ಮೈಸೂರು

ನಿರ್ಮಾಣವಾಗದ ಬಸ್ ತಂಗುದಾಣ

Published On :

ಕ.ಪ್ರ.ವಾರ್ತೆ  ಸಾಲಿಗ್ರಾಮ್ಣ ಅ. 4
ಸರ್ಕಾರವು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಪ್ರತಿವರ್ಷವು ಹತ್ತಾರು ಇಲಾಖೆಗಳಡಿಯಲ್ಲಿ ನೂರಾರು ಯೋಜನೆಗಳ ಮೂಲಕ ಹಣ ವ್ಯಯ ಮಾಡುತ್ತಿದೆ. ಹೀಗೆ ಮಹತ್ತರವಾದ ಆಕಾಂಕ್ಷೆಯಿಂದ ಮಾಡುವ ಖರ್ಚಿನಿಂದ ಜನರಿಗೆ ಅನುಕೂಲವಾಗಬೇಕು, ಇಲ್ಲದಿದ್ದರೆ ಸರ್ಕಾರದ ಹಣ ನೀರಿನಲ್ಲಿ ಹೋಮವಾದಂತಾಗುತ್ತದೆ.
ಇಂತಹ ಯೋಜನೆಗಳಲ್ಲಿ ಒಂದಾದ ಬಸ್ ತಂಗುದಾಣದ ಕಥೆ ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮ ಸಮೀಪದ ತಿಂಗಳಮಾವನ ಕಟ್ಟೆಯಲ್ಲಿ ಕಂಡುಬರುತ್ತಿದೆ.
ಈ ಸ್ಥಳವು ಸಾಲಿಗ್ರಾಮದಿಂದ ಕೇರಳಾಪುರ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಸಿಗುತ್ತದೆ. ಲಕ್ಕಿಕುಪ್ಪೆ, ಲಕ್ಕಿಕುಪ್ಪೆ ಕೊಪ್ಪಲು, ಕಾಳಮ್ಮನ ಕೊಪ್ಪಲು ಹಾಗೂ ಹರದನಹಳ್ಳಿ ಬಡಾವಣೆಯಲ್ಲಿ ವಾಸಿಸುವ ಜನರು ನಿತ್ಯ ಸಂಚಾರ ಮಾಡಲು ಇಲ್ಲಿಗೆ ಬರುತ್ತಾರೆ. ಈ ಎಲ್ಲ ಗ್ರಾಮಗಳ ರಸ್ತೆಗಳು ಸೇರುವ ಕೇಂದ್ರ ಬಿಂದುವಾಗಿರುವ ತಿಂಗಳಮಾವನ ಕಟ್ಟೆಯಲ್ಲಿ ದಶಕಗಳಿಂದಲು ಬಸ್ ತಂಗುದಾಣ ಮಾತ್ರ ನಿರ್ಮಾಣಗೊಂಡಿಲ್ಲ. ಈ ಮಾರ್ಗದಲ್ಲಿ ಪ್ರತಿದಿನ ಶಾಲಾ- ಕಾಲೇಜಿಗೆ ತೆರಳುವ ವಿದ್ಯಾರ್ಥಿ- ವಿದ್ಯಾರ್ಥಿನಿಯರು, ನೌಕರರು, ವೃದ್ಧರು, ಮಹಿಳೆಯರು ಹಾಗೂ ಅನಾರೋಗ್ಯ ಪೀಡಿತರು, ಈ ಸ್ಥಳಕ್ಕೆ ಬಂದು ಬಸ್ಸಿಗಾಗಿ ಮಳೆಗಾಲ, ಬೇಸಿಗೆಕಾಲ ಸೇರಿದಂತೆ ಎಲ್ಲ ಕಾಲದಲ್ಲೂ ಕಾಯುವುದು ಪ್ರಯಾಣಿಕರ ಪರಿಪಾಟಲಾಗಿದೆ. ರಾಮನಾಥಪುರ ಮತ್ತು ಸಾಲಿಗ್ರಾಮ ಮುಖ್ಯ ರಾಜ್ಯ ಹೆದ್ದಾರಿಯಲ್ಲಿ ಬರುವ ಈ ಭಾಗದಲ್ಲಿ ತಂಗುದಾಣ ನಿರ್ಮಾಣಕ್ಕೆ ಯಾರೂ ಮುಂದಾಗದೆ ಸಾರ್ವಜನಿಕರಿಗೆ ನಿತ್ಯ ನರಕವಾಗಿದೆ.
ಇನ್ನಾದರು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ದಶಕಗಳಿಂದ ಇಲ್ಲದ ಬಸ್ ತಂಗುದಾಣದ ನಿರ್ಮಾಣ ಮಾಡಬೇಕೆಂಬುದು ಈ ಭಾಗದ ಸಾರ್ವಜನಿಕರ ಒತ್ತಾಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.