ಮೈಸೂರು

ನಿರ್ಭಯಳ ನ್ಯಾಯಕ್ಕಾಗಿ ಓಟ

Published On :

ಕ.ಪ್ರ.ವಾರ್ತೆ , ಮೈಸೂರು , ಅ. 27
'ನಿರ್ಭಯಳ ನ್ಯಾಯಕ್ಕಾಗಿ ಓಟ' ಎಂಬ ಶೀರ್ಷಿಕೆಯಡಿಯಲ್ಲಿ ಮಹಾಜನ ಪ್ರಥಮ ದರ್ಜೆ ಕಾಲೇಜು ಬಿಬಿಎಂ ವಿಭಾಗವು ಆಯೋಜಿಸಿದ್ದ ಮಿನಿ ಮ್ಯಾರಾಥಾನ್‌ನಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಜಯಲಕ್ಷ್ಮಿಪುರಂನ ಮಹಾಜನ ಕಾಲೇಜಿನ ಜಗದೀಶ್ ಪ್ರಸಾದ್ ಕ್ರೀಡಾಂಗಣದಲ್ಲಿ ಈ ಮ್ಯಾರಥಾನ್‌ಗೆ ನಗರ ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ಚಾಲನೆ ನೀಡಿದರು.
ನಂತರ ಮಾತನಾಡಿ, ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆಗಳು ದೇಶದಲ್ಲಿ ಮರುಕಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಅತ್ಯಾಚಾರದ ವಿರುದ್ಧ ಸಂಘಟಿತರಾಗಿ ಹೋರಾಡಬೇಕು. ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಸುವ ಮೂಲಕ ಜನತೆಗೆ ಒಳ್ಳೆಯ ಸಂದೇಶ ನೀಡಬೇಕು ಎಂದು ಡಾ. ಸಲೀಂ ಹೇಳಿದರು.
ಮೇಯರ್ ಎನ್.ಎಂ. ರಾಜೇಶ್ವರಿ, ಕೆಎಂಎಫ್ ನಿರ್ದೇಶಕ ಉಮಾಶಂಕರ್, ಮಹಾಜನ ವಿದ್ಯಾಸಂಸ್ಥೆಯ ಅಧ್ಯಕ್ಷ ಆರ್. ವಾಸುದೇವಮೂರ್ತಿ, ಗೌರವ ಕಾರ್ಯದರ್ಶಿ ಡಾ. ಪಿ.ಆರ್. ನಾಗ ಶ್ರೀನಿವಾಸ, ಕಾಲೇಜು ಪ್ರಾಂಶುಪಾಲ ಪ್ರೊ. ಕೆ.ವಿ. ಪ್ರಭಾಕರ ಇದ್ದರು.
ವಿಜೇತರು: ಈ ಮಿನಿ ಮ್ಯಾರಥಾನ್‌ನಲ್ಲಿ ವಿಜೇತರ ಪಟ್ಟಿ ಹೀಗಿದೆ. 10 ಕಿ.ಮೀ. ಪುರುಷರ ವಿಭಾಗ- ನಂದಗೋಪಾಲ್, ಸುಧೀರ್ ಶರ್ಮ, ಸಂಜೀವ್‌ಕುಮಾರ್, ನಂಜುಂಡೇಗೌಡ, ತನುಜ್‌ಕುಮಾರ್. ಮಹಿಳಾ ವಿಭಾಗ- ತಿಪ್ಪವ್ವ ಸಣ್ಣಕ್ಕಿ, ಸಿ. ಪೂರ್ಣಿಮಾ ಮತ್ತು ರಶ್ಮಿ.
5 ಕಿ.ಮೀ. ಪುರುಷರ ವಿಭಾಗ- ಬಿ. ರಾಹುಲ್, ಭರತ್ ನಾಗ್, ಎಂ. ಪುನೀತ್, ಮಂಜುನಾಥ್ ಮತ್ತು ಅರವಿಂದ್. ಮಹಿಳಾ ವಿಭಾಗ- ಶಾರದಾ ರಾಣಿ ಎಸ್. ದೇಸಾಯಿ, ಚೈತ್ರಾ ಮತ್ತು ಎಚ್.ಆರ್. ತಾರಾಮಣಿ. ಮಕ್ಕಳ ವಿಭಾಗ- ವಿ. ಸಂಜಯ್‌ಕುಮಾರ್, ಟಿ. ಕವನ, ಸುಪ್ರೀತಾ, ಕಿಶೋರ್ ಮತ್ತು ಜಶ್ವಂತ್. ಹಿರಿಯ ವಿಭಾಗ- ರಿತೇಶ್, ಅಲ್ ಸಮೀರ್ ಮತ್ತು ಕ್ರೆಗ್ ಫ್ಲೆಚರ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.