ಎಚ್.ಡಿ. ಕೋಟೆ: ಗಾಂಧಿ ಜಯಂತಿ
ಎಚ್.ಡಿ. ಕೋಟೆ: ತಾಲೂಕು ಕಚೇರಿಯಲ್ಲಿ ಬುಧವಾರ ಸರಳವಾಗಿ ಗಾಂಧೀಜಿ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಕೃಷ್ಣ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಿಡಿಪಿಒ ರಾಮಕೃಷ್ಣಪ್ಪ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಂಜು ಕೋಟೆ ಮಾತನಾಡಿ, ಗಾಂಧೀಜಿಯವರು ಕಂಡ ಕನಸು ನನಸಾಗಲು ಪ್ರತಿಯೊಬ್ಬರೂ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು. ಶಾಸಕ ಚಿಕ್ಕಮಾದು, ಜಿಪಂ ಸದಸ್ಯರು, ತಾಪಂ ಅಧ್ಯಕ್ಷರು, ಉಪಾಧ್ಯಕ್ಷ ಸೇರಿದಂತೆ ಎಲ್ಲಾ ಸದಸ್ಯರು ಸಭೆಗೆ ಗೈರು ಹಾಜರಾಗಿದ್ದರು.
ಕಾಳಮ್ಮನ ಕೊಪ್ಪಲು ಗಾಂಧಿ ಜಯಂತಿ
ಸಾಲಿಗ್ರಾಮ: ಶಾಂತಿ ಮತ್ತು ಅಹಿಂಸೆಯ ಸಂಕೇತವೆ ಮಹಾತ್ಮ ಗಾಂಧೀಜಿ ಎಂದು ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಕೆ.ಟಿ. ಮೋಹನ್ಕುಮಾರ್ ಹೇಳಿದರು. ಕೆ.ಆರ್. ನಗರ ತಾಲೂಕು ಕಾಳಮ್ಮನಕೊಪ್ಪಲು ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಜಂಟಿಯಾಗಿ ಆಯೋಜಿಸಿದ್ದ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗ್ರಾಪಂ ಸದಸ್ಯ ಡಿ. ಕೃಷ್ಣ, ಎಸ್ಡಿಎಂಸಿ ಅಧ್ಯಕ್ಷ ಸಿ. ಸ್ವಾಮಿಗೌಡ, ಕೆ.ಸಿ. ಸುಬ್ಬೇಗೌಡ, ಉಪಾಧ್ಯಕ್ಷ ಜಯಸೋಮಾಚಾರಿ, ಸದಸ್ಯರಾದ ಅಂಗಡಿ ಸುಬ್ಬೇಗೌಡ, ಮುಖ್ಯ ಶಿಕ್ಷಕರಾದ ಶಿವರಾಂ, ರಾಮಸ್ವಾಮಿಗೌಡ, ಶಿಕ್ಷಕರಾದ ಎಸ್.ಕೆ. ಸುರೇಶ್, ಕೃಷ್ಣ, ಲಕ್ಷ್ಮಣ್, ನಾಗರಾಜ್ ಹಾಲಬಾವಿ, ರೇವಣ್ಣ ಕೋಟ್ಯಾಳ್, ಮಂಜುನಾಥ್, ದಿನೇಶ್, ಚಂದ್ರನಾಯಕ, ಅಂಕೆಶ್, ರಾಘವೇಂದ್ರ, ಸುರೇಶ್ ಭಾಗವಹಿಸಿದ್ದರು.
ಗಾಂಧಿ ಜಯಂತಿ ದಿನ ಮಾಂಸ ಮಾರಾಟ
ಪಿರಿಯಾಪಟ್ಟಣ: ಗಾಂಧಿ ಜಯಂತಿ ದಿನದಂದು ಪಟ್ಟಣಕ್ಕೆ ಸಮೀಪವಿರುವ ಮೆಲ್ಲಹಳ್ಳಿ ಗೇಟ್ ಬಳಿಯ ಮಾಂಸದಂಗಡಿಯಲ್ಲಿ ಮಾಲೀಕರು ರಾಜಾರೋಷವಾಗಿ ಮಾಂಸ ಮಾರಾಟದಲ್ಲಿ ತೊಡಗಿದ್ದರು. ಗಾಂಧಿ ಜಯಂತಿ ಆಚರಣೆಯ ದಿನದಂದು ಕಡ್ಡಾಯವಾಗಿ ಮಾಂಸ ಮಾರಾಟ ನಿಷೇಧ ಎಂದು ಮೊದಲೇ ತಿಳಿಸಿದ್ದರೂ ಹಾಗೂ ತಹಸೀಲ್ದಾರರು ಗಾಂಧಿ ಜಯಂತಿಯಂದು ಮಾಂಸ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರೂ ಮಾಂಸ ಮಾರಾಟ ನಡೆದಿದೆ. ಈ ಬಗ್ಗೆ ಸಾರ್ವಜನಿಕರು ಮಾಂಸದ ಅಂಗಡಿಗಳ ಮಾಲೀಕರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

