ಮೈಸೂರು

ಪೂರ್ಣಪ್ರಜ್ಞಾ ವಿದ್ಯಾಕೇಂದ್ರ

Published On :

ಕುವೆಂಪುನಗರದ ನಾಗರಿಕ ವೇದಿಕೆಯ ಪೂರ್ಣಪ್ರಜ್ಞಾ ವಿದ್ಯಾಕೇಂದ್ರದ ಶಾಲೆಯಲ್ಲಿ ಗಾಂಧೀಜಿ ಅವರ 145 ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 109ನೇ ಜಯಂತಿ ಕಾರ್ಯಕ್ರಮ ನಡೆಯಿತು. ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಜಿ.ಕೆ. ವರದಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಸಮಿತಿ ಅಧ್ಯಕ್ಷ ಜೆ. ಲೋಕೇಶ್, ನಾಗರಿಕ ವೇದಿಕೆ ಅಧ್ಯಕ್ಷ ಡಿ.ಬಸವಯ್ಯ, ಸದಸ್ಯ ಬಿ.ಪಿ. ಪುಟ್ಟಸ್ವಾಮಿ ಹಾಗೂ ತ್ಯಾಗರಾಜ್ ಇದ್ದರು.
ಜ್ಞಾನಸರೋವರ ವಸತಿ ಶಾಲೆ
ಜ್ಞಾನ ಸರೋವರ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಪ್ರಾಂಶುಪಾಲ ವೆಂಕಟೇಶ್ ಮಾತನಾಡಿದರು. ಸಂಸ್ಥಾಪಕ ಸುಧಾಕರ ಎಸ್. ಶೆಟ್ಟಿ, ಕಾರ್ಯದರ್ಶಿ ಸುಖಲತಾ ಶೆಟ್ಟಿ ಆಡಳಿತಾಧಿಕಾರಿ ಮುಕುಂದ್ ಭಾಗವಹಿಸಿದ್ದರು.



ಮಹಾವೀರ ವಿದ್ಯಾಸಂಸ್ಥೆ
ಬೃಂದಾವನ ಬಡಾವಣೆಯಲ್ಲಿರುವ ಡಾ.ಎಂ. ದೇಜಮ್ಮ ಮಹಾವೀರ ವಿದ್ಯಾಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಜಯಂತಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಹೊಳೆನರಸೀಪುರದ ಗ್ರೀನ್ವುಡ್ ಶಾಲೆ ಸ್ಥಾಪಕಿ ನೂರ್ ಫಾತಿಮ ವಿದ್ಯಾಸಂಸ್ಥೆ ಪ್ರಗತಿ ಪ್ರಸಂಶಿಸಿದರು. ಸಂಸ್ಥೆ ಅಧ್ಯಕ್ಷೆ ಡಾ.ಎಂ. ದೇಜಮ್ಮ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.