ವೇತನ ಪಟ್ಟಿ ಅಂತರ್ಜಾಲದಲ್ಲಿ
ಮೈಸೂರು: ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಪ. ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 2011-12ನೇ ಸಾಲಿನಲ್ಲಿ ಮಂಜೂರಾಗಿರುವ ವಿದ್ಯಾರ್ಥಿ ವೇತನದ ವಿದ್ಯಾರ್ಥಿಗಳ ಪಟ್ಟಿಯನ್ನು ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಂತರ್ಜಾಲದಲ್ಲಿ ಪ್ರಕಟಿಸಿದೆ. ಸಂಬಂಧಿಸಿದ ವಿದ್ಯಾರ್ಥಿಗಳು ರಾಜ್ಯ ಮುಕ್ತ ವಿವಿ ಅಂತರ್ಜಾಲ ಢಿಢಿಢಿ.್ಞಡ್ಟ್ಡಟಣಡ್ಟ್ಠಜ.ಜಜ್ಡ.್ಝಟಿನಲ್ಲಿ ನೋಡಬಹುದು. ವಿವರಕ್ಕೆ ಸದರಿ ಕಚೇರಿ ದೂ. 2519948, 2519919 ಸಂಪರ್ಕಿಸಬಹುದು.
ಕೃಷಿ ಪರಿಕರಗಳ ವೃದ್ಧಿಗೆ ಹೂಡಿಕೆ
ಮೈಸೂರು: ಇಟಲಿ ಮೂಲದ ಅಂತಾರಾಷ್ಟ್ರೀಯ ಸಮೂಹವಾದ ಮಷಿಯೊ ಗಸ್ಪಾರ್ಡೊ ಇಂಡಿಯಾ ಪ್ರೈವೇಟ್ ಲಿಮಿಟೆಡ್ನಿಂದ ಭಾರತದಲ್ಲಿ 30 ಸಾವಿರ ಘಟಕಗಳ ಸ್ಥಾಪನೆಯೊಂದಿಗೆ ಕೃಷಿ ಪರಿಕರಗಳ ಸಾಮರ್ಥ್ಯ ವೃದ್ಧಿಗೆ ಅಸ್ತಿತ್ವ ವಿಸ್ತರಿಸಲು 2017ರವರೆಗೆ 300 ಕೋಟಿ ಹೂಡಿಕೆಗೆ ಚಿಂತನೆ ನಡೆಸಿದೆ. ಭಾರತದಲ್ಲಿ ಇಟಲಿ ರಾಯಭಾರಿಯಾಗಿರುವ ಡೇನಿಲ್ ಮನ್ಸಿನಿ, ಸಮೂಹದ ಉಪಾಧ್ಯಕ್ಷ ಆಂಡ್ರಿಯಾ ಮಷಿಯೊ ಮತ್ತು ಮಷಿಯೊ ಗಸ್ಪಾರ್ಡೊ ಭಾರತ ಕೇಂದ್ರದ ಉಪಾಧ್ಯಕ್ಷ ರಿಯುಲಿನಿ ಅಲೆಸಿಯೊ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸುವ ಮೂಲಕ ತನ್ನ ಮೊದಲ ವಾರ್ಷಿಕೋತ್ಸವ ಆಚರಿಸಿದೆ.
ನಾನಾ ತರಬೇತಿಗೆ ಅರ್ಜಿ ಆಹ್ವಾನ
ಮೈಸೂರು: ಜಯಲಕ್ಷ್ಮೀಪುರಂನ ವಿಕಾಸ ಅಕಾಡೆಮಿ ವತಿಯಿಂದ ಅ.7ರಿಂದ ಐಬಿಪಿಎಸ್ ನಡೆಸುವ ಸಾಮಾನ್ಯ ಲಿಖಿತ ಪರೀಕ್ಷೆ ತರಬೇತಿ ಪ್ರಾರಂಭವಾಗಲಿದೆ. ಆಸಕ್ತ ವಿದ್ಯಾರ್ಥಿಗಳು ವಿವರಕ್ಕೆ ಎಸ್. ಹಂಪೇಶ್, ಮೊ. 99005 65993 ಸಂಪರ್ಕಿಸಬಹುದು. ಕುವೆಂಪುನಗರದ ಎಜ್ಯುಕೇರ್ ಟೆಕ್ನಾಲಜಿಸ್ ಮತ್ತು ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮತಿಯಿಂದ ಟೆಕ್ನಿಕಲ್ ವರ್ಕ್ಷಾಪ್ ಆನ್ ಹಾರ್ಡ್ವೇರ್ ಮತ್ತು ನೆಟ್ ವರ್ಕಿಂಗ್ ತರಬೇತಿ ನೀಡಲಿದೆ. ಅ.17ರಿಂದ ತರಬೇತಿ ಆರಂಭವಾಗಲಿದೆ. ವಿವರಕ್ಕೆ ದೂ. 4281058, ಮೊ. 99455 00027 ಸಂಪರ್ಕಿಸಬಹುದು. ಹೆಬ್ಬಾಳ್ನ ವಿ-ಲೀಡ್ ಸಂಸ್ಥೆ ವತಿಯಿಂದ ಸಕಾಲ ಮತ್ತು ಮಾಹಿತಿ ಹಕ್ಕು ಕುರಿತು ಕಾರ್ಯಾಗಾರ ಹಮ್ಮಿಕೊಂಡಿದೆ. ವಿವರಕ್ಕೆ ಮೊ. 99454 94637 ಸಂಪರ್ಕಿಸಬಹುದು. ನೇತಾಜಿ ಎಜುಕೇಷನ್ ಫೌಂಡೇಷನ್ ವತಿಯಿಂದ ಐಬಿಪಿಎಸ್ ಬ್ಯಾಂಕಿಂಗ್ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಎರಡು ತಿಂಗಳ ತರಬೇತಿ ನೀಡಲಿದೆ. ವಿವರಕ್ಕೆ ಮೊ. 99806 39953 ಸಂಪರ್ಕಿಸಿ.
ಪಿಯು ಕಾಲೇಜು ಆರಂಭಕ್ಕೆ ಅರ್ಜಿ
ಮೈಸೂರು: ಪದವಿ ಪೂರ್ವ ಶಿಕ್ಷಣ ನಿಯಮದನ್ವಯ 2014-15ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದಲ್ಲಿ ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಇಚ್ಛಿಸುವ ಅರ್ಹ ಸಂಸ್ಥೆಗಳು ಮತ್ತು ಟ್ರಸ್ಟ್ಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಡಿಡಿಪಿಯು ಕೆ.ಎಂ. ಪುಟ್ಟು ತಿಳಿಸಿದ್ದಾರೆ. ಅರ್ಜಿ ನಮೂನೆಯಲ್ಲಿ ನ.7ರ ನಂತರ ಹಾಗೂ ನ.16ರೊಳಗೆ ಹೆಸರು ನೋಂದಾಯಿಸಿಕೊಳ್ಳಲು ಜಂಟಿ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು. ಇವರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆ ಮತ್ತು ವಿವರಕ್ಕೆ ವೆಬ್ಸೈಟ್ ವಿಳಾಸ ಢಿಢಿಢಿ.ಠ್ಡಜ.್ಞಛ್ಠ.ಟ್ಝ್ಛಿ.್ಝಟಿ ಅಥವಾ ಪಿಯು ಇಲಾಖೆಯ ಉಪ ನಿರ್ದೇಶಕರ ಕಚೇರಿಯಿಂದ ಪಡೆಯಬಹುದು.
ಅಫ್ರೋಜ್ ಪಾಷಗೆ ಸನ್ಮಾನ
ಮೈಸೂರು: ಟಿಪ್ಪು ಸುಲ್ತಾನ್ ಶಹೀದ್ ಅವರ 221ನೇ ಗಂಧ ಉರುಸ್ ಷರೀಫ್ ಆಚರಣೆಯ ಅಂಗವಾಗಿ ನಗರದ ಮದರಸ-ಇ-ಖುವ್ವತುಲ್ ಇಸ್ಲಾಂನ ಕಾರ್ಯದರ್ಶಿ ಅಫ್ರೋಜ್ ಪಾಷ ಅವರನ್ನು ಶಾಸಕ ತನ್ವೀರ್ ಸೇಠ್ ಸನ್ಮಾನಿಸಿದರು. ಅವರು ಕಳೆದ 28 ವರ್ಷಗಳಿಂದಲೂ ಹಜರತ್ ಟಿಪ್ಪು ಸುಲ್ತಾನ್ ಶಹೀದ್ ಅವರ ಗಂಧದ ಉರಸ್ ಆಚರಿಸಿಕೊಂಡು ಬರುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

