ರೋಟರಿ ಸೇವಾ ಕಾರ್ಯದಿಂದ ಬದಲು
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಅ. 4
ರೋಟರಿ ಸಂಸ್ಥೆಯಲ್ಲಿ ತೊಡಗಿಕೊಳ್ಳುವ ಮೂಲಕ ಸಮಾಜ ಸೇವೆಯೊಂದಿಗೆ ನಮ್ಮಲ್ಲಿಯೂ ಬದಲಾವಣೆಯನ್ನು ಕಂಡುಕೊಳ್ಳಬಹುದು ಎಂದು ರೋಟರಿ ಸಂಸ್ಥೆಯ ರೋಟರಿ ಜಿಲ್ಲಾ ಗೌವರ್ನರ್ ಎಸ್. ಗುರುರಾಜ್ ಹೇಳಿದರು.
ರೋಟರಿ ಮಿಡ್ ಟೌನ್ ಸಂಸ್ಥೆಗೆ ಅಧಿಕೃತ ಭೇಟಿ ನೀಡಿ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ದಾನಿಗಳಿಗೆ ಕೊರತೆ ಇಲ್ಲ. ಅವರನ್ನು ಗುರುತಿಸಿ ಗೌರವಿಸುವ ಕೆಲಸವಾಗಬೇಕಿದೆ. ಒಳ್ಳೆಯ ಜನರು ಎಲ್ಲೆಡೆ ಇರಬೇಕು ಅಂತೆಯೇ ತಾಲೂಕಿನ ವಿವಿಧ ಸ್ಥಳಗಳಲ್ಲಿ ರೋಟರಿ ಸಂಸ್ಥೆಗಳನ್ನು ತೆರೆಯುವ ಮೂಲಕ ತಾಲೂಕಿನ ಜನತೆಗೆ ಸಂಸ್ಥೆಯ ಸದಸ್ಯರು ಹೆಚ್ಚಿನ ಸೇವೆ ನೀಡುವಂತಾಗಲಿ ಎಂದು ತಿಳಿಸಿದರು.
ರೋಟರಿ ಜಿಲ್ಲಾ ಸಹಾಯಕ ಗೌವರ್ನರ್ ರವೀಂದ್ರ ರೈ ಮಾತನಾಡಿ, ಹಣ ನೀಡುವ ಮೂಲಕ ಮಾತ್ರವಲ್ಲದೆ ಶ್ರಮದ ಮೂಲಕವೂ ಸೇವೆ ಸಲ್ಲಿಸಬಹುದು ಎಂದು ಕಿವಿಮಾತು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಪಿ.ಎಸ್. ಹರೀಶ್ ಮಾತನಾಡಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಕೆ. ಪ್ರಕಾಶ್, ಜವನೀಕುಪ್ಪೆ ಶಾಲೆಯ ಶಿಕ್ಷಕ ಮಲ್ಲಪ್ಪ, ಪಿಎಲ್ಡಿ ಬ್ಯಾಂಕ್ ನೌಕರ ಬಸವಣ್ಣ ಅವರನ್ನು ಸನ್ಮಾನಿಸಲಾಯಿತು.
ವಾಣಿಜ್ಯೋದ್ಯಮಿಗಳಾದ ಸುಬ್ರಮಣ್ಯ, ಅಶೋಕ್ಕುಮಾರ್ ಜೈನ್, ಡಿ.ತಮ್ಮಯ್ಯ ಸಂಸ್ಥೆಗೆ ಸೇರ್ಪಡೆಗೊಂಡರು. ಬೈಲುಕುಪ್ಪೆ ಲಾಸಾ ರೋಟರಿ ಸಂಸ್ಥೆಯ ಸೋನಂ ಉತ್ತರಾಂಚಲದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂತ್ರಸ್ತರ ನಿಧಿಗೆ ಚೆಕ್ ನೀಡಿದರು.
ರೋಟರಿ ಸಂಸ್ಥೆಯ ಬಿ.ವಿ.ಜವರೇಗೌಡ, ಬಿಎಸ್ಪಿ ರಾವ್, ಸತೀಶ್, ನಾಗರಾಜ್, ವಿಜಯ್ಕುಮಾರ್, ರವಿಶಂಕರ್, ಮಧು, ಪಪಂ ಮುಖ್ಯಾಧಿಕಾರಿ ಪಂಕಜರೆಡ್ಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

