ನ. 6-7 ರಂದು ಶಾಲಾ ಸಮೀಕ್ಷೆ
ಟಿ. ನರಸೀಪುರ: ತಾಲೂಕಿನ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ನ.6 ಮತ್ತು 7ರಂದು ಮೊದಲ ಹಂತದ ಶಾಲಾ ಸಮೀಕ್ಷೆ ಕಾರ್ಯಕ್ರಮ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ ಹೇಳಿದರು.
ಎರಡು ದಿನಗಳ ಕಾಲ ಶಾಲೆಯ ದಾಖಲಾತಿ ಪರಿಶೀಲನೆ ನಡೆಯುವುದರಿಂದ ಎಲ್ಲಾ ಮುಖ್ಯ ಶಿಕ್ಷಕರು ಕಳೆದ 2001-02ನೇ ಸಾಲಿನಿಂದಲೂ ಶಾಲೆಗಳ ದಾಖಲಾತಿ ನೋಂದಣಿ ಪುಸ್ತಕ, ದಾಖಲಾತಿ ವಹಿಗಳು, ವರ್ಗಾವಣೆಗೆ ಪತ್ರದ ನಕಲು ಪ್ರತಿಗಳು, ತರಗತಿ, ಲಿಂಗವಾರು ಹಾಗೂ ವರ್ಗವಾರು ಘೋಷ್ವಾರೆ ಪ್ರತಿಗಳನ್ನು ಕಡ್ಡಾಯವಾಗಿ ಸಿದ್ಧಪಡಿಸಿಟ್ಟುಕೊಳ್ಳಬೇಕು.
ಎರಡನೇ ಹಂತದಲ್ಲಿ ನ.13 ರಿಂದ 17ರವರೆಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಮನೆ ಮನೆ ಸಮೀಕ್ಷೆ ನಡೆಯುವುದರಿಂದ ಶಾಲೆ ಬಿಟ್ಟಿರುವ ಮಕ್ಕಳ ವಿವರದ ಪಟ್ಟಿಯನ್ನು ಮುಖ್ಯ ಶಿಕ್ಷಕರು ಶಾಲಾ ಸಮೀಕ್ಷೆ ಪರಿಶೀಲನೆ ವೇಳೆ ಹಾಜರುಪಡಿಸಬೇಕು. ಶಾಲೆಯ ದಾಖಲೆ ಸಿದ್ಧತೆಯನ್ನು ಇನ್ನೆರಡು ದಿನಗಳಲ್ಲಿ ಮಾಡಿಕೊಳ್ಳಬೇಕು.
ಶಿಕ್ಷಣ ಇಲಾಖೆಯ ಮಹತ್ವದ ಕಾರ್ಯಕ್ರಮ ಇದಾಗಿರುವುದರಿಂದ ಅ.27 ಮತ್ತು 28ರೊಳಗೆ ದಾಖಲಾತಿ ಸಿದ್ಧಪಡಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ ತಿಳಿಸಿದ್ದಾರೆ.
ಅ.29 ರಂದು ಸಭೆ: ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯು ಅ. 29ರಂದು ಗುರು ಭವನದಲ್ಲಿ ನಡೆಯಲಿದೆ. ಬೆಳಗ್ಗೆ 10ಕ್ಕೆ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರ ಸಭೆ, ಮಧ್ಯಾಹ್ನ 2ಕ್ಕೆ ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಭೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

