ಮೈಸೂರು

ಪಿರಿಯಾಪಟ್ಟಣದಲ್ಲೂ ಬೊಂಬೆಯಾಟ

Published On :


ಕ.ಪ್ರ.ವಾರ್ತೆ   ಪಿರಿಯಾಪಟ್ಟಣ   ಅ. 11
ದಸರಾ ಮಹೋತ್ಸವದ ಆಚರಣೆಗಳಲ್ಲೊಂದಾದ ಬೊಂಬೆ ಕೂರಿಸುವ ಸಂಪ್ರದಾಯ ಕೇವಲ ಮೈಸೂರಿಗೆ ಮಾತ್ರ ಸೀಮಿತವಲ್ಲ, ಅದು ಗ್ರಾಮಾಂತರ ಪ್ರದೇಶದ ಮನೆಗಳಲ್ಲಿಯೂ ಬಹು ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗಿದ್ದು, ಅದರಂತೆಯೇ ಪಟ್ಟಣದ ವೈದ್ಯನಾಥೇಶ್ವರ ಬಡಾವಣೆಯ ಗೀತಾಕೃಷ್ಣ ಅವರ ಮನೆಯಲ್ಲಿಯೂ ಅದ್ದೂರಿಯಾಗಿ ಬೊಂಬೆಗಳನ್ನು ಪ್ರದರ್ಶನಕ್ಕೆ ಪ್ರತಿ ವರ್ಷ ಇಡಲಾಗುತ್ತಿದೆ.
ನವರಾತ್ರಿ ಪೂಜಾ ಕಾರ್ಯಕ್ರಮಗಳನ್ನು ಸಾಂಪ್ರದಾಯಕ ರೀತಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಗೀತಾಕೃಷ್ಣ ಅವರ ಬೊಂಬೆ ಸಂಗ್ರಹದಲ್ಲಿ ಸುಮಾರು 70 ವರ್ಷ ಹಳೆಯದು ಎನ್ನಲಾದ ಕಂಚಿನಿಂದ ಮಾಡಲ್ಪಟ್ಟಿರುವ ಮಕ್ಕಳ ಆಟಿಕೆಗಳಾದ ಒಲೆ, ಕುಟ್ನಿ ಸಾಮಾಗ್ರಿಗಳು ಹಾಗೂ ತಮಿಳುನಾಡಿನಿಂದ ತಂದಿರುವ ಶ್ರೀರಂಗ ಮತ್ತು ಲಕ್ಷ್ಮಿ ವಿಗ್ರಹಗಳು, ವಿಷ್ಣುವಿನ ದಶಾವತಾರದ ಮತ್ಸು, ಕೂರ್ಮ, ವರಹಾ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ ಹಾಗೂ ಕಲ್ಕಿ ಅವತಾರದ ಮಣ್ಣಿನ ಮೂರ್ತಿಗಳು, ದೆಹಲಿಯ ಆಗ್ರಾದಿಂದ ತರಲಾಗಿರುವ ಅಜಂತಾ ಎಲ್ಲೋರದ ಶಿಲಾಬಾಲಕೆಯರ ಬೊಂಬೆಗಳಿವೆ.
ಬೊಂಬೆ ಪ್ರದರ್ಶನ ಹಾಗೂ ಬೊಂಬೆ ಪೂಜೆಯ ಕೇಂದ್ರ ಬಿಂದು ಎನ್ನಲಾಗುವ ತಿರುಪತಿಯಿಂದ ಖರೀದಿಸಿದ್ದು ಎನ್ನಲಾದ 80 ವರ್ಷಗಳ ಹಳೆಯ ಪಟ್ಟಣದ ಬೊಂಬೆಗಳಾದ ಪಟ್ಟದ ರಾಜಾ ಪಟ್ಟಣ ರಾಣಿ ಬೊಂಬೆಗಳು, ಬಳಪದ ಕಲ್ಲಿನ ಬೊಂಬೆಗಳು, ಚಾಮುಂಡಿ ಬೆಟ್ಟದ ಗೋಪುರ, ವಸ್ತು ಪ್ರದರ್ಶನದ ಜಾಯಿಂಟ್ ವೀಲ್, ದಸರಾ ಬ್ಯಾಂಡ್ ತಂಡ, ಮಣಿಗಳಿಂದ ಮಾಡಲಾಗಿರುವ ವೀಣೆ, ಗಣೇಶ, ಒಂಟೆ, ತಬಲಾ, ಜಿಂಕೆ, ರಂಗೋಲಿ ಹಾಸು, ನವಿಲು, ತೋರಣ. ಪಿಂಗಾಣಿಯ ರಾಘವೇಂದ್ರ ಮತ್ತು ಪ್ರಾಣಿಗಳ ಬೊಂಬೆಗಳಿವೆ. ಮದುವೆ ದಿಬ್ಬಣ, ಮಂಗಳ ವಾದ್ಯದ ತಂಡ, ಮೈಸೂರು ಜಂಬೂ ಸವಾರಿಯ ಆನೆಯ ಮೇಲೆ ಮಹರಾಜರಿರುವ ಮತ್ತು ಮೆರವಣಿಗೆಯಲ್ಲಿ ಸಾಗಿಬರುತ್ತಿರುವ ಆನೆ, ಒಂಟೆ ಹಾಗೂ ಪೊಲೀಸ್ ಬ್ಯಾಂಡ್ನ ಬೊಂಬೆಗಳನ್ನು ಕಾಣಬಹುದಾಗಿದೆ.
ಜಲಚರಗಳಿವೆ: ಬೊಂಬೆ ಪ್ರದರ್ಶನದಲ್ಲಿ ಕೇವಲ ಭೂಮಿಯ ಮೇಲಿನ ವಸ್ತು ಹಾಗೂ ಪ್ರಾಣಿಗಳಿಗೆ ಮಾತ್ರ ಸೀಮಿತಗೊಳಿಸದೆ ಜಲಚರ ಹಾಗೂ ಸಸ್ತನಿಗಳಾದ ಹಾವು, ಚೇಳು, ಕಪ್ಪೆ, ಜರಿ, ಹಲ್ಲಿ, ಮೀನು, ಘೆಂಡಾಂಮೃಗ, ಆಕ್ಟೋಪಸ್, ಆಮೆಗಳನ್ನು ಕಾಣಬಹುದು.
ಗೀತಾಕೃಷ್ಣ ಅವರು ಸುಮಾರು 28 ವರ್ಷಗಳಿಂದ ಬೊಂಬೆ ಕೂರಿಸುವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದು, ಅ.15ರವರೆಗೆ ಸಾರ್ವಜನಿಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
 ಪಿ.ಎನ್. ಸುಬ್ರಮಣ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.