ಮೈಸೂರು

ಕವಿಗಳು ಸಮಾಜ ಸುಧಾರಕರು

Published On :

ಕ.ಪ್ರ.ವಾರ್ತೆ  ಮೈಸೂರು  ಅ. 4
ಕವಿಗಳು ಸಮಾಜದ ಸುಧಾರಕರು ಎಂದು ಮಹಾರಾಜ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಪ್ರೊ.ಭಾಷ್ಯಂ ಹೇಳಿದರು.
ವೆಂಕಟಗಿರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಂಸ್ಕೃತ ಪಾಠಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ವಿಜಯದಶಮಿ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಅಂಕುಡೊಂಕು ತಿದ್ದುವಲ್ಲಿ ಹಾಗೂ ಮನುಷ್ಯನ ಮನಸ್ಸು ಪರಿವರ್ತಿಸಿ ಸನ್ಮಾರ್ಗಕ್ಕೆ ಕೊಂಡೊಯ್ಯುವಲ್ಲಿ ಕವಿಗಳ ಪಾತ್ರ ಬಹುಮುಖ್ಯ. ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿದ್ದು, ಇದನ್ನು ಪರಿಗಣಿಸಿದರೆ ಸೂರ್ಯನಿಗಿಂತ ಕವಿಗಳ ತೇಜಸ್ಸು ಹೆಚ್ಚೆಂದು ಭಾವಿಸಬಹುದು. ಆದ್ದರಿಂದ ಸಮಾಜದ ಸುಧಾರಣೆ ಕವಿಗಳಿಂದ ಸಾಧ್ಯ ಎಂದರು.
ಬಸವಣ್ಣ, ಅಕ್ಕಮಹಾದೇವಿ, ಕುಮಾರವ್ಯಾಸ, ಪಂಪ ಮುಂತಾದ ಮಹಾಕವಿಗಳ ಸಾಹಿತ್ಯ ರಚನೆಗಳು ಸಮಾಜ ಮುಖಿಯಾದವು. ಈ ದಿಸೆಯಲ್ಲಿ ಬಸವಣ್ಣನವರ ವಚನಗಳು ಅನನ್ಯ. ಅದಕ್ಕಾಗಿ ಅವರನ್ನು ಕ್ರಾಂತಿಯೋಗಿ ಎಂದು ಕರೆದದ್ದು ಮೆರೆಯುವಂತಿಲ್ಲ ಎಂದ ಅವರು, ಮಹಾರಾಜರ ಕಾಲದಲ್ಲಿ ಕವಿಗಳಿಗೆ ವಿಶಿಷ್ಟ ಸ್ಥಾನಮಾನವಿತ್ತು ಎಂದು ಅವರು ತಿಳಿಸಿದರು.
ಸಂಸ್ಕೃತ ವಿವಿಯು ಕನ್ನಡ ಮಾಧ್ಯಮ ಅನುಷ್ಠಾನಗೊಳಿಸಿರುವುದು ಅಭಿನಂದನೀಯ. ಈ ಸಂಸ್ಕೃತ ಪಾಠಶಾಲೆಯಲ್ಲಿಯೂ ಅನೇಕ ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಮೇಲುಕೋಟೆಯ ಸಂಸ್ಕೃತ ಸಂಶೋಧನ ಕೇಂದ್ರದ ಮೂಲಕ 72 ಸಂಸ್ಕೃತ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ ಎಂದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಡಾ.ವಿಜಯಾಹರನ್, ಎಸ್.ರಾಮಪ್ರಸಾದ್, ಪ್ರೊ.ಬಿ.ಎನ್. ನಾಗರಾಜ ಭಟ್, ಪ್ರೊ.ಪದ್ಮಶೇಖರ್, ಹೊರೆಯಾಲ ದೊರೆಸ್ವಾಮಿ, ಟಿ.ಲೋಕೇಶ್ ಹುಣಸೂರು, ಪ್ರೊ.ಎಚ್.ಆರ್. ತಿಮ್ಮೇಗೌಡ, ನಾಗರತ್ಮ ಹೆಮ್ಮಿಗೆ, ಬಲ್ಲೇನಹಳ್ಳಿ ಶಂಕರ್, ಎಂ.ಬಿ. ಜಯಶಂಕರ್, ಟಿ.ಸತೀಶ್ ಜವರೇಗೌಡ ಹಾಗೂ ಶ್ಯಾಮಲಾಮೂರ್ತಿ ಅವರು ಕವನಗಳನ್ನು ವಾಚಿಸಿದರು.
ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಅಧ್ಯಕ್ಷತೆ ವಹಿಸಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.