ಮೈಸೂರಿನ ತನ್ವೀರ್ ಚಾಂಪಿಯನ್
ಕ.ಪ್ರ.ವಾರ್ತೆ ಹುಣಸೂರು ಅ. 7
ಭಾರತ್ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ಪಟ್ಟಣದಲ್ಲಿ ಆಯೋಜಿಸಿದ್ದ ಬೈಕ್ ರೇಸ್ ಎದೆ ಝಲ್ ಎನಿಸುವಂತಿತ್ತು.
ನಾಲ್ಕು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮೈಸೂರಿನ ತನ್ವೀರ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ತನ್ವೀರ್ ಬೈಕಿನ ಟ್ಯೂನರ್ ಜಬೀ ಬೆಸ್ಟ್ ಟ್ಯೂನರ್ ಆಗಿ ಆಯ್ಕೆಯಾದರು. ಬೈಪಾಸ್ ಬಳಿಯ ಟ್ಯಾಲೆಂಟ್ ಶಾಲೆಯ ಹಿಂಭಾಗ ಆಯೋಜಿಸಿದ್ದ ಬೈಕ್ ರೇಸ್ ಮೈದಾನಕ್ಕೆ ಪಡ್ಡೆ ಹುಡುಗರು ತಂಡೋಪತಂಡವಾಗಿ ಬರುತ್ತಿದ್ದರೆ, ಬೈಕ್ ರೇಸ್ ಹೇಗಿರುತ್ತದೆ ನೋಡೋಣ ಎಂಬ ಕುತೂಹಲದಿಂದ ಪಟ್ಟಣದಾದ್ಯಂತ ಎಲ್ಲ ವಯೋವಾನದವರೂ ಬರುತ್ತಿದ್ದರು. ರೇಸ್ ಟ್ರ್ಯಾಕ್ ಸುತ್ತ ಎತ್ತರವಾಗಿ ಕಂಬಗಳ ಬೇಲಿಯನ್ನು ಕಟ್ಟಲಾಗಿತ್ತು. ಇಡೀ ಆವರಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಲ್ಲದೇ ರೇಸಿನಲ್ಲಿ ಗಾಯಗೊಂಡವರ ಚಿಕಿತ್ಸೆಗೆ ವೈದ್ಯರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.
ವಿಜೇತರ ಪಟ್ಟಿ: ನ್ಯೂ ಬಾಯ್ಸ್ ಕ್ಲಾಸ್ ವಿಭಾಗ- ಹುಣಸೂರಿನ ಹಮೀದ್ (ಪ್ರಥಮ), ಹಾಸನದ ರಿಜ್ವಾನ್ ಖಾನ್ (ದ್ವಿತೀಯ), ಸಯ್ಯದ್ ಸಲ್ಮಾನ್ (ತೃತೀಯ), ನೋವೀಸ್ ಕ್ಲಾಸ್- ಮೈಸೂರಿನ ಇಮ್ರಾನ್ ಪಾಷಾ (ಪ್ರಥಮ), ಹಾಸನದ ಮಹಮದ್ ಸಲ್ಮಾನ್ (ದ್ವಿತೀಯ), ವಿರಾಜಪೇಟೆಯ ಸಯ್ಯದ್ ಸಾದಿಕ್ (ತೃತೀಯ), ಹುಣಸೂರು ಲೋಕಲ್ ಕ್ಲಾಸ್- ಹುಣಸೂರಿನ ಹಿದಾಯತ್ (ಪ್ರಥಮ), ಸಮೀರ್ (ದ್ವಿತೀಯ), ಶಾರುಖ್ ಖುರೇಷಿ (ತೃತೀಯ), ಹುಣಸೂರು ಓಪನ್ ಕ್ಲಾಸ್- ಶಾರುಖ್ (ಪ್ರಥಮ), ನಯೀಮ್, ನಯಾಜ್ (ದ್ವಿತೀಯ), ಸಾಜಿದ್ ಅಹಮದ್ (ತೃತೀಯ).
ಇಂಟರ್ಮೀಡಿಯೆಟ್ ಕ್ಲಾಸ್: ರಾಕೇಶ್ (ಪ್ರಥಮ), ಅತೀಕ್ (ದ್ವಿತೀಯ), ರಿಜ್ವಾನ್ (ತೃತೀಯ), ಫೋರ್ತ್ ಸ್ಟ್ರೋಕ್- ಮೈಸೂರಿನ ತನ್ವೀರ್ (ಪ್ರಥಮ), ಶಿವಮೊಗ್ಗದ ರಾಜೇಂದ್ರ (ದ್ವಿತೀಯ), ನಾಥನ್ ನೀಲ್ಸನ್ (ತೃತೀಯ),
ಎಕ್ಸ್ಪೋರ್ಟ್ ಕ್ಲಾಸ್: ತನ್ವೀರ್ (ಪ್ರಥಮ), ರಾಜೇಂದ್ರ (ದ್ವಿತೀಯ), ಷಹಬಾಜ್ ಖಾನ್ (ತೃತೀಯ),
ಓಪನ್ ಕ್ಲಾಸ್: ಮೈಸೂರಿನ ತನ್ವೀರ್ (ಪ್ರಥಮ), ಕೇರಳ ಕೊಚ್ಚಿಯ ಮಹೇಶ್ (ದ್ವಿತೀಯ), ರಾಜೇಂದ್ರ (ತೃತೀಯ),
ಇಂಡಿಯನ್ ಓಪನ್ ಕ್ಲಾಸ್: ತನ್ವೀರ್ (ಪ್ರಥಮ), ರಾಜೇಂದ್ರ (ದ್ವಿತೀಯ), ಕೊಚ್ಚಿಯ ಮಹೇಶ್ (ತೃತೀಯ) ಸ್ಥಾನ ಪಡೆದಿದ್ದಾರೆ.
ಎಲ್ಲ ವಿಜೇತರಿಗೂ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಲಾಯಿತು. ಸಂಜೆ ನಡೆದ ವೇದಿಕೆ ಸಮಾರಂಭದಲ್ಲಿ ಎಐಸಿಸಿ ಸದಸ್ಯ ಪ್ರೇಮ್ ಕುಮಾರ್, ಉದ್ಯಮಿ ಅಮರನಾಥ್, ಪುರಸಭಾ ಸದಸ್ಯ ಅಯೂಬ್, ಮುಖಂಡರಾದ ಸಂಪತ್ ಕುಮಾರ್, ಚೋಟು ಅಸ್ಲಂ, ಆನಂದ್, ನಾರಾಯಣ ರೈ, ಚಿಕ್ಕಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

