, ಜಿಲ್ಲಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ, ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಮತ್ತು ಬಿಜೆಪಿ ಸರ್ಕಾರದಲ್ಲಿ ಅರಣ್ಯ ಮತ್ತು ಕೈಗಾರಿಕಾ ನಿಗಮದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ ಎಂದರು.
ರೈಲು ಬಿಡುತ್ತಿದ್ದಾರೆ: ಮಂಗಳೂರು- ಕೊಡಗು ಕ್ಷೇತ್ರದಲ್ಲಿ ಧನಂಜಯ ಕುಮಾರ್ ಅವರು ಲೋಕಸಭಾ ಸದಸ್ಯರಾಗಿದ್ದಾಗಲೇ ಮೈಸೂರಿನಿಂದ ಕೊಡಗು ಮೂಲಕ ಕುಕ್ಕೇ ಸುಬ್ರಮಣ್ಯ ಶ್ರೀಕ್ಷೇತ್ರಕ್ಕೆ ರೈಲು ಸಂಪರ್ಕವನ್ನು ಕಲ್ಪಿಸುವಂತೆ ತಾವು ಮನವಿ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದೆವು. ನಂತರ ಬಂದವರು ರೈಲು ಸಂಪರ್ಕವನ್ನು ಕಲ್ಪಿಸುವ ಭರವಸೆ ನೀಡಿ ರೈಲು ಬಿಡ್ಡುತ್ತಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರ ಮತ್ತು ಕೇಂದ್ರದ ರೇಲ್ವೆ ಸಚಿವರು ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಅವರಿದ್ದರೂ ಸಹ ಸಂಸದ ಎಚ್. ವಿಶ್ವನಾಥ್ ರೇಲ್ವೆ ಸಂಪರ್ಕ ಶೀಘ್ರವೇ ಕಲ್ಪಿಸುವೆ ಎಂದು ಸುಳ್ಳು ಭರವಸೆ ನೀಡಿ ಜನರಿಗೆ ರೈಲು ಬಿಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

