ನಾಳೆ ಕನ್ನಡ ರಾಜ್ಯೋತ್ಸವ
ಮೈಸೂರು: ರೋಟರಿ ಮೈಸೂರು ಮಿಡ್ಟೌನ್ ವತಿಯಿಂದ ನ.6ರ ಸಂಜೆ 6.30ಕ್ಕೆ ಜೆಎಲ್ಬಿ ರಸ್ತೆಯ ರೋಟರಿ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ ಏರ್ಪಡಿಸಿದ್ದು, ಆಕಾಶವಾಣಿ ಕಾರ್ಯಕ್ರಮ ನಿರೂಪಕ ಜಿ.ಕೆ. ರವೀಂದ್ರಕುಮಾರ್ ಅತಿಥಿಯಾಗಿ ಭಾಗವಹಿಸುವರು.
ಶಾಲಾ ಕೊಠಡಿ ಉದ್ಘಾಟನೆ
ಕುವೆಂಪುನಗರದಲ್ಲಿರುವ ಕಾಗಿನೆಲೆ ವಿದ್ಯಾಸಂಸ್ಥೆಯಲ್ಲಿ ನಿರ್ಮಿಸಿರುವ ಕೊಠಡಿಗಳ ಉದ್ಘಾಟನಾ ಸಮಾರಂಭವು ನ.7ರ ಬೆಳಗ್ಗೆ 10.30ಕ್ಕೆ ನಡೆಯಲಿದ್ದು, ಸಂಸದ ಎಚ್. ವಿಶ್ವನಾಥ್ ಉದ್ಘಾಟಿಸುವರು. ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಸಕ ಎಂ.ಕೆ. ಸೋಮಶೇಖರ್ ಭಾಗವಹಿಸುವರು.
'ಬೆಳಕಿನ ಹಾದಿ' ಬಿಡುಗಡೆ
ಸಾಹಿತಿ ಪ್ರೊ. ಎಲ್. ಬಸವರಾಜು ಅವರ 95ನೇ ಜಯಂತಿ ಅಂಗವಾಗಿ ಕೆ. ಸೌಭಾಗ್ಯ ಅವರು ಸಂಪಾದಿಸಿರುವ ಡಾ. ಎಲ್. ಬಸವರಾಜು ಸಾಧನ ಸಂಪುಟವಾದ ಬೆಳಕಿನ ಹಾದಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ನ.9ರ ಬೆಳಗ್ಗೆ 10.30ಕ್ಕೆ ಜಯಲಕ್ಷ್ಮೀಪುರಂ 3ನೇ ಬ್ಲಾಕ್ನಲ್ಲಿರುವ ಬಸವರಾಜು ಮನೆಯಲ್ಲಿ ಏರ್ಪಡಿಸಿದ್ದು, ಸಾಹಿತಿ ದೇವನೂರು ಮಹಾದೇವ ಉದ್ಘಾಟಿಸುವರು. ಪತ್ರಕರ್ತೆ ಗೌರಿ ಲಂಕೇಶ್ ಪುಸ್ತಕ ಬಿಡುಗಡೆಗೊಳಿಸುವರು.
ಪ್ರಶ್ನಾಶಾಸ್ತ್ರ ತರಗತಿ
ಶ್ರೀ ಮಾಯಕಾರ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರವು ಪ್ರಶ್ನಾಶಾಸ್ತ್ರ ತರಗತಿ ಆಯೋಜಿಸಿದ್ದು, ಆಸಕ್ತ ಹೆಣ್ಣು ಮಕ್ಕಳೂ ಕೂಡ ತರಗತಿಗೆ ನ.30ರೊಳಗೆ ಸೇರಿಕೊಳ್ಳಬಹುದು. ತುಂಡಲ ಪ್ರಶ್ನ ಶಾಸ್ತ್ರ, ಬಿಂದು ಪ್ರಶ್ನಶಾಸ್ತ್ರ, 108 ಸಂಖ್ಯೆಯ ಮನೋಗತ ಪ್ರಶ್ನ ಶಾಸ್ತ್ರ, ಕವಡೆ ಪ್ರಶ್ನ ಶಾಸ್ತ್ರವನ್ನು ವೈಜ್ಞಾನಿಕವಾಗಿ ನಿರೂಪಿಸಿ ಮತ್ತು ಶಾಸ್ತ್ರೋಕ್ತವಾಗಿ ನಂ.4105, 2ನೇ ಕ್ರಾಸ್, 11ನೇ ಮುಖ್ಯರಸ್ತೆ, ಎಚ್. ಬ್ಲಾಕ್, ಕನಕದಾಸನಗರ, ದಟ್ಟಗಳ್ಳಿ, ಮೈಸೂರು ಇಲ್ಲಿ ಕಲಿಸಿಕೊಡಲಾಗುತ್ತದೆ. ವಿವರಕ್ಕೆ ಮೊ. 99454 15341 ಸಂಪರ್ಕಿಸಬಹುದು.
ವಧು- ವರರ ಸಮಾವೇಶ
ಕೃಷ್ಣಮೂರ್ತಿಪುರಂನ ಶ್ರೀರಾಮ ಮಂದಿರದಲ್ಲಿ ನ.10ರ ಬೆಳಗ್ಗೆ 10.30ಕ್ಕೆ ತ್ರಿಮತಸ್ಥ ವಧು- ವರರ ಸಮಾವೇಶ ಏರ್ಪಡಿಸಿದ್ದು, ದೂ. 0821- 2330400 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

