ವ್ಯಕ್ತಿತ್ವ ವಿಕಸನ ಶಿಬಿರ
ಮೈಸೂರು: ವಿವೇಕಾನಂದ ಕೇಂದ್ರ ಕನ್ಯಾಕುಮಾರಿ ಮೈಸೂರು ಶಾಖೆಯು ಅ.7 ರಿಂದ 9 ರವರೆಗೆ 5 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರ ಏರ್ಪಡಿಸಿದೆ. ಈ ಶಿಬಿರದಲ್ಲಿ ಶ್ಲೋಕ, ಭಗವದ್ಗೀತೆ, ಸಂಸ್ಕೃತಿ, ಯೋಗ, ಪ್ರಾಣಾಯಾಮ, ನೆನಪಿನ ಶಕ್ತಿ ವೃದ್ಧಿಸುವ ಆಟಗಳು, ಗುಂಪು ಚರ್ಚೆ, ಮಹಾನ್ ಪುರುಷರ ಜೀವನ ಚರಿತ್ರೆ ಹೇಳಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಮೊ. 9449488228 ಅಥವಾ ದೂ. 2460155 ಸಂಪರ್ಕಿಸಬಹುದು.
ಕಣ್ಣಿನ ಪೊರೆ ತಪಾಸಣೆ ಶಿಬಿರ
ರೋಟರಿ ಮೈಸೂರು ಉತ್ತರ, ರೋಟರಿ ಮೈಸೂರು ಸೌತ್ಈಸ್ಟ್, ರೋಟರಿ ಮೈಸೂರು ಸೌತ್ಈಸ್ಟ್ ಇನ್ನರ್ವ್ಹೀಲ್ ಮತ್ತು ರೋಟರ್ಯಾಕ್ಟ್, ಮೈಸೂರು ರೇಸ್ಕ್ಲಬ್ ಚಾರಿಟಬಲ್ ಕಣ್ಣಿನ ಆಸ್ಪತ್ರೆ ಮತ್ತು ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಕಣ್ಣಿನ ಪೊರೆ ತಪಾಸಣೆ ಶಿಬಿರವನ್ನು ಅ.7ರ ಬೆಳಗ್ಗೆ 9.30 ರಿಂದ 1.30 ವರೆಗೆ ತಾಲೂಕಿನ ವಾಜಮಂಗಲ ರೋಟರಿ ಶಾಲೆಯಲ್ಲಿ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ ದೂ. 2472102 ಸಂಪರ್ಕಿಸಬಹುದು.
ಮೊಬೈಲ್ ದುರಸ್ತಿ ತರಬೇತಿ
ಅವೇಕ್ ಸಂಸ್ಥೆಯು ಸ್ವಂತ ಉದ್ಯಮ ಪ್ರಾರಂಭಿಸಲು ಬಯಸುವ ಆಸಕ್ತ ಮಹಿಳೆಯರು ಮತ್ತು ಪುರುಷರಿಗೆ 20 ದಿನಗಳ ಮೊಬೈಲ್ ದುರಸ್ತಿಗೆ ಸಂಬಂಧಿಸಿದ ಉದ್ಯಮಶೀಲತಾ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಅ.7 ರಿಂದ 30 ರವರೆಗೆ ಏರ್ಪಡಿಸಿದೆ. 25 ಮಂದಿ ಅಭ್ಯರ್ಥಿಗಳಿಗೆ ಮಾತ್ರ ಈ ತರಬೇತಿ ಪಡೆಯುವ ಅವಕಾಶ ಇದೆ. ಮೊಬೈಲ್ ರಿಪೇರಿಗೆ ಸಂಬಂಧಿಸಿದ ಕೌಶಲ್ಯ, ಸೂಕ್ತ ಮಾರುಕಟ್ಟೆ, ಸ್ವ ಸಾಮರ್ಥ್ಯ ವಿಶ್ಲೇಷಣೆ, ಲೆಕ್ಕಪತ್ರ, ಲೈಸೆನ್ಸ್, ವ್ಯಾಟ್, ಮಾರುಕಟ್ಟೆ ಅನುಭವ, ಬ್ಯಾಂಕಿಂಗ್ ಹಾಗೂ ಸಾಲ ಸೌಲಭ್ಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಎಸ್. ಸದಾಶಿವ ಮೊ. 9880041360, ಎಸ್. ಪ್ರಮೀಳಾ ಅವರ ಮೊ. 9845284727 ಸಂಪರ್ಕಿಸಿರಿ.
ತರಬೇತಿ
ಎಸ್ಬಿಆರ್ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು ಯುಜಿಸಿ ಅನುದಾನದಡಿ ಬ್ಯಾಂಕಿಂಗ್ ಪರೀಕ್ಷೆ ತೆಗೆದುಕೊಂಡ ಪ.ಜಾತಿ, ಪ.ವರ್ಗ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಉಚಿತ ತರಬೇತಿ ಶಿಬಿರ ಆಯೋಜಿಸಿದೆ. ಆಸಕ್ತರು ಅ.7ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

