11, 12 ರಂದು ದಸರಾ ಗಾಳಿಪಟ ಸ್ಪರ್ಧೆ
ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಅ.11 ಮತ್ತು 12 ರಂದು ಗಾಳಿಪಟ ಸ್ಪರ್ಧೆಯನ್ನು ಲಲಿತಮಹಲ್ ಹೆಲಿಪ್ಯಾಡ್ನಲ್ಲಿ ಆಯೋಜಿಸಲಾಗಿದೆ. ಅ.11ರ ಸಂಜೆ 4ಕ್ಕೆ ಗಾಳಿಪಟ ಸ್ಪರ್ಧೆಯನ್ನು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಉದ್ಘಾಟಿಸುವರು. ಅ.12ರ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಗಾಳಿಪಟ ಸ್ಪರ್ಧೆ ನಡೆಯಲಿದೆ ಎಂದು ದಸರಾ ಉಪ ವಿಶೇಷಾಧಿಕಾರಿಯಾದ ಎಂಡಿಎ ಆಯುಕ್ತ ಎಸ್. ಪಾಲಯ್ಯ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಬಾರಿ ಗಾಳಿಪಟ ಸ್ಪರ್ಧೆಯಲ್ಲಿ ವಿಶಿಷ್ಟ ವಿನ್ಯಾಸದ ಗಾಳಿಪಟ ಹಾರಿಸಲಾಗುತ್ತದೆ. ಗುಜರಾತ್, ಮಹಾರಾಷ್ಟ್ರ ಇನ್ನಿತರೆ ರಾಜ್ಯಗಳು ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸ್ಪರ್ಧಿಗಳು ಆಗಮಿಸಲಿದ್ದಾರೆ. ಹೊರ ರಾಜ್ಯದ 4 ತಂಡಗಳು ವಿವಿಧ ರೀತಿಯ ಗಾಳಿಪಟಗಳನ್ನು ಹಾರಿಸಲಿದ್ದಾರೆ ಎಂದರು. ಅ.8 ರಂದು ಜಗನ್ಮೋಹನ ಅರಮನೆ ಬಳಿ, ಅ.9 ರಂದು ರಾಜೀವ್ನಗರ, ಅ.10 ರಂದು ಮೈಸೂರು ವಿವಿ ಓವಲ್ ಮೈದಾನದಲ್ಲಿ ಗಾಳಿಪಟ ಹಾರಾಟ ಉತ್ಸವ ಹಮ್ಮಿಕೊಳ್ಳಲಾಗಿದೆ.
ದಸರೆಗೆ 30 ಲಕ್ಷ ಪ್ರಾಯೋಜಕತ್ವ
ಮೈಸೂರು: ಈ ಬಾರಿಯ ದಸರಾ ಮಹೋತ್ಸವಕ್ಕೆ 30 ಲಕ್ಷ ಪ್ರಾಯೋಜಕತ್ವ ಬಂದಿದೆ ಎಂದು ದಸರಾ ಉಪ ವಿಶೇಷಾಧಿಕಾರಿಯಾದ ಎಂಡಿಎ ಆಯುಕ್ತ ಎಸ್.ಪಾಲಯ್ಯ ಹೇಳಿದರು.
ಟಿವಿಎಸ್ ಕಂಪನಿಯವರು 12 ಲಕ್ಷ, ಕೆಪಿಟಿಸಿಎಲ್, ಕ್ರೆಡಾಯ್ ಸಂಸ್ಥೆಯವರು ತಲಾ 5 ಲಕ್ಷ ಪ್ರಾಯೋಜಕತ್ವ ನೀಡಿದ್ದಾರೆ. ಉಳಿದ ಕಂಪನಿಯವರು ಒಂದೆರಡು ಲಕ್ಷ ರು. ಪ್ರಾಯೋಜಕತ್ವ ನೀಡಿದ್ದಾರೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಸರಾ ಪ್ರಚಾರ ಮತ್ತು ಪ್ರಾಯೋಜಕತ್ವ ಉಪಸಮಿತಿ ವತಿಯಿಂದ ಪ್ರಾಯೋಜಕರನ್ನು ನಿಗದಿಪಡಿಸಲಾಗಿದೆ. ದಸರಾ ವ್ಯಾಪಕ ಪ್ರಚಾರಕ್ಕಾಗಿ ರಾಜ್ಯಾದ್ಯಂತ 140 ಜಾಹೀರಾತು ಫಲಕಗಳನ್ನು ಅಳವಡಿಸಲಾಗಿದ್ದು, ಇನ್ನೂ 60 ಹೋರ್ಡಿಂಗ್ ಅಳವಡಿಸಲು ಕ್ರಮ ವಹಿಸಲಾಗಿದೆ. ಈಗಾಗಲೇ ಮೈಸೂರಿನಲ್ಲಿ 10, ಜಿಲ್ಲೆಯಲ್ಲಿ 10, ಇತರೆ ಜಿಲ್ಲೆಗಳಲ್ಲಿ 80, ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ 10 ಹೋರ್ಡಿಂಗ್ ಅಳವಡಿಸಲಾಗಿದೆ ಎಂದರು. ವಿದೇಶಿ ಪ್ರವಾಸಿಗರನ್ನು ಗಮನದಲ್ಲಿರಿಸಿಕೊಂಡು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮೈಸೂರು ವಿಮಾನ ನಿಲ್ದಾಣಗಳಲ್ಲಿ ದಸರಾ ಮಾಹಿತಿಯುಳ್ಳ ಜಾಹಿರಾತು ಫಲಕ ಅಳವಡಿಸಲಾಗಿದೆ. ಅ.5, 6 ಮತ್ತು 7 ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ರೈಲು ನಿಲ್ದಾಣದಲ್ಲಿಯೂ ಪ್ರಚಾರ: ಪ್ರಚಾರ ಉಪಸಮಿತಿಗೆ 50 ಲಕ್ಷ ಅನುದಾನ ಲಭಿಸಿದೆ. ಇದರಲ್ಲಿ 35 ಲಕ್ಷ ಮುದ್ರಣ ಮಾಧ್ಯಮ, 10 ಲಕ್ಷ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಜಾಹಿರಾತು ನೀಡಲಾಗುತ್ತಿದೆ. ಸೂಪರ್ ಹಿಟ್ಸ್ 93.5 ರೆಡ್ ಎಫ್ಎಂ ಅನ್ನು ರೇಡಿಯೋ ಪಾಲುದಾರರನ್ನಾಗಿ ನಿಯೋಜಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

